ಟಿಡಿಪಿ ಶಾಸಕ ನಿಮ್ಮಲ ರಾಮಾ ನಾಯ್ಡು ಸ್ಮಶಾನದಲ್ಲಿ ಮಲಗಿದ್ದೇಕೆ?

ಹೈದರಾಬಾದ್: ಸ್ಮಶಾನದಲ್ಲಿ ಮಲಗುವ ಮೂಲಕ ಕಟ್ಟಡ ನಿರ್ಮಾಣ ಕಾರ್ಮಿಕರ ಭಯವನ್ನು ಹೋಗಲಾಡಿಸಲು ಪಾಲಕೊಲ್ಲುವಿನಿಂದ ಶಾಸಕರಾಗಿ ಆಯ್ಕೆಯಾಗಿರುವ ಟಿಡಿಪಿ ನಾಯಕ ನಿಮ್ಮಲ ರಾಮಾ ನಾಯ್ಡು ಯತ್ನಿಸಿದ್ದಾರೆ. ಕಟ್ಟಡ ನಿರ್ಮಾಣ ಮತ್ತಿತರ ಕಾಮಗಾರಿಗಳ ಪರಿಶೀಲನೆ ನಡೆಸುತ್ತಿದ್ದ ವೇಳೆ, ಕೆಲವರು ತಮಗೆ ಸ್ಮಶಾನದಲ್ಲಿ ಕಟ್ಟಡ ನಿರ್ಮಾಣ ಮಾಡಲು ಭಯವಾಗುತ್ತಿದೆ ಎಂದು ಸಮಸ್ಯೆಯನ್ನು ಹೇಳಿಕೊಂಡರು. ಇದೇ ಕಾರಣದಿಂದಾಗಿ ಹಿಂದೂ ರುದ್ರಭೂಮಿಯ ಅಭಿವೃದ್ಧಿ ಕಾರ್ಯ ವಿಳಂಬವಾಗಿತ್ತು. ಈ ಹಿನ್ನೆಲೆಯಲ್ಲಿ ಸ್ಮಶಾನದಲ್ಲಿ ಮಲಗುವ ಮೂಲಕ ಕಾರ್ಮಿಕರಲ್ಲಿ ಧೈರ್ಯ ತುಂಬುವ ಕೆಲಸವನ್ನು ಅವರು ಮಾಡಿದ್ದಾರೆ.

ಕಟ್ಟಡ ನಿರ್ಮಾಣಕ್ಕೆ ಅಡಿಪಾಯ ಹಾಕುವ ವೇಳೆ ಸಮಾಧಿಯಾಗಿದ್ದ ಶವಗಳ ಮೂಳೆಗಳು ಸಿಗುತ್ತಿದ್ದವು. ಇದರಿಂದಾಗಿ ಕಾರ್ಮಿಕರು ಭಯಗ್ರಸ್ಥರಾಗಿದ್ದರು. ಈ ಭಯ ಹೋಗಲಾಡಿಸಲು ಮುಂದಾದ ರಾಮಾ ನಾಯ್ಡು, ಕಾರ್ಮಿಕರೊಂದಿಗೆ ಊಟ ಮಾಡಿ, ಸ್ಮಶಾನದಲ್ಲೇ ಮಲಗುವ ಮೂಲಕ ಕಾರ್ಮಿಕರ ಭಯ ಹೋಗಲಾಡಿಸಲು ಯತ್ನಿಸಿದ್ದಾರೆ.

0

Leave a Reply

Your email address will not be published. Required fields are marked *