ತಮಿಳುನಾಡಿನಲ್ಲಿ ಚಾರಣಕ್ಕೆ ಹೋದವರು ಕಾಡ್ಗಿಚ್ಚಿಗೆ ಬಲಿ…

ಕಾಡಿನ ಸೌಂದರ್ಯವನ್ನು ಸವಿಯಲು ಟ್ರೆಕ್ಕಿಂಗ್‌ ಹೋಗಿದ್ದ ವಿದ್ಯಾರ್ಥಿಗಳ ತಂಡ ಕಾಡ್ಗಿಚ್ಚಿಗೆ ಬಲಿಯಾಗಿದ್ದಾರೆ. ತಮಿಳುನಾಡಿನ ಥೇನಿ ಜಿಲ್ಲೆಯ ಕುರೆಂಗಿನಿ ಬೆಟ್ಟದ ಅರಣ್ಯದಲ್ಲಿ ಸಂಭವಿಸಿದ ಈ ದುರ್ಘಟನೆಯಲ್ಲಿ 9 ಮಂದಿ ಬಲಿಯಾಗಿದ್ದು, 30 ಜನರನ್ನು ರಕ್ಷಣೆ ಮಾಡಲಾಗಿದೆ. ಕಳೆದ ಎರಡು ದಿನಗಳ ಹಿಂದೆ ಟ್ರೆಕ್ಕಿಂಗ್‌ಗೆ ಅಂತ 39 ತೆರಳಿದ್ದು, ಒಂಭತ್ತು ಮಂದಿ ಸಜೀವವಾಗಿ ದಹನಗೊಂಡಿದ್ದಾರೆ.ಇನ್ನು ನಿನ್ನೆ ಮುಂಜಾನೆಯಿಂದ ರಕ್ಷಣಾ ಕಾರ್ಯಾಚರಣೆ ಮುಂದೂವರೆದಿದೆ. ​ಮೃತ ದೇಹಗಳನ್ನು ಹೈಯರ್​ ಪ್ಲೇನ್​ ಮೂಲಕ ತೆಗೆಯಲಾಗುತ್ತಿದೆ. ಈ ಕಾರ್ಯಕ್ಕೆ ಎರಡು ಹೆಲಿಕ್ಯಾಪ್ಟರ್​ಗಳನ್ನು ಬಳಸಲಾಗುತ್ತಿದೆ. ಒಂದು ಹೆಲಿಕ್ಯಾಪ್ಟರ್​​ನನ್ನು ಬೆಂಕಿ ನಂದಿಸಲು ಬಳಸಲಾಗುತ್ತಿದೆ ಅಂತ ರಕ್ಷಣಾ ಸಚಿವೆ ನಿರ್ಮಲಾ ಸೀತರಾಮನ್​ ಹೇಳಿದ್ದಾರೆ.

ಇನ್ನು ಸಿಎಂ ಪಳನಿಸ್ವಾಮಿ ಸ್ಥಳಕ್ಕೆ ಭೇಟಿ ನೀಡಿ, ರಕ್ಷಣಾ ಕಾರ್ಯಾಚರಣೆಯನ್ನು ಪರಿಶೀಲಿಸಿದ್ರು. ಈ ವೇಳೆ ಘಟನೆ ಬಗ್ಗೆ ವಿಷಾದ ವ್ಯಕ್ತಪಡಿಸಿ ಮಾತನಾಡಿದ ಅವರು, ವಿದ್ಯಾರ್ಥಿಗಳು ಅರಣ್ಯ ಇಲಾಖೆ ಅಥವಾ ಸಂಬಂಧ ಪಟ್ಟವರಿಂದ ಅನುಮತಿ ಪಡೆದಿರಲಿಲ್ಲ ಅಂತ ಹೇಳಿದ್ರು. ಇನ್ನು ಘಟನೆ ಬಗ್ಗೆ ಪ್ರತಿಕ್ರಿಯಿಸಿದ ತಮಿಳುನಾಡು ಉಪ ಮುಖ್ಯಮಂತ್ರಿ ಪನ್ನೀರ್​ ಸೆಲ್ವಂ ಮೃತರ ಕುಟುಂಬಕ್ಕೆ ಪರಿಹಾರ ಮೊತ್ತ ಘೋಷಿಸಿರುವುದಾಗಿ ಹೇಳಿದ್ರು.ಒಟ್ಟಾರೆ, ಸರಿಯಾದ ಪೂರ್ವ ತಯಾರಿ ಮತ್ತು ಕಾಡ್ಗಿಚ್ಚಿನ ಬಗ್ಗೆ ಮಾಹಿತಿ ಪಡೆದುಕೊಳ್ಳದೆ ಚಾರಣಕ್ಕೆ ಹೋಗಿ ವಿದ್ಯಾರ್ಥಿಗಳು ತಮ್ಮ ಜೀವಕ್ಕೆ ಕುತ್ತು ತಂದುಕೊಂಡಿದ್ದು ನಿಜಕ್ಕೂ ದುರದೃಷ್ಟಕರ.

– ಜೆಪಿ ಹೊಳಲ್ಕೆರೆ ನ್ಯೂಸ್​ ಡೆಸ್ಕ್​ ಸುದ್ದಿ ಟಿವಿ

0

Leave a Reply

Your email address will not be published. Required fields are marked *