ಮತ್ತೊಬ್ಬ ಸ್ವಾಮೀಜಿಗೆ ಸಚಿವ ಸಂಪುಟ ಸ್ಥಾನಮಾನ: ಬಿಜೆಪಿಯಿಂದ ಸ್ವಾಮೀಜಿಗಳ ಓಲೈಕೆ ಆರೋಪ

ಭೋಪಾಲ್: ಮಧ್ಯಪ್ರದೇಶದ ಸಿಎಂ ಶಿವರಾಜ್ ಸಿಂಗ್ ಚೌಹಾಣ್ ನೇತೃತ್ವದ ಬಿಜೆಪಿ ಸರ್ಕಾರ ಸ್ವಾಮಿ ಅಖಿಲೇಶಾನಂದ್ ಅವರಿಗೆ ಸಚಿವ ಸಂಪುಟ ದರ್ಜೆಯ ಸ್ಥಾನಮಾನ ನೀಡಿ ಹೊಸ ವಿವಾದಕ್ಕೆ ಕಾರಣವಾಗಿದೆ. ರಾಜ್ಯ ಗೋ ರಕ್ಷಣೆ ನಿಗಮದ ಮುಖ್ಯಸ್ಥರಾಗಿ ಕೆಲಸ ಮಾಡುತ್ತಿರುವ ಅಖಿಲೇಶಾನಂದ್ ಅವರಿಗೆ ಈ ಹಿಂದೆ ರಾಜ್ಯ ಸಚಿವ ಸಂಪುಟ ದರ್ಜೆಯನ್ನು ಸರ್ಕಾರ ನೀಡಲಾಗಿತ್ತು.

ಇನ್ನು ಅಖಿಲೇಶಾನಂದ್, ತಮ್ಮ ಅರಿವಿಗೆ ತಾರದೆ ಸರ್ಕಾರದ ತೆಗೆದುಕೊಂಡಿರುವ ಈ ನಿರ್ಧಾರಕ್ಕೆ ಅಸಮಧಾನ ವ್ಯಕ್ತಪಡಿಸಿದ್ದಾರೆ ಎಂದು ವರದಿಯಾಗಿದೆ. ಇವರೊಂದಿಗೆ ಕಂಪ್ಯೂಟರ್ ಬಾಬಾ ಮತ್ತು ಯೋಗೇಂದ್ರ ಮಹಂತ್ ಅವರಿಗೂ ಸಚಿವ ಸಂಪುಟ ದರ್ಜೆ ನೀಡಲಾಗಿದೆ. ಕಳೆದ ಏಪ್ರಿಲ್​​​ 3ರಂದು ರಾಜ್ಯ ಸರ್ಕಾರ ರಾಜ್ಯ ಸಚಿವರ ದರ್ಜೆಯನ್ನು 5 ಧಾರ್ಮಿಕ ಗುರುಗಳಿಗೆ ನೀಡಿತ್ತು. ಆದರೆ, ಇದುವರೆಗೆ ಅವರು ಯಾವುದೇ ಸಭೆಗೂ ಹಾಜರಾಗಿಲ್ಲ ಎಂದು ಕೂಡ ಹೇಳಲಾಗಿದೆ.

ಈ ಕುರಿತು ತಕರಾರು ತೆಗೆದಿರುವ ಕಾಂಗ್ರೆಸ್ ಪಕ್ಷ ಹಿಂದೂ ಧರ್ಮದವರನ್ನು ಓಲೈಸಲು ಇಂಥ ಕ್ರಮಗಳನ್ನು ಸರ್ಕಾರ ಕೈಗೊಳ್ಳುತ್ತಿದೆ ಎಂದು ಆರೋಪಿಸಿದೆ. ಆದರೆ, ಈ ಆರೋಪವನ್ನು ನಿರಾಕರಿಸಿರುವ ಬಿಜೆಪಿ, ಧಾರ್ಮಿಕ ಓಲೈಕೆಗಾಗಿ ಈ ನಿರ್ಧಾರ ಕೈಗೊಂಡಿಲ್ಲ ಎಂದಿದೆ.

0

Leave a Reply

Your email address will not be published. Required fields are marked *