ಸುರೇಶ್​ ರೈನಾ ಈಗ ಸಿಂಗರ್​​..

ನಿದಹಾಸ್​​ ಕಪ್​​ನಲ್ಲಿ ಭಾಗವಹಿಸಿರುವ ಟೀಮ್ ಇಂಡಿಯಾ ಒಂದು ಪಂದ್ಯ ಗೆದ್ದು, ಜೋಶ್​ ನಲ್ಲಿದೆ. ಸೋಮವಾರ ತನ್ನ ಮೂರನೇ ಪಂದ್ಯವನ್ನು ಆಡಲಿದ್ದು, ಇದಕ್ಕೂ ಮೊದಲು ಆಟಗಾರರು ವಿಭಿನ್ನವಾಗಿ ಒತ್ತಡವನ್ನು ಮೆಟ್ಟಿ ನಿಂತರು. ಸುರೇಶ್​ ರೈನಾ.. ಟೀಮ್​ ಇಂಡಿಯಾ ಕಂಡ ಶ್ರೇಷ್ಠ ಮ್ಯಾಚ್​ ಫಿನಿಶರ್​​ಗಳಲ್ಲಿ ಒಬ್ಬ.. ಎಡಗೈನಲ್ಲಿ ಬ್ಯಾಟ್​ ಬೀಸ್ತಿದ್ದರೆ, ಬೌಲರ್​​ಗಳು ಕಂಗಾಲು. ರೈನಾ ಎಂದು ಸಹ ಬ್ಯಾಟ್​ ಮಾಡುವಾಗ ಮೈದಾನವನ್ನಾಗಲಿ ಅಥವಾ ಎದುರಾಳಿಯನ್ನು ನೋಡಿ ಬ್ಯಾಟ್ ಮಾಡಿದವರು ಅಲ್ಲವೇ ಅಲ್ಲ.  ಇನ್ನು ರೈನಾ ತಮ್ಮ ಛಾಪು ಮೂಡಿಸಿದ್ದು, ಐಪಿಎಲ್​​ನಲ್ಲಿ. ಚೈನ್ನೈ ಸೂಪರ್​ ಕಿಂಗ್ಸ್​​ ತಂಡದ ಪರ ಆಡುತ್ತಿದ್ದ ರೈನಾ, ಧೋನಿ ಬತ್ತಳಿಕೆಯ, ಬ್ರಹ್ಮಾಸ್ತ್ರ. ಮಧ್ಯಮ ಕ್ರಮಾಂಕಕ್ಕೆ ಬಲ ತುಂಬ ಬಲ್ಲ ಆಟಗಾರ. ಇನ್ನು ಮಿಡ್​ ಆನ್​ ಆಗಲಿ ಅಥವಾ ಮಿಡ್​ ಆಫ್​ ಆಗಲಿ ರೈನಾ ಕ್ಷೇತ್ರ ರಕ್ಷಣೆ ಮಾಡ್ತಾ ಇದ್ರೆ, ಅವರ ಪಕ್ಕದಲ್ಲಿ, ಅವರ ಕಣ್ಣು ತಪ್ಪಿಸಿ ಚೆಂಡು ಆಚಿಚೆ ಹೋಗುವುದಿಲ್ಲ. ಅಂತಹ ಶ್ರೇಷ್ಠ ಫೀಲ್ಡರ್​​.

ರೈನಾ ಈ ಹಿಂದೆ ಮೈಕ್​ ಮುಂದೆ ನಿಂತು ಕಂಠದಾನ ಸಹ ಮಾಡಿದ್ದಾರೆ. ಈ ಹಾಡು ಕೇಳಿದ ಅಭಿಮಾನಿಗಳು ರೈನಾ ಹಾಡನ್ನು ಹಾಡಿ ಹೊಗಳಿದ್ದರು. ಅಲ್ಲದೆ ಪಕ್ಕಾ ಪ್ಲೇಬ್ಯಾಕ್​ ಸಿಂಗರ್​​ ರೀತಿ ಹಾಡಿ ಎಲ್ಲರ ಮನ ಗೆದ್ದಿದ್ದರು. ರೈನಾ ತಮ್ಮ ಇಂಪಾದ ಧ್ವನಿಯಿಂದ ಅಭಿಮಾನಿಗಳ ಮನಕ್ಕೆ ಲಗ್ಗೆ ಇಟ್ಟಿದ್ದಾರೆ. ಅವರು ಹಾಡಿರುವ ಹಾಡು ಸಖತ್​ ವೈರಲ್​ ಆಗಿದೆ. ಶ್ರೀಲಂಕಾ ಪ್ರವಾಸದಲ್ಲಿರುವ ಟೀಮ್​ ಇಂಡಿಯಾ ಆಟಗಾರರಿಗೆ ರೈನಾ ತಮ್ಮ ಕಂಠದ ಪರಿಚಯ ಮಾಡಿಸಿಕೊಟ್ಟರು. ತಾವು ತಂಗಿದ್ದ ಹೊಟೇಲ್​​ನಲ್ಲಿ, ಆಟಗಾರರ ಎದುರು ರೈನಾ ಹಳೆಯ ಹಿಂದಿ ಹಾಡು ಹಾಡಿ ಎಲ್ಲರ ಮನಸು ಗೆದ್ದರು. ಎ ಶಾಮ್​ ಮಸ್ತಾನಿ ಎಂದು ಕಿಶೋರ್​​ ಕುಮಾರ್​ ಹಾಡು ರೈನಾ ಕಂಠದಲ್ಲಿ ಹೊರ ಬರುತ್ತಿದ್ದಂತೆ ಇತ್ತ, ಆಟಗಾರರು ಈ ದೃಶ್ಯವನ್ನು ತಮ್ಮ ಮೊಬೈಲ್​​ನಲ್ಲಿ ಸೆರೆ ಹಿಡಿದು ಖುಷಿ ಪಟ್ಟರು.

ಮಹೇಶ್​ ಗುರಣ್ಣವರ, ಸ್ಪೋರ್ಟ್ಸ್​​ ಬ್ಯೂರೋ, ಸುದ್ದಿ ಟಿವಿ

0

Leave a Reply

Your email address will not be published. Required fields are marked *