ಮತ್ತೆ ಕಂಬ್ಯಾಕ್ ಆದ್ರು, ಬಿಗ್ ಹಿಟ್ಟರ್..!

ದಕ್ಷಿಣ ಆಫ್ರಿಕಾ ಪ್ರವಾಸದಲ್ಲಿರೋ ಟೀಮ್ ಇಂಡಿಯಾ ಈಗಾಗಲೇ ಟೆಸ್ಟ್ ಸರಣಿಯನ್ನ ಸೋತಿದ್ದು, ಇದೀಗ, ಏಕದಿನ ಸರಣಿಗೆ ಸಜ್ಜಾಗಿದೆ. ಇದರ ನಡುವೆಯೆ ಬಿಸಿಸಿಐ ಮೂರು ಪಂದ್ಯಗಳ ಟಿ-20 ಸರಣಿಗೆ ತಂಡವನ್ನ ಪ್ರಕಟಿಸಿದೆ. 16 ಸದಸ್ಯರ ತಂಡದಲ್ಲಿ ವರ್ಷದ ಬಳಿಕ ತಂಡದ ಬಿಗ್ ಹಿಟ್ಟರ್ ವೊಬ್ರು ಸ್ಥಾನ ಪಡೆದಿದ್ದಾರೆ. ಸುರೇಶ್​ ರೈನಾ, ನಿಗದಿತ ಓವರ್​ಗಳ ಕ್ರಿಕೆಟ್​​​​​ನಲ್ಲಿ ಟೀಮ್ ಇಂಡಿಯಾದಲ್ಲಿ ಪರ್ಮನೆಂಟ್ ಸ್ಥಾನ ಗಿಟ್ಟಿಸಿಕೊಂಡಿದ್ದ ಸ್ಫೋಟಕ ಬ್ಯಾಟ್ಸ್​ಮನ್. ಒನ್​ ಡೇ, ಟಿ20 ಪಂದ್ಯಗಳಲ್ಲಿ ಧೋನಿ ಪಡೆಯ ನೆಚ್ಚಿನ ಫಿನಿಷರ್ ಕೂಡ ಆಗಿದ್ರು. ಆದ್ರೆ ಕಳೆದೊಂದು ವರ್ಷದಲ್ಲಿ ಇವರ ಫಾರ್ಮ್​ ಫೇಲ್ಯೂರ್​ ಅವರನ್ನ ತಂಡದಿಂದ್ಲೇ ಹೊರದಬ್ಬುವಂತೆ ಮಾಡಿತ್ತು.

ಏಕದಿನ, ಟಿ20 ಪಂದ್ಯಗಳಲ್ಲಿ ಸತತ ವೈಫಲ್ಯ ಅನುಭವಿಸಿದ್ದ ರೈನಾ ಟೀಮ್ ಇಂಡಿಯಾದಲ್ಲಿ ಸ್ಥಾನ ಕಳೆದುಕೊಂಡಿದ್ರು. ಇದ್ರಿಂದಾಗಿ ಕಳೆದೊಂದು ವರ್ಷದಲ್ಲಿ ಆಸ್ಟ್ರೇಲಿಯಾ, ವೆಸ್ಟ್​​ ಇಂಡೀಸ್​ ಹಾಗೂ ಶ್ರೀಲಂಕಾ ಮತ್ತು ನ್ಯೂಜಿಲೆಂಡ್ ವಿರುದ್ಧದ ಕ್ರಿಕೆಟ್​ ಸರಣಿಗಳಲ್ಲಿ ರೈನಾಗೆ ಟೀಮ್​ ಇಂಡಿಯಾದಲ್ಲಿ ಚಾನ್ಸ್​ ಸಿಕ್ಕಿರ್ಲಿಲ್ಲ.ಆದ್ರೆ ಈ ವರ್ಷದಲ್ಲಿ ಮತ್ತೆ ನಾನು ಟೀಮ್ ಇಂಡಿಯಾ ಜರ್ಸಿ ತೊಡಲೇಬೇಕೆಂದು ಪಣತೊಟ್ಟಿದ್ದ ಉತ್ತರ ಪ್ರದೇಶದ ಈ ಬ್ಯಾಟ್ಸ್​ಮನ್​​, ದೇಸಿ ಟೂರ್ನಿಗಳಲ್ಲಿ ಭರ್ಜರಿ ಪ್ರದರ್ಶನ ತೋರಿದ್ರು. ರೈನಾರ ಈ ಪರ್ಫಾಮೆನ್ಸ್​ ಸೆಲೆಕ್ಷನ್​ ಕಮಿಟಿಯ ಗಮನ ಸೆಳೆಯಿತು. ಹೀಗಾಗಿ ದಕ್ಷಿಣ ಆಫ್ರಿಕಾ ವಿರುದ್ಧದ ಟಿ-20 ಸರಣಿಗೆ ರೈನಾ ಸೆಲೆಕ್ಟ್​ ಆಗಿದ್ದಾರೆ.

ಇನ್ನು, ದಕ್ಷಿಣ ಆಫ್ರಿಕಾ ವಿರುದ್ಧದ ಮೂರು ಟಿ-20 ಪಂದ್ಯಗಳ ಸರಣಿಗೆ 16 ಸದಸ್ಯರ ತಂಡವನ್ನ ಆಯ್ಕೆ ಸಮಿತಿ ಪ್ರಕಟಿಸಿದೆ. 16 ಸದಸ್ಯರ ತಂಡದಲ್ಲಿ ಸ್ಥಾನ ಪಡೆದಿರೋ ರೈನಾ, ವರ್ಷದ ಬಳಿಕ ಮತ್ತೆ ತಂಡಕ್ಕೆ ಆಯ್ಕೆಯಾಗಿದ್ದಾರೆ. ಕಳೆದ ವರ್ಷ ತವರಿನಲ್ಲೇ ನಡೆದ ಇಂಗ್ಲೆಂಡ್ ವಿರುದ್ಧ ಟಿ-20 ಸರಣಿಯಲ್ಲಿ ಆಡಿದ್ದೇ, ಕೊನೆ. ಹೀಗಾಗಿ ಇದೀಗ ಮತ್ತೆ ತಂಡಕ್ಕೆ ವಾಪಸ್ಸಾಗಿದ್ದಾರೆ.ಉಳಿದಂತೆ ತಂಡವನ್ನು ವಿರಾಟ್​ ಕೊಹ್ಲಿ ಮುನ್ನಡೆಸಲಿದ್ದಾರೆ. ರೋಹಿತ್ ಶರ್ಮಾ, ಶಿಖರ್ ಧವನ್, ಕೆ.ಎಲ್ ರಾಹುಲ್, ಮನೀಶ್ ಪಾಂಡೇ ಬ್ಯಾಟ್ಸ್​​​ಮನ್​​ಗಳ ಪಟ್ಟಿಯಲ್ಲಿ ಸ್ಥಾನ ಪಡೆದಿದ್ದಾರೆ. ಇನ್ನು ವಿಕೆಟ್​ ಕೀಪರ್​​ ಎಂ,ಎಸ್ ಧೋನಿ, ದಿನೇಶ್ ಕಾರ್ತಿಕ್ ತಂಡದಲ್ಲಿ ಸ್ಥಾನ ಪಡೆದ್ರು. ಆಲ್​ರೌಂಡರ್​​ ರೂಪದಲ್ಲಿ ಸುರೇಶ್ ರೈನಾ, ಅಕ್ಸರ್​ ಪಟೇಲ್​ ತಂಡ ಸೇರಿಕೊಂಡಿದ್ದಾರೆ. ಇನ್ನು ಬೌಲಿಂಗ್​​​ನಲ್ಲಿ ಭುವನೇಶ್ವರ್ ಕುಮಾರ್, ಜೈದೇವ್ ಉನಾದ್ಕಟ್, ಶಾರ್ದೂಲ್ ಠಾಕೂರ್, ಕುಲ್ದೀಪ್ ಯಾದವ್, ಯಜ್ವಿಂದರ್ ಚಹಾಲ್, ಜಸ್ಪ್ರೀತ್ ಬೂಮ್ರಾ, ಭುವನೇಶ್ವರ್ ಕುಮಾರ್, ಜೈದೇವ್ ಉನಾದ್ಕಟ್, ಶಾರ್ದೂಲ್ ಠಾಕೂರ್ ಅಖಾಡ ಪ್ರವೇಶಿಸಲಿದ್ದಾರೆ. ಒಟ್ನಲ್ಲಿ ರೈನಾ ಜೊತೆ ಕನ್ನಡಿಗ ಕೆ.ಎಲ್ ರಾಹುಲ್ ಕೂಡ ಟಿ-20 ತಂಡಕ್ಕೆ ಆಯ್ಕೆಯಾಗಿದ್ದಾರೆ. ಫೆಬ್ರವರಿಯಿಂದ 18 ರಿಂದ ಮೂರು ಪಂದ್ಯಗಳ ಟಿ-20 ಸರಣಿ ಆರಂಭವಾಗಲಿದೆ.

ಶಿವಕುಮಾರ್, ಕೆ ಸ್ಪೋರ್ಟ್ಸ್ ಬ್ಯೂರೋ ಸುದ್ದಿಟಿವಿ

0

Leave a Reply

Your email address will not be published. Required fields are marked *