‘ನನ್ನ ಜೀವಕ್ಕೆ ಅಪಾಯ ಇದೆ ಅಂತ ಸ್ವಾಮೀಜಿ ಹೇಳಿದ್ದರು’

ಶೀರೂರು ಸ್ವಾಮೀಜಿ ತಮ್ಮ ಜೀವಕ್ಕೆ ಅಪಾಯವಿದೆ ಅಂತ ನನ್ನ ಬಳಿ ಹೇಳಿಕೊಂಡಿದ್ದರು ಅಂತ ನ್ಯಾಯವಾದಿ ರವಿಕಿರಣ್ ಮುರ್ಡೇಶ್ವರ ಹೇಳಿದ್ದಾರೆ. ಪಟ್ಟದ ದೇವರ ವಿಚಾರದ ವೈಮನಸ್ಸು ಸಂದರ್ಭದಲ್ಲಿ ನನ್ನ ಜೀವಕ್ಕೆ ಅಪಾಯ ಇದೆ ಅಂತಾ ಸ್ವಾಮೀಜಿ ಹೇಳಿಕೊಂಡಿದ್ದರು. ಸತತ ಎರಡು ಗಂಟೆಗಳ ಕಾಲ ನನ್ನ ಜೊತೆ ಚರ್ಚೆ ನಡೆಸಿದ ಅವರು, ಪುತ್ತಿಗೆ ಸ್ವಾಮೀಜಿ ಯನ್ನು ಹೊರತುಪಡಿಸಿ ಉಳಿದ 6 ಸ್ವಾಮೀಜಿಗಳ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸುವಂತೆ ತಿಳಿಸಿದ್ದರು. ಅದರಂತೆ ನಾನು ಕೂಡ ಕ್ರಿಮಿನಲ್ ಪ್ರಕರಣ ದಾಖಲಿಸಲು ಸಿದ್ಧತೆ ಮಾಡಿಕೊಂಡಿದೆ ಅಂತ ಹೇಳಿದ್ದಾರೆ. ಶಿರೂರು ಶ್ರೀಗಳ ಸಾವಿನ ಬಗ್ಗೆ ತನಿಖೆಯಾಗಬೇಕು, ಶವ ಪರೀಕ್ಷೆ ನಡೆಯಬೇಕು ಎಂದಿದ್ದಾರೆ.

0

Leave a Reply

Your email address will not be published. Required fields are marked *