ರೊಮಿನಿಯಾದ ಫ್ರೆಂಚ್ ಬರಹಗಾರ  ಯುಜೆನೊ ಐನೆಸ್ಕೊನ ದಿ ಲೀಡರ್ ನಾಟಕ ಉಚಿತ ಪ್ರದರ್ಶನ

 

ಬೆಂಗಳೂರು: 1953ರಲ್ಲಿ ಬರೆದ “ದಿ ಲೀಡರ್” ನಾಟಕದಲ್ಲಿನ ಪಾತ್ರಗಳು ಜಗತ್ತಿನಲ್ಲಿ ಯಾವ ಮೂಲೆಯಲ್ಲೂ, ಯಾವ ಕಾಲದಲ್ಲಾದರೂ ಕಾಣಲು ಸಿಗುತ್ತವೆ. ಈ ಪಾತ್ರಗಳು ನಮ್ಮೊಳಗೂ ಕೂತು ಭೂತದಂತೆ ಹೂತುಹೋಗಿರುವ ಲೀಡರ್​ನನ್ನು ಹುಡುಕುತ್ತವೆ. ಅಷ್ಟರಮಟ್ಟಿಗೆ ಈ ನಾಟಕಕ್ಕೆ ಕಾಲ, ದೇಶ, ಜನಾಂಗಗಳ ಹಂಗಿಲ್ಲ. ಇಲ್ಲಿನ ಪ್ರೇಮ ,ಭಕ್ತಿ, ನಾಯಕನನ್ನು ಕುರಿತ ಆರಾಧನೆ ಎಲ್ಲವು ಅಸಹ್ಯ ಮತ್ತು ಅಶ್ಲೀಲ ಎನ್ನುವ ಮಟ್ಟಿಗಿದೆ.  ಇದು ರಾಜಕೀಯ ಅಶ್ಲೀಲತೆ (political vulgarity). ಈ ಬಗೆಯ ಅಶ್ಲೀಲತೆ ಯಾವಾಗಲೂ ರಾಜಕೀಯ ಪ್ರಜ್ಞೆ ಇಲ್ಲದ ಅಸ್ವಸ್ಥ ಸಮಾಜದ ಭಾಗವೇ ಆಗಿರುತ್ತದೆ ಹಾಗೂ ಅವುಗಳನ್ನು ಗುರುತಿಸಿಕೊಳ್ಳುವಷ್ಟು ಪ್ರಜ್ಞೆಯನ್ನೂ ಆ ಸಮಾಜ ಕಳೆದುಕೊಂಡಿರುತ್ತದೆ. ಜಗತ್ತಿನ ಇತಿಹಾಸದುದ್ದಕ್ಕೂ ನಾವಿದನ್ನು ಕಾಣಬಹುದು. ಭಾರತದ ಮಟ್ಟಿಗಂತೂ ಇಂತಹ ಅಪ್ರಜ್ಞಾವಸ್ಥೆಯು ದಿನನಿತ್ಯ ಬದುಕಿನ ಭಾಗವೇ ಆಗಿಬಿಟ್ಟಿದೆ.

ಈ ನಾಟಕ ಮಾಡುವ ಪ್ರಕ್ರಿಯೆಯಲ್ಲಿ  ಮೇಲೆ ಹೇಳಿದ ಪೊಲಿಟಿಕಲ್ ವಲ್ಗಾರಿಟಿ ಕುರಿತು ಹಲವು ಸೂಕ್ಷ್ಮ ಹೊಳಹುಗಳು ಮತ್ತು ಅರಿವನ್ನು ನಾಟಕವು ನಮಗೆ ಬಿಚ್ಚಿಡುತ್ತಲೇ ಬಂದಿದೆ. ಈ ಅರಿವಿನಲ್ಲಿ ಕೊಂಚವಾದರು ಪ್ರೇಕ್ಷಕರಿಗೆ ದಾಟಿಸಲು ಪ್ರಯತ್ನಿಸಿದ್ದೇವೆ ಎಂದು ನಿರ್ದೇಶಕ ಲಕ್ಷ್ಮಣ್ ಹೇಳಿಕೊಂಡಿದ್ದಾರೆ. ನಾಟಕದಲ್ಲಿ ನಟಿಸುತ್ತಿರುವವರು ಬದುಕು ಕಮ್ಯೂನಿಟಿ ಕಾಲೇಜಿನ  ಪತ್ರಿಕೋದ್ಯಮ ವಿಭಾಗದಲ್ಲಿ ಕಲಿಯುತ್ತಿರುವ ಯುವಜನ. ಯುವಕರೇ ಅಭಿನಯಿಸುತ್ತಿರುವುದರಿಂದ ಹೊಸ ಬಗೆಯ ನೋಟವನ್ನು ಪ್ರೇಕ್ಷಕರಿಗೆ ಕಾಣಿಸಬಲೆ ಎಂಬುದು ಅವರ ನಂಬುಗೆಯಾಗಿದೆ.

ನಾಟಕ – ದಿ ಲೀಡರ್

ನಿರ್ದೇಶನ –  ಲಕ್ಷ್ಮಣ್ ಕೆ.ಪಿ.

ದಿನಾಂಕ: ಜನವರಿ 29, ಮಂಗಳವಾರ, ಸಂಜೆ 7.30

ಸ್ಥಳ: ಕೆಹಚ್ ಕಲಾಸೌಧ, ಹನುಮಂತ ನಗರ, ಬೆಂಗಳೂರು

ಪ್ರವೇಶ ಉಚಿತ

0

Leave a Reply

Your email address will not be published. Required fields are marked *