ಭೂತದಿಂದ ಭವಿಷ್ಯದ ವ್ಯಾಖ್ಯಾನ ಬೇಡ: ಕಿಮ್ ಜಾಂಗ್ ಉನ್

ಸಿಂಗಪುರ: ಸಿಂಗಪುರದಲ್ಲಿ ಕಿಮ್ ಜಾಂಗ್ ಉನ್ ಭೇಟಿ ವೇಳೆ ಮಹತ್ವದ ಸಮಗ್ರ ದಾಖಲೆ ಒಪ್ಪಂದಕ್ಕೆ ಸಹಿ ಹಾಕಲಾಗಿದೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿದ್ದಾರೆ. ಅಣ್ವಸ್ತ್ರ ನಾಶಕ್ಕೆ ಕಿಮ್ ಸಹಮತ ಸೂಚಿಸಿದ್ದಾರೆ ಎಂದ ಅವರು, ಇದು ಮಹತ್ವದ ದಿನ, ಜಾಗತಿಕ ಇತಿಹಾಸದಲ್ಲಿ ಮಹತ್ವದ ಕ್ಷಣ ಎಂದು ಅಭಿಪ್ರಾಯಪಟ್ಟರು. ದೇಶದ ಪರಿಸ್ಥಿತಿಯನ್ನು ಸುಧಾರಿಸಲು ಕಿಮ್ ಜಾಂಗ್ ಉನ್ ತಮ್ಮ ನಿರ್ಧಾರ ಬದಲಿಸಿದ್ದಾರೆ. ಯಾರಾದರೂ ಯುದ್ಧ ಮಾಡಬಹುದು, ಆದರೆ, ಧೈರ್ಯಶಾಲಿಗಳು ಮಾತ್ರ ಶಾಂತಿ ಸ್ಥಾಪಿಸಲು ಸಾಧ್ಯ ಎಂದು ಅವರು ಕಿಮ್ ನಿರ್ಧಾರವನ್ನು ಹೊಗಳಿದರು.

ಭವಿಷ್ಯದಲ್ಲಿ ಅಣ್ವಸ್ತ್ರಗಳು ಮಹತ್ವದ ಸಂಗತಿಗಳಾಗಿರುವುದಿಲ್ಲ. ಅವುಗಳನ್ನು ನಿಯಂತ್ರಿಸಲು ನಾನು ಎದುರು ನೋಡುತ್ತಿದ್ದೇನೆ ಎಂದರು. ಈ ಮೂಲಕ ಪ್ರಪಂಚದಲ್ಲಿ ಅಣ್ವಸ್ತ್ರಗಳ ಉತ್ಪಾದನೆ, ಬಳಕೆ ಕುರಿತು ಅಮೆರಿಕ ತನ್ನ ನಿಲುವನ್ನು ಸ್ಪಷ್ಟಪಡಿಸಲು ಮುಂದಾದಂತಾಗಿದೆ.

ಉಭಯ ದೇಶಗಳ ನಡುವೆ ನಡೆದ ಸಭೆಯಿಂದಾಗಿ ಅಮೆರಿಕ ಮತ್ತು ಉತ್ತರ ಕೊರಿಯಾಗಳಿಗೆ ಶುಭದಾಯಕ. ಡೊನಾಲ್ಡ್ ಟ್ರಂಪ್​ರನ್ನು ದ್ವೇಷಿಸುವ ಏಕೈಕ ವ್ಯಕ್ತಿ, ದೊಡ್ಡ ಒಪ್ಪಂದಕ್ಕೆ ನಾನು ಒಪ್ಪಿಗೆ ಸೂಚಿಸಿದ್ದೇನೆ ಎಂದು ಹೇಳುತ್ತಾರೆ ಎಂದರು. ಈ ಮೂಲಕ ಈ ಹಿಂದೆ ಉನ್ ಮತ್ತು ಟ್ರಂಪ್ ನಡುವೆ ನಡೆದಿದ್ದ ಶೀತಲಸಮರವನ್ನು ಅವರು ಮೆಲುಕು ಹಾಕಿದರು. ಅಲ್ಲದೇ, ಕಿಮ್ ಅವರ ಭೇಟಿ ಮಹತ್ವದ ಒಪ್ಪಂದ. ಆದರೆ, ಇದರಿಂದ ನಮಗೆ ಶುಭವಾಗಲಿದೆ ಎಂದು ಅವರು ಅಭಿಪ್ರಾಯಪಟ್ಟರು.

ಈ ಕುರಿತು ಪ್ರತಿಕ್ರಿಯಿಸಿದ ಉತ್ತರ ಕೊರಿಯಾ ಅಧ್ಯಕ್ಷ ಕಿಮ್ ಜಾಂಗ್ ಉನ್, ನಾವು ಹೊಸ ಇತಿಹಾಸಕ್ಕೆ ಸಿದ್ಧತೆ ನಡೆಸಿದ್ದೇವೆ. ಇತಿಹಾಸದಲ್ಲಿ ಹೊಸ ಅಧ್ಯಾಯಗಳನ್ನು ಬರೆಯಲು ನಾವು ಸಿದ್ಧವಾಗಿದ್ದೇವೆ. ಭೂತ ಭವಿಷ್ಯವನ್ನು ವ್ಯಾಖ್ಯಾನಿಸಲು ಸಾಧ್ಯವಿಲ್ಲ ಎಂದರು. ಈ ಮೂಲಕ 65 ವರ್ಷಗಳ ಸುದೀರ್ಘ ಬಿಕ್ಕಟ್ಟಿನ ಕುರಿತು ಭವಿಷ್ಯದಲ್ಲಿ ಯಾವುದೇ ತಕರಾರುಗಳ ಅಗತ್ಯವಿಲ್ಲ ಎಂದು ಅವರು ಅಭಿಪ್ರಾಪಟ್ಟಿದ್ದಾರೆ.

ಅಮೆರಿಕ – ಉತ್ತರ ಕೊರಿಯಾ ಮಾತುಕತೆಯನ್ನು ಭಾರತೀಯ ವಿದೇಶಾಂಗ ಇಲಾಖೆ ಸ್ವಾಗತಿಸಿದ್ದು, ಶಾಂತಿ ಮಾತುಕತೆಯನ್ನು ಭಾರತ ಸದಾ ಸ್ವಾಗತಿಸುತ್ತದೆ. ರಾಜತಾಂತ್ರಿಕ, ಮಾತುಕತೆ ನಡೆಯಿಂದ ಶಾಂತಿ ಸ್ಥಾಪನೆ ಸಾಧ್ಯ ಎಂದಿದೆ.

ಇದಕ್ಕೂ ಮುನ್ನ ಸಿಂಗಪುರದಲ್ಲಿ ಡೊನಾಲ್ಡ್ ಟ್ರಂಪ್ ಮತ್ತು ಕಿಮ್ ಜಾಂಗ್ ಉನ್ ಭೇಟಿಯಾಗಿ ಮಾತುಕತೆ ನಡೆಸಿದರು. ನಂತರ ಪ್ರತಿಕ್ರಿಯಿಸಿದ್ದ ಉನ್, ಇಡೀ ಜಗತ್ತು ಈ ಕ್ಷಣವನ್ನು ನೋಡುತ್ತಿದೆ. ಅನೇಕರು ಇದು ಭ್ರಮೆ ಎಂದುಕೊಂಡಿದ್ದಾರೆ. ಇನ್ನು ಕೆಲವರು ವಿಜ್ಞಾನ – ಭ್ರಮೆ ಕುರಿತ ಚಿತ್ರ ನೋಡುತ್ತಿದ್ದೇವೆ ಎಂದುಕೊಂಡಿದ್ದಾರೆ ಎಂದಿದ್ದರು. ಇಂದಿನ ಭೇಟಿಯ ಮೂಲಕ 65 ವರ್ಷಗಳ ನಂತರ ಉಭಯ ರಾಷ್ಟ್ರಗಳ ನಡುವೆ ಇದೇ ಮೊಟ್ಟ ಮೊದಲ ಬಾರಿ ಮಾತುಕತೆ ನಡೆದಂಥಾಗಿದೆ.

ಪ್ರದೀಪ್ ಮಾಲ್ಗುಡಿ ನ್ಯಾಷನಲ್ ಡೆಸ್ಕ್ ಸುದ್ದಿ ಟಿವಿ

0

Leave a Reply

Your email address will not be published. Required fields are marked *