ಪಾಕ್ ರಾಯಭಾರಿಗಳೊಂದಿಗೆ ಕಾಂಗ್ ನಾಯಕರು ಗೌಪ್ಯ ಮಾತುಕತೆ ನಡೆಸಿಲ್ಲ – ಹಿರಿಯ ಪತ್ರಕರ್ತ

ಭೇಟಿಯ ವರದಿ ವಿಶೇಷ ರಕ್ಷಣಾ ಪಡೆಯ ಬಳಿ ಸಿಗುತ್ತಂತೆ ಎಂದ ಪ್ರೇಮ್ ಶಂಕರ್

ಕಾಂಗ್ರೆಸ್ ನಾಯಕರ ವಿರುದ್ಧದ ಆಧಾರ ರಹಿತ ಆರೋಪ ಮಾಡಿದರಾ ಪ್ರಧಾನಿ ಮೋದಿ?

ನವದೆಹಲಿ: ಪಾಕ್ ರಾಯಭಾರಿಗಳೊಂದಿಗೆ ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಮತ್ತು ಮಾಜಿ ಉಪರಾಷ್ಟ್ರಪತಿ ಹಮೀದ್ ಅನ್ಸಾರಿಯವರು ಭೇಟಿಯಾದ ಔತಣಕೂಟದ ವೇಳೆ ಯಾವುದೇ ಗೌಪ್ಯ ವ್ಯವಹಾರ ನಡೆದಿಲ್ಲ ಎಂದು ಹಿರಿಯ ಪತ್ರಕರ್ತ ಪ್ರೇಮ್ ಶಂಕರ್ ಝಾ ಹೇಳಿದ್ದಾರೆ. ಇಬ್ಬರಿಗೂ ಜೆಡ್ ಪ್ಲಸ್ ಭದ್ರತೆ ಒದಗಿಸಲಾಗಿದೆ. ಆದ್ದರಿಂದ ಅಂದಿನ ಸಂಪೂರ್ಣ ವರದಿಯನ್ನು ವಿಶೇಷ ರಕ್ಷಣಾ ತಂಡಕ್ಕೆ ಒದಗಿಸಲಾಗುತ್ತದೆ ಎಂದಿದ್ದಾರೆ. ಪಾಕಿಸ್ತಾನದ ಮಾಜಿ ವಿದೇಶಾಂಗ ಅಧಿಕಾರಿ ಖುರ್ಷಿದ್ ಕಸೂರಿಯವರಿಗೆ ಮಣಿಶಂಕರ್ ಅಯ್ಯರ್ ಅವರು ಔತಣಕೂಟ ಏರ್ಪಡಿಸಿದ್ದರು. ಮಾಜಿ ಪ್ರಧಾನಿ ಮನಮೋಹನ್ ಸಿಂಗ್, ಮಾಜಿ ಉಪರಾಷ್ಟ್ರಪತಿ ಹಮೀದ್ ಅನ್ಸಾರಿ ಮತ್ತು ನಿವೃತ್ತ ಹಿರಿಯ ರಾಜತಾಂತ್ರಿಕ ಅಧಿಕಾರಿಗಳು ಅಂದಿನ ಔತಣಕೂಟದಲ್ಲಿ ಭಾಗಿಯಾಗಿದ್ದರು ಎಂದು ಅವರು ಹೇಳಿದ್ದಾರೆ. ಈ ಮೂಲಕ ಪ್ರಧಾನಿ ನರೇಂದ್ರ ಮೋದಿಯವರ ಆರೋಪ ಆಧಾರರಹಿತ ಎಂದು ಅವರು ಪರೋಕ್ಷವಾಗಿ ಹೇಳಿದಂತಾಗಿದೆ.

0

Leave a Reply

Your email address will not be published. Required fields are marked *