ಮೂರನೇ ಟೆಸ್ಟ್​​ನಲ್ಲಿ ಇನ್ನಿಂಗ್ಸ್​ ಮುನ್ನಡೆ ಸಾಧಿಸಿದ ಟೀಮ್​ ಇಂಡಿಯಾ

ಮೊದಲ ದಿನಾ ಆರು ವಿಕೆಟ್​ ಗೆ 307 ರನ್​​ಗಳಿಂದ ಮುಂದುವರೆಸಿದ ಟೀಮ್​ ಇಂಡಿಯಾ ಬೃಹತ್​ ಮೊತ್ತದ ಕನಸಿನೊಂದಿಗೆ ಅಖಾಡಕ್ಕೆ ಇಳಿಯಿತು. ಈ ಪಂದ್ಯದಲ್ಲಿ ಪಾದಾರ್ಪಣೆ ಮಾಡಿದ ರಿಶಬ್​ ಪಂತ್​​, ಬಿಗ್​ ಇನ್ನಿಂಗ್ಸ್​ ಆಡುವ ಸೂಚನೆಯನ್ನು ನೀಡಿದ್ರೂ, ಆದ್ರೆ ಫಲಿಸಲಿಲ್ಲ. 7ನೇ ವಿಕೆಟ್​​ಗೆ ಅಶ್ವಿನ್​ ಹಾಗೂ ರಿಶಬ್​ ತಾಳ್ಮೆಯ ಬ್ಯಾಟಿಂಗ್ ನಡೆಸುವ ಸೂಚನೆ ನೀಡಿದ್ರು. ಕ್ಲಾಸ್​ ಹೊಡೆತಗಳ ಮುಲಕ ಅಭಿಮಾನಿಗಳ ಮನ ಕದ್ದಿದ್ದ ರಿಶಬ್​​ 51 ಎಸೆತಗಳಲ್ಲಿ 2 ಬೌಂಡರಿ 1 ಸಿಕ್ಸರ್​ ನೆರೆವಿನಿಂದ 24 ರನ್​ ಬಾರಿಸಿ ಔಟ್​ ಆದ್ರು. ಅಶ್ವಿನ್​​ 14 ರನ್​​ಗಳಿಗೆ ಆಟ ಮುಗಿಸಿದ್ರು. ಕೆಳ ಕ್ರಮಾಂಕದ ಆಟಗಾರರು ಸಮಯೋಚಿತ ಆಟ ಆಡದ ಕಾರಣ ಟೀಮ್​ ಇಂಡಿಯಾ ಪಟ ಪಟನೆ ವಿಕೆಟ್​ ಕಳೆದುಕೊಂಡಿತು. ಕೇವಲ 6 ರನ್​​ಗಳ ಅಂತರದಲ್ಲಿ ವಿರಾಟ್​ ಪಡೆ ಕೊನೆಯ 4 ವಿಕೆಟ್​​ ಗಳನ್ನು ಕಳೆದು ಕೊಂಡಿತು.

ಟೀಮ್​ ಇಂಡಿಯಾ ಮೊದಲ ಇನ್ನಿಂಗ್ಸ್​​ನಲ್ಲಿ ರೂಟ್​​ ಬಳಗಕ್ಕೆ ಶಾಕ್​ ನೀಡುವ ಇರಾದೆ ಇಟ್ಟುಕೊಂಡಿತು. ಅದ್ರಂತೆ, ಶಿಸ್ತು ಬದ್ಧ ದಾಳಿ ನಿರ್ವಹಿಸಲು ಮುಂದಾಯಿತು. ಆದ್ರೆ, ಮೊಹಮ್ಮದ್​ ಶಮಿ ಹಾಗೂ ಜಸ್ಪ್ರಿತ್​ ಬೂಮ್ರಾ ದಾಳಿಯನ್ನು ಗುರುತಿಸಿ ದಂಡಿಸುವಲ್ಲಿ ಆಂಗ್ಲರ ಬ್ಯಾಟ್ಸ್​​ಮನ್​​​ಗಳು ಸಫಲರಾದ್ರು. ಅಲಿಸ್ಟಾರ್​ ಕುಕ್​ ಹಾಗೂ ಕೀಟನ್​ ಜೇನ್ನಿಂಗ್ಸ್​ ಜೋಡಿ ತಂಡಕ್ಕೆ 54 ರನ್​ ಜೊತೆಯಾಟ ನೀಡಿತು. 12 ಓವರ್​​ಗಳ ವರೆಗೂ ತಾಳ್ಮೆಯ ಬ್ಯಾಟಿಂಗ್ ನಡೆಸಿದ ಕುಕ್​​-ಜೆನ್ನಿಂಗ್ಸ್​ ನಂತರ ದೊಡ್ಡ ಹೊಡೆತಕ್ಕೆ ಮುಂದಾಗಿ ವಿಕೆಟ್​ ಒಪ್ಪಿಸಿದ್ರು. ಕುಕ್​​, ಇಶಾಂತ್ ಶರ್ಮಾಗೆ ವಿಕೆಟ್​ ಒಪ್ಪಿಸಿದ್ರೆ, ಜೆನ್ನಿಂಗ್ಸ್​ ಜಸ್ಪ್ರಿತ್​ ಬೂಮ್ರಾಗೆ ಔಟ್​ ಆದ್ರು.

3ನೇ ವಿಕೆಟ್​​ಗೆ ನಾಯಕ ಜೋ ರೂಟ್​ ಜೊತೆಗೂಡಿದ ಓಲಿ ಪೋಪ್​ ಕಲಾತ್ಮಕ ಆಟದ ಪ್ರದರ್ಶನ ನೀಡುವ ಸೂಚನೆ ನೀಡಿದ್ರು. ಆದ್ರೆ, 10 ರನ್​​ಗಳಿಸಿ ಮುನ್ನುಗುತ್ತಿದ್ದಾಗ ಇಶಾಂತ್​ ಎಸೆತವನ್ನು ಕೆಣಕಿ ರಿಶಬ್​ ಪಂತ್​​ಗೆ ಕ್ಯಾಚ್ ನೀಡಿದ್ರು. ಇನ್ನು ಜೋ ರೂಟ್​ ಮೊದಲ ಬಾರಿಗೆ ಸರಣಿಯಲ್ಲಿ ಬಿಗ್​ ಇನ್ನಿಂಗ್ಸ್​ ಕಟ್ಟುವ ಕನಸು ಕಾಣ್ತಾ ಇದ್ದರು. ಆದ್ರೆ, ಹಾರ್ದಿಕ್​ ಪಾಂಡ್ಯ ಎಸೆತದಲ್ಲಿ ಕನ್ನಡಿಗ ರಾಹುಲ್​ ಆಕರ್ಷಕ ಕ್ಯಾಚ್​ ಪಡೆದ್ರು. ಇದು ಪಂದ್ಯದ ಗತಿಯನ್ನೆ ಬದಲಿಸಿತು. ರೂಟ್​​ ಒಲ್ಲದ ಮನಸ್ಸಿನಿಂದ ಪೆವಿಲಿಯನ್​ ನತ್ತ ಹೆಜ್ಜೆ ಹಾಕಿದ್ರು.

ನಂತರ ಜಾನಿ ಬೇರ್​ಸ್ಟೋ ಹಾಗೂ ಬೆನ್​ ಸ್ಟೋಕ್ಸ್​​ ತಂಡಕ್ಕೆ ಉತ್ತಮ ಕಾಣಿಕೆ ನೀಡುವ ಲೆಕ್ಕಾಚಾರ ಹಾಕಿಕೊಂಡ್ರು. ಕೆಟ್ಟ ಎಸೆತಗಳನ್ನು ದಂಡಿಸುವ ಇರಾದೆಯೊಂದಿಗೆ ತಮ್ಮ ಅನುಭವ ದಾರೆ ಎರೆದು ಬ್ಯಾಟ್ ಮಾಡಿದ ಜೊಡಿ ಜವಾಬ್ದಾರಿ ಮರೆಯಿತು. ಮಧ್ಯಮ ಕ್ರಮಾಂಕದ ಸ್ಟಾರ್​ ಪ್ಲೇಯರ್​ ಬೆನ್​ ಸ್ಟೋಕ್ಸ್​​ ಶಮಿ ಎಸೆತದಲ್ಲಿ ರಾಹುಲ್​​ಗೆ ಕ್ಯಾಚ್​ ನೀಡಿದ್ರು. ನಂತರ ಅಂಗಳದಲ್ಲಿ ಹಾರ್ದಿಕ್​ ಪಾಂಡ್ಯ ತಮ್ಮ ಶಿಸ್ತು ಬದ್ಧ ದಾಳಿಯ ಪ್ರದರ್ಶನ ನೀಡಲು ಮುಂದಾದ್ರು. ಹಾರ್ದಿಕ್​ ಎಸೆದ ಪಂದ್ಯದ 31ನೇ ಓವರ್​​ನಲ್ಲಿ ಜಾನಿ ಬೇರ್​ಸ್ಟೋ ಹಾಗೂ ಕಳೆದ ಪಂದ್ಯದಲ್ಲಿ ಶತಕ ಬಾರಿಸಿದ್ದ ಕ್ರಿಸ್​ ವೋಕ್ಸ್​​ಗೆ ಗಾಳ ಹಾಕಿದ್ರು. ಮತ್ತೆ ಹಾರ್ದಿಕ್​ ಕರಾರುವಕ್ ದಾಳಿ ಸಂಘಟಿಸಿದ್ರು. ಕೆಳ ಕ್ರಮಾಂಕದ ಬ್ಯಾಟ್ಸ್​​ಮನ್ಸ್​ ವಿರುದ್ಧ ಸೊಗಸಾದ ದಾಳಿಯನ್ನು ನಿರ್ವಹಣೆ ಮಾಡಿದ ಪಾಂಡ್ಯ, ಆದಿಲ್​ ರಶೀದ್​ ಹಾಗೂ ಸ್ಟುವರ್ಟ್​ ಬ್ರಾಡ್​ಗೆ ಖೆಡ್ಡಾ ತೋಡಿದ್ರು. ಪರಿಣಾಮ ಮೂರು ಓವರ್​ ಅಂತರದಲ್ಲಿ ನಾಲ್ಕು ವಿಕೆಟ್​ ಕಳೆದು ಕೊಂಡ ಆತಿಥೇಯ ತಂಡ ಸಂಕಷ್ಟಕ್ಕೆ ಸಿಲುಕಿತು.

ಅನುಭವಿ ಜೋಸ್​ ಬಟ್ಲರ್​ ಕೊಂಚ ಕಾಲ ಟೀಮ್​ ಇಂಡಿಯಾದ ಬೌಲರ್​​ಗಳನ್ನು ಕಾಡಿದ್ರು. ಟೀಮ್​ ಇಂಡಿಯಾದ ಬೌಲರ್​ಗಳ ವಿರುದ್ಧ ಅಬ್ಬರ ಪ್ರದರ್ಶನ ನೀಡಿದ ಬಟ್ಲರ್​ ತಂಡದ ಹಿನ್ನಡೆಯ ಅಂತರವನ್ನು ಕಡಿಮೆ ಮಾಡಿದ್ರು. ಬಟ್ಲರ್​ 32 ಎಸೆತಗಳಲ್ಲಿ 3 ಬೌಂಡರಿ ಹಾಗೂ 2 ಸಿಕ್ಸರ್​ ನೆರವಿನಿಂದ 39 ರನ್​ ಬಾರಿಸಿ ಔಟ್​ ಆದ್ರು. ಅಂತಿಮವಾಗಿ ಇಂಗ್ಲೆಂಡ್​ ತಂಡ ಮೊದಲ ಇನ್ನಿಂಗ್ಸ್​​ನಲ್ಲಿ 161 ರನ್​​ಗಳಿಗೆ ಆಲೌಟ್​ ಆಯಿತು. ಟೀಮ್​ ಇಂಡಿಯಾ ಪರ ಹಾರ್ದಿಕ್​ ಪಾಂಡ್ಯ 5, ಜಸ್ಪ್ರಿತ್​ ಬೂಮ್ರಾ, ಇಶಾಂತ್​ ಶರ್ಮಾ ತಲಾ ಎರಡು ವಿಕೆಟ್​ ಪಡೆದ ಅಬ್ಬರಿಸಿದ್ರು.

ಮೊದಲ ಇನ್ನಿಂಗ್ಸ್​​ನಲ್ಲಿ ಸಿಕ್ಕ ಮುನ್ನಡೆ ಬೂಸ್ಟ್​ ಟೀಮ್​ ಇಂಡಿಯಾ ಆಟಗಾರರ ಮೇಲೆ ಎದ್ದು ಕಾಣುತ್ತಿತ್ತು. ಟೀಮ್​ ಇಂಡಿಯಾದ ಆರಂಭಿಕರಾದ ಶಿಖರ್​ ಧವನ್​ ಹಾಗೂ ಕೆ.ಎಲ್​ ರಾಹುಲ್​ ಇಂಗ್ಲೆಂಡ್​ ಹೆಣೆದುಕೊಂಡಿದ್ದ ತಂತ್ರಕ್ಕೆ ಪ್ರತಿಯಾಗಿ ಬ್ಯಾಟ್​ ಬೀಸಿದ್ರು. ಈ ಜೋಡಿ ನಾಟಿಂಗ್​ ಹ್ಯಾಮ್​ ಅಂಗಳದಲ್ಲಿ ಬಿಗ್​ ಇನ್ನಿಂಗ್ಸ್​ ಕಟ್ಟದೇ ಇದ್ರೂ ಸಹ ನಾಯಕ ಮನ ಗೆಲ್ಲುವಲ್ಲಿ ಸಫಲವಾಯಿತು. 11.2 ಓವರ್​ಗಳಲ್ಲಿ ಶಿಖರ್​-ರಾಹುಲ್​ ಜೋಡಿ ತಂಡಕ್ಕೆ 60 ರನ್ ಕಾಣಿಕೆ ನೀಡಿತು. ರಾಹುಲ್​ ಈ ಪಂದ್ಯದಲ್ಲಿ 36 ರನ್ ಬಾರಿಸಿ ಔಟ್​ ಆದ್ರೆ, ಶಿಖರ್​ ಧವನ್​ 44 ರನ್​ ಗಳಿಗೆ ಆಟ ಮುಗಿಸಿದ್ರು.

ಚೇತೇಶ್ವರ್​ ಪೂಜಾರ ಇದೇ ಮೊದಲ ಬಾರಿಗೆ ತಮ್ಮ ಕಾಲತ್ಮಕ ಹೊಡೆತಗಳ ಮೂಲಕ ರನ್​ ಕಲೆ ಹಾಕುತ್ತಿದ್ದು, ಬಿಗ್​ ಇನ್ನಿಂಗ್ಸ್​ ಕಟ್ಟುವ ಬೀಜ ಬಿತ್ತಿದ್ದಾರೆ. ಇಂದಿಗೆ ಪೂಜಾರ ಹಾಗೂ ವಿರಾಟ್​​ ಬ್ಯಾಟಿಂಗ್ ಕಾಯ್ದುಕೊಂಡಿದ್ದು, ಬೃಹತ್​ ಮುನ್ನಡೆಯ ಕನಸನ್ನು ಕಾಣುತ್ತಿದ್ದಾರೆ. ಎರಡನೇ ದಿನ 16 ವಿಕೆಟ್​ ಬಿದ್ದಿದ್ದು ವಿಶೇಷವಾಗಿತ್ತು. ಇಂಗ್ಲೆಂಡ್​​ಗೆ ಸವಾಲಿನ ಮೊತ್ತ ನೀಡಲು ಟೀಮ್​ ಇಂಡಿಯಾ ಪ್ಲಾನ್ ಮಾಡಿಕೊಂಡಿದ್ದು, ಮೊದಲಾವಧಿಯಲ್ಲಿ ಎಚ್ಚರಿಕೆಯ ಆಟಕ್ಕೆ ಮಣೆ ಹಾಕಬೇಕಿದೆ.

0

Leave a Reply

Your email address will not be published. Required fields are marked *