ಟೆಕ್ನಾಲಜಿ ಯುಗದಲ್ಲಿ ಡಿಜಿಟಲ್​ ಲೈಬ್ರರಿ ಹವಾ

ಇನ್ಮುಂದೆ ನಿಮ್ಮಷ್ಟದ ಕನ್ನಡ ಪುಸ್ತಕಗಳನ್ನ ನೀವು ಯಾವಾಗ ಬೇಕೋ ಆಗ ಓದಬಹುದು.. ಅದಕ್ಕಾಗಿ ಬುಕ್​ ಸ್ಟಾಲ್​ಗಳಿಗೆ, ಲೈಬ್ರರಿಗಳಿಗೆ ಅಲೆದಾಡುವ ಅವಶ್ಯಕತೆ ಇಲ್ಲ.. ಯಾಕೆಂದ್ರೆ ಈಗಾಗಲೇ  ಡಿಜಿಟಲ್​​ ಲೈಬ್ರರಿ ಬಂದಿದೆ.. ಇದು ಟೆಕ್ನಾಲಿಜಿ ಯುಗ.. ಈ ಫಾಸ್ಟ್​ ಲೈಫ್​ನಲ್ಲಿ ಕಣ್ಣ ಮುಚ್ಚಿ ಕಣ್ಣ ತೆರೆಯೋ ಹೊತ್ತಿಗೆ ಕೆಲಸ ಆಗಿರುತ್ತೆ..ಟೆಕ್ನಾಲಜಿ ಅನ್ನೋದು ಪ್ರತಿ ಕ್ಷೇತ್ರದಲ್ಲೂ ತನ್ನ ವಿಸ್ತಾರವನ್ನು ಚಾಚುತ್ತಾ ಬಂದಿದೆ..  ಅಂದಹಾಗೇ ಸರ್ಕಾರಿ ಕಚೇರಿಗಳು, ಸರ್ಕಾರಿ ಇಲಾಖೆಗಳು ಅಂದ್ರೆ ಹಿಂದೆ ಉಳಿದಿರೋದು ಅನ್ನೋ ಮಾತಿದೆ.. ಆದ್ರೆ ಇದಕ್ಕೆ ಸೆಡ್ಡು ಹೊಡೆಯುವಂತೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹೊಸದೊಂದು ಪ್ರಯತ್ನಕ್ಕೆ ಕೈ ಹಾಕಿದೆ.. ಕನ್ನಡವನ್ನು ಉಳಿಸಿ ಬೆಳೆಸುವ ನಿಟ್ಟಿನಲ್ಲಿ ಕನ್ನಡ ಪುಸ್ತಕಗಳ ಉಳಿವಿಗಾಗಿ ಡಿಜಿಟಲ್​​ ಲೈಬ್ರರಿ ಮಾಡಿದೆ.. ರಾಜ್ಯದ ಮೊದಲ ಡಿಜಿಟಲ್​ ಇಲಾಖೆ ಎಂಬ ಹೆಗ್ಗಳಿಗೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಪಾತ್ರವಾಗಿದೆ. ಡಿಜಿಟಲ್​ ಲೈಬ್ರರಿ ಮಾಡಲು ಎಲ್ಲ ತಯಾರಿಗಳು ಆಗಿದ್ದು, ಕನ್ನಡದ ಎಲ್ಲ ಕೃತಿಗಳು ಸಿಗಲಿದೆ.. ಇನ್ನು ಇದ್ರ ಮುಖ್ಯ ಉದ್ದೇಶ ಬೇಡಿಕೆ ಇರೋ, ಮೌಲ್ಯಯುತ ಕೃತಿಗಳು ಎಲ್ಲರಿಗೂ ಸಿಗಬೇಕು.. ಜೊತೆಗೆ ಸಾಹಿತ್ಯವನ್ನ ಉಳಿಸುವ  ದೃಷ್ಟಿಯಿಂದ ಈ ಹೊಸ ಕೆಲಸಕ್ಕೆ ಕೈ ಹಾಕಲಾಗಿದೆ.. ಸರ್ಕಾರಿ ಇಲಾಖೆಗಳು ತಂತ್ರಜ್ಞಾನದತ್ತ ಮುಂದುವರೆಯುತ್ತಿರೋ ನಿಜಕ್ಕೂ ಖುಷಿ ವಿಷ್ಯ. ಈ ಇಲಾಖೆ ಮತ್ತೊಂದು ಇಲಾಖೆಗೂ ಸ್ಪೂರ್ತಿಯಾಗಲಿ ಅನ್ನೋದೆ ನಮ್ಮ ಆಶಯ..

0

Leave a Reply

Your email address will not be published. Required fields are marked *