2019ರ ಲೋಕಸಭೆ ಚುನಾವಣೆಗೂ ಮುನ್ನ ರಾಮ ಮಂದಿರ ನಿರ್ಮಾಣಕ್ಕೆ ಚಾಲನೆ: ರಾಂ ವಿಲಾಸ್ ವೇದಾಂತಿ

ಲಖ್ನೋ: ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಿಸಲು ಬಿಜೆಪಿ ಸ್ಥಿರ ಸಂಕಲ್ಪ ಮಾಡಿದೆ ಎಂದು ಬಿಜೆಪಿಯ ಮಾಜಿ ಸಂಸದ ಮತ್ತು ರಾಮ ಜನ್ಮಭೂಮಿ ನ್ಯಾಸ್​​ನ ಅಧ್ಯಕ್ಷ ರಾಮ್ ವಿಲಾಸ್ ವೇದಾಂತಿ ಹೇಳಿದ್ದಾರೆ. ಅಲ್ಲದೇ, 2019ರ ಲೋಕಸಭೆ ಚುನಾವಣೆಗೂ ಮುನ್ನ ಮಂದಿರ ನಿರ್ಮಾಣ ಕಾರ್ಯ ಆರಂಭವಾಗಲಿದೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಸದ್ಯಕ್ಕೆ ಈ ವಿವಾದದ ಕುರಿತ ಅರ್ಜಿಗಳ ವಿಚಾರಣೆ ಸುಪ್ರೀಂ ಕೋರ್ಟ್​ನಲ್ಲಿ ನಡೆಯುತ್ತಿದ್ದು, ಈ ನಡುವೆ ವೇದಾಂತಿ ಹೇಳಿಕೆ ನೀಡಿದ್ದಾರೆ. ಈ ಕುರಿತು ಬಿಜೆಪಿ ತನ್ನ ನಿಲುವನ್ನು ಸ್ಪಷ್ಟಪಡಿಸಬೇಕಿದೆ.

ಏಪ್ರಿಲ್ 22, 2017ರಂದು ಇಂಥದ್ದೇ ವಿವಾದಾತ್ಮಕ ಹೇಳಿಕೆ ನೀಡಿದ್ದ ರಾಮ್ ವಿಲಾಸ್ ವೇದಾಂತಿ. 1992ರಲ್ಲಿ ಲಕ್ಷಾಂತರ ಕರಸೇವಕರೊಂದಿಗೆ ಬಾಬ್ರಿ ಮಸೀದಿಯನ್ನು ನಾನೇ ಧ್ವಂಸಗೊಳಿಸಿದ್ದೆ. ರಾಮ ಮಂದಿರ ಕಟ್ಟುವ ವಿಷಯದಲ್ಲಿ ನಾನು ಸೆರೆಮನೆಗೆ ಹೋಗಲು ಕೂಡ ಸಿದ್ಧ ಎಂದಿದ್ದರು.

0

Leave a Reply

Your email address will not be published. Required fields are marked *