‘ದಿ ವಿಲನ್​​’ ಶೂಟಿಂಗ್​​ ಡಿಲೇ ಆಗೋಕೆ ಪ್ರೇಮ್​​ ಕಾರಣಾನ.?

ಕನ್ನಡ ಚಿತ್ರಂಗದಲ್ಲಿ ಹೊಸದೊಂದು ಕುತೂಹಲಕ್ಕೆ ಕಾರಣವಾದ ಸಿನಿಮಾ ವಿಲನ್. ಜೋಗಿ ಪ್ರೇಮ್​, ಶಿವರಾಜ್​ ಕುಮಾರ್​​, ಕಿಚ್ಚ ಸುದೀಪ್​​ ಕಾಂಬಿನೇಷನ್​​ನಲ್ಲಿ ಮೂಡಿ ಬರುತ್ತಿರುವ ಹೈ ಬಜೆಟ್​​​ ಚಿತ್ರವೇ ಈ ವಿಲನ್​. ಸದ್ಯಕ್ಕೆ ಈ ಸಿನಿಮಾದ ಶೂಟಿಂಗ್​​ ನಿಂತಿದೆ. ಇದಕ್ಕೆ ಕಾರಣವೇನು.? ಪ್ರೇಮ್​​​​ ಅವರಿಂದಲೇ ಚಿತ್ರ ತಡವಾಗ್ತಿದ್ಯ.? ಅನ್ನೋ ವಿಚಾರ ಸಿನಿ ಪ್ರಿಯರಲ್ಲಿ ಕಾಡ್ತಿದೆ.

ದಿನಕಳೆದ ಹಾಗೆ ಒಂದಿಲ್ಲೊಂದು ವಿಷ್ಯಕ್ಕೆ ಸುದ್ದಿಯಾಗ್ತಿದ್ದ ದಿ ವಿಲನ್​​ ಸದ್ಯ ಸೈಲೆಂಟ್​​ ಆಗಿದ್ದಾನಾ.? ಸಿನಿಮಾ ಶೂಟಿಂಗ್​​ ಎಲ್ಲಿಗೆ ಬಂತು ಅನ್ನೋ ಚರ್ಚೆಗೆ ಶುರುವಾಗಿದೆ. ಸಿನಿಮಾ ಶೂಟಿಂಗ್​ ಅಂದುಕೊಂಡ ಹಾಗೆ ನಡೀತಿಲ್ಲ. ಇದಕ್ಕೆ ಸ್ವತಃ ಪ್ರೇಮ್​​ ಅವರೇ ಕಾರಣ ಅಂತಾ ಗಾಸಿಪ್​​ಗಳು ಕೇಳಿ ಬಂದಿವೆ. ಹೌದು,​​ ಚಿತ್ರದ ಶೂಟಿಂಗ್​​​ ತಡವಾಗಿದೆ. ಆದ್ರೇ ಇದಕ್ಕೆ ಪ್ರೇಮ್​​ ಕಾರಣವಲ್ಲ ಅನ್ನೋದು ಇಲ್ಲಿ ಗಮನಿಸಬೇಕಾದ ವಿಚಾರ.

ಎಲ್ಲ ಸಿನಿಮಾ ಟೀಮ್​​ ಅಂದುಕೊಂಡಂತೆ ಆಗಿದ್ದಿದ್ರೆ ನವೆಂಬರ್​ 8 ರಿಂದ ಮುಂಬೈನಲ್ಲಿ ಆಮಿ ಜಾಕ್ಸನ್​​​ ಹಾಗೆ ಕಿಚ್ಚ ಸುದೀಪ್​​ ಜೊತೆಗಿನ ಚಿತ್ರೀಕರಣ ಶುರುವಾಗಬೇಕಿತ್ತು. ಆದ್ರೇ ಶೂಟಿಂಗ್​ ಮುಂದೂಡಲಾಗಿದೆ. ಇದಕ್ಕೆ ಕಾರಣ ಆಮಿ ಯೂಎಸ್​​ಎನಲ್ಲಿದ್ದು ಮುಂಬೈಗೆ ಬರಲು ವೀಸಾ ತೊಂದರೆಯಾಗಿದ್ಯಂತೆ. ಹೀಗಾಗೆ ಶೂಟಿಂಗ್​​ ವಿಳಂಬವಾಗಿದೆ. ಇದನ್ನ ಪ್ರೇಮ್​​ ಅವರು ಹೇಳಿಕೊಂಡಿದ್ದು ನನ್ನಿಂದ ಸಿನಿಮಾ ಡಿಲೇ ಆಗ್ತಿಲ್ಲ ಅಂದಿದ್ದಾರೆ.

ಈಗಾಗ್ಲೇ ಸಿನಿಮಾದ ಬಹುತೇಕ ಶೂಟಿಂಗ್​ ಕಂಪ್ಲೀಟ್​​ ಆಗ್ತಾ ಬರುತ್ತಿದ್ದು, ಮತ್ತೆ ನವೆಂಬರ್ 20ರಿಂದ ಇನ್ನುಳಿದ ಭಾಗದ ಚಿತ್ರೀಕರಣ ಶುರುವಾಗೋ ಸಾಧ್ಯತೆ ಇದೆ. ಎಲ್ಲ ಡೈರೆಕ್ಟರ್ಸ್​​​ ಪ್ರೇಮ್​​ ಅಂದುಕೊಂಡಂತೆ ನಡೆದರೆ ವಿಲನ್​ ಮುಂದಿನ ವರ್ಷದ ಫೆಬ್ರವರಿ 14ಕ್ಕೆ ತೆರೆಗೆ ಬರಲಿದೆ.

ಫಿಲ್ಮ್​​ ಬ್ಯೂರೋ ಸುದ್ದಿಟಿವಿ.

0

Leave a Reply

Your email address will not be published. Required fields are marked *