ಜಿಲ್ಲಾ ಉಪವಿಭಾಗಾಧಿಕಾರಿ ಮನೆಯಲ್ಲಿ ಕಳ್ಳತನ

ದಾವಣಗೆರೆ: ಜಿಲ್ಲೆಯ ಉಪ ವಿಭಾಗಾಧಿಕಾರಿ ಕ್ವಾಟ್ರಸ್ ನಲ್ಲಿ ಕಳ್ಳತನವಾದ ಘಟನೆ ತಡರಾತ್ರಿ ನಡೆದಿದೆ. ಈ ಹಿಂದೆ ದಾವಣಗೆರೆ ಜಿಲ್ಲಾ ಉಪವಿಭಾಗಾಧಿಕಾರಿಯಾಗಿ ಬಿ.ಟಿ. ಕುಮಾರಸ್ವಾಮಿ ಕೆಲಸ ನಿರ್ವಹಿಸುತ್ತಿದ್ದರು, ನಂತರ ಎರಡು ತಿಂಗಳ ಹಿಂದೆ ಅವರು ಬಳ್ಳಾರಿ ಜಿಲ್ಲೆಗೆ ವರ್ಗಾವಣೆಯಾಗಿ ಅವರ ಕ್ವಾಟ್ರಾಸ್ ಖಾಲಿ ಮಾಡಿರಲಿಲ್ಲ. ಅಲ್ಲದೆ ಹೊಸದಾಗಿ ಬಂದಂತ ಉಪ ವಿಭಾಗಾಧಿಕಾರಿ ಬಾಡಿಗೆ ಮನೆಯಲ್ಲಿ ವಾಸ ಮಾಡುತ್ತಿದ್ದರು. ಇದನ್ನ ದುರ್ಬಳಕೆ ಮಾಡಿಕೊಂಡ ಖದೀಮರು, ಕಳೆದ ರಾತ್ರಿ ಎಸಿ ಕ್ವಾಟ್ರಸ್ ಗೆ ನುಗ್ಗಿ ಎಲ್.ಇ.ಡಿ ಟಿವಿಯನ್ನು ಕದ್ದೋಯ್ದಿದ್ದಾರೆ. ಈ ಬಗ್ಗೆ ಬಡಾವಣೆ ಠಾಣೆಯಲ್ಲಿ ದೂರು ದಾಖಲಾಗಿದ್ದು, ಅರೋಪಿಗಳ ಪತ್ತೆಗೆ ಬಲೆ ಬೀಸಿದ್ದಾರೆ.

ಮಲ್ಲಿಕಾರ್ಜುನ ಕೈದಾಳೆ, ಸುದ್ದಿ ಟಿವಿ ದಾವಣಗೆರೆ

0

Leave a Reply

Your email address will not be published. Required fields are marked *