ದಿ ವಿಲ್ಲನ್ … ಇದು ಕನ್ನಡ ಚಿತ್ರರಂಗದ ಬಹುಕೋಟಿ ವೆಚ್ಚದ ಅದ್ದೂರಿ ಸಿನಿಮಾ , ಈ ಸಿನಿಮಾ ಆರಂಬವಾಗಿದ್ದೆ ತಡ ಪ್ರೇಮ್ ಅವರ ಪಬ್ಲಿಸಿಟಿ ಬಗ್ಗೆ ಟಾಕ್ ಕೂಡ ಶುರುವಾಯಿತು . ಆದ್ರೆ ಇದೀಗ ವಿಲ್ಲನ್ ಅಡ್ಡ ದಿಂದ ಮತ್ತೊಂದು ಅಪ್ ಡೇಟ್ ಹೊರಬಿದ್ದಿದೆ . ಹೇಳೆಕೇಳಿ ಕನ್ನಡದ ಸ್ಟೈಲಿಶ್ ನಿರ್ದೇಶಕ ಅನಿಸಿಕೊಂಡಿರುವ ಪ್ರೇಮ್ ಅವರ ಚಿತ್ರ ಅಂದ ಮೇಲೆ ಹಾಡುಗಳ ಅಬ್ಬರ ಜೋರಾಗೆ ಇರುತ್ತೆ . ಚಿತ್ರದ ಒಂದು ಅದ್ದೂರಿ ಇಂಟ್ರೋ ಸಾಂಗ್ ಚಿತ್ರೀಕರಣದ ಕೆಲವು ಫೋಟೋಗಳು ಇದೀಗ ವಿಲ್ಲನ್ ಟೀಮ್ ಬಿಡುಗಡೆಮಾಡಿದೆ . ಅದ್ದೂರಿ ವೆಚ್ಚದ ಸೆಟ್ ನಲ್ಲಿ ಸುದೀಪ್ ಅವರ ಇಂಟ್ರೋ ಸಾಂಗ್ ಚಿತ್ರೀಕರಣ ಮಾಡಲಾಯಿತು .ಈ ಸೆಟ್ ನಲ್ಲಿ ದಿಫ್ಫ್ರೆಂಟ್ ಲುಕ್ ನಲ್ಲಿ ಕಿಚ್ಚ ಸಕತ್ ಆಗಿ ಮಿಂಚ್ತಾ ಇದ್ರು .
ಕಿಚ್ಚ ಸುದೀಪ್ ಅವರ ಈ ಹೊಸ ಅವತಾರ ನೋಡಿ ಅವರ ಫ್ಯಾನ್ಸ್ ಅಂತೂ ಫುಲ್ ಖುಷ್ ಆಗಿದ್ದಾರೆ . ಚಿತ್ರದಲ್ಲಿ ದಿಫ್ಫ್ರೆಂಟ್ ಹೇರ್ ಸ್ಟೈಲ್ ನಿಂದ ಎಲ್ಲರನ್ನ ನಿಬ್ಬೆರಗಾಗಿಸಿದ ಸುದೀಪ್ ಅವ್ರು ಇದೀಗ ಮತ್ತೊಂದು ಹೇರ್ ಸ್ಟೈಲ್ ಹಾಗು ಗಡ್ಡದ ಮೂಲಕ ಅಭಿಮಾನಿಗಳಿಗೆ ಫೋಟೋ ದಲ್ಲೇ ಕಿಕ್ ಕೊಟ್ಟಿದ್ದಾರೆ . ಈ ಲುಕ್ ನೋಡಿದ ಅಭಿಮಾನಿಗಳು .. ಏನ್ .. ಗುರು ನಮ್ ಅಣ್ಣನ್ ಲುಕ್ ಅಂತಾ ಫುಲ್ ಟ್ರೆಂಡಿಂಗ್ ಶುರುವಿಟ್ಟುಕೊಂಡಿದ್ದಾರೆ . ವಿಲ್ಲನ್ ಆರಂಭವಾದಾಗಿನಿಂದ ಕೇವಲ ಭರವಸೆಗಳನ್ನ ಮಾತ್ರ ನೀಡ್ತಿದ್ದಾರೆ ಪ್ರೇಮ್ . ಆದ್ರೆ ಅವರು ಈವರೆಗೂ ನೀಡಿದ ಯಾವುದೇ ಭರವಸೆಗಳನ್ನ ಕರೆಕ್ಟ್ ಆಗಿ ಈಡೇರಿಸಿಲ್ಲ . ಇದ್ರಿಂದ ಅಭಿಮಾನಿಗಳು ಪ್ರೇಮ್ ಮೇಲೆ ಸಹಜವಾಗೀನೇ ಗರಂ ಆಗಿದ್ದರೆ . ಆದ್ರೆ ಚಿತ್ರ ಯಾಕ್ ಲೇಟ್ ಆಗ್ತಾ ಇರೋದು ಅನ್ನೋದಕ್ಕೆ ಅಸಲಿ ರೀಸನ್ ಏನು ಅಂದ್ರೆ ? ನಿಚಿತ್ರ ತಾಂತ್ರಿಕ ವಾಗಿ ಈ ಹಿಂದಿನ ಎಲ್ಲ ಚಿತ್ರಗಳಿಂತ ಭಿನ್ನ ವಾಗಿದೆ ಆ ಕಾರಣಕ್ಕೆ ನಿರ್ದೇಶಕ ಪ್ರೇಮ್ ಎಲ್ಲವನ್ನ ಅಚ್ಚುಕಟ್ಟಾಗಿ ಪ್ಲಾನ್ ಮಾಡಿ ಚಿತ್ರವನ್ನ ಪ್ರೇಕ್ಷಕರ ಮುಂದೆ ತರಬೇಕು ಅಂತ ಯೋಚನೆ ಮಾಡ್ತಾ ಇದಾರೆ . ಅಂದಹಾಗೆ ಚಿತ್ರ ಕೆಲ ಗ್ರಾಫಿಕ್ ಹಾಗು ಇತರ ಕೆಲಸಗಳನ್ನ ವಿದೇಶದ ಪ್ರಸಿದ್ಧ ಡಿಸೈನರ್ ಮಾಡುತ್ತಿದ್ದಾರೆ .
ಚಿತ್ರ ಯಾವ್ ಸ್ಟೇಜ್ ನಲ್ಲಿದೆ ಅನ್ನೋದು ಇದೀಗ ಅಭಿಮಾನಿಗಳ ಗೊಂದಲವಾಗಿದೆ . ಒಂದು ಮೂಲಗಳ ಪ್ರಕಾರ ಚಿತ್ರದ ಬಹುತೆಕ ಚಿತ್ರೀಕರಣ ಮುಗಿದಿದೆ ಅಂತೇ . ಚಿತ್ರದಲ್ಲಿ ಸುದೀಪ್ ಅವರ ಭಾಗದ ಎಲ್ಲ ಚಿತ್ರೀಕರಣ ಕಂಪ್ಲೀಟ್ ಆಗಿದೆ . ಇನ್ನು ಶಿವಣ್ಣ ನ ಭಾಗದ ಕೆಲವು ದೃಶ್ಯಗಳು ಹಾಗು ಶಿವಣ್ಣ ನ ಹಾಡುಗಳು ಮಾತ್ರ ಬಾಕಿ ಇವೆ . ಇದರ ಚಿತ್ರೀಕರಣ ಕೂಡಾ ಈಗ ಬಿಡುವಿಲ್ಲದೆ ಭರದಿಂದ ಸಾಗ್ತಿದೆ . ಚಿತ್ರದ ಬಿಡುಗಡೆ ಲೇಟ್ ಆಗ್ತಾ ಇರೋದಕ್ಕೆ ಪ್ರೇಮ್ ಅಭಿಮಾನಿಗಳಿಗೆ ಕ್ಷಮೆ ಕೇಳಿದ್ದಾರೆ . ಈಗಾಗಲೇ ಚಿತ್ರದ ಬಹುತೇಕ ಕೆಲಸ ಮುಗಿದಿವಿ . ಇನ್ನು ಕೆಲವೇ ದಿನಗಳಲ್ಲಿ ಚಿತ್ರದ ಟೀಸರ್ ಬಿಡುಗಡೆ ಮಾಡ್ತೀವಿ ಅನ್ನೋ ಸತ್ಯ ವನ್ನ ಅಭಿಮಾನಿಗಳ ಮುಂದೆ ಬಿಚ್ಚಿಟ್ಟಿದ್ದಾರೆ . ಹಾಗೆ ನೇ ಚಿತ್ರದ ಬಿಡುಗಡೆ ಬಗ್ಗೆ ಒಂದು ಸಣ್ಣ ಕ್ಲೂ ಕೂಡ ಪ್ರೇಮ್ ಬಿಟ್ಟು ಕೊಟ್ಟಿದ್ದಾರೆ . ಈಗ ಚಿತ್ರದ ಶೂಟಿಂಗ್ ಸ್ಪೀಡ್ ನೋಡ್ತಾ ಇದ್ರೆ ಚಿತ್ರ ಜೂನ್ ಅಥವಾ ಜೂಲೈ ನಲ್ಲಿ ರಿಲೀಸ್ ಆಗಲಿದೆ ಅನ್ನೋದು ಬಲ್ಲ ಮೂಲಗಳ ಮಾಹಿತಿ .ಏನಾದ್ರು ಮಾಡ್ಕೊಳಿ ನಮ್ಮ್ ಬಾಸ್ ಸಿನಿಮಾ ಬೇಗ ರಿಲೀಸ್ ಮಾಡಿ ಮಾಡಿ ಅಂತ ಶಿವಣ್ಣ ಹಾಗು ಕಿಚ್ಚನ ಫ್ಯಾನ್ಸ್ ಪ್ರೇಮ್ ಗೆ ಪದೇ ಪದೇ ಕೇಳ್ತಾ ಇರೋದಂತು ಸತ್ಯ ..