ಸುಪ್ರೀಂ ಆದೇಶ ಉಲ್ಲಂಘಿಸಿದ ವಿಜಯಪುರ ಪಾಲಿಕೆ

ಬಡವರ ಮಕ್ಕಳನ್ನು ಬಾವಿಗೆ ತಳ್ಳಿ ಆಳ ನೋಡುವ ಚಾಳಿಯನ್ನು ವಿಜಯಪುರ ಪಾಲಿಕೆ ಅಧಿಕಾರಿಗಳು ಇನ್ನು ಬಿಟ್ಟಿಲ್ಲ. ಮ್ಯಾನ್ ಹೋಲ್ ಗಳಲ್ಲಿನ ಮಲ ಎತ್ತೊ ಕೆಲಸ ಕಾರ್ಮಿಕರ ಬಳಿ ಮಾಡಿಸುವುದು ನಿಷೇಧ ಅಂತಾ ಸುಪ್ರೀಂ ತೀರ್ಪು ಇದ್ದರೂ ಇಲ್ಲಿ ಮಾತ್ರ ಅಧಿಕಾರಿಗಳು ಕ್ಯಾರೆ ಎನ್ನುತ್ತಿಲ್ಲ.. ಸ್ವತಃ ಪಾಲಿಕೆಯ ಅಧಿಕಾರಿಗಳೇ ತಡರಾತ್ರಿ ನಗರದ ಕೇಂದ್ರ ಬಸ್ ನಿಲ್ದಾಣದ ಬಳಿಯಿರುವ ಮ್ಯಾನ್ ಹೋಲ್ ಗೆ ಕಾರ್ಮಿಕರನ್ನು ಇಳಿಸಿದ್ದಾರೆ. ಇದನ್ನು ಗಮನಿಸಿದ ಸ್ಥಳೀಯರು ಅಧಿಕಾರಿಗಳನ್ನು ಪ್ರಶ್ನಿಸಿದರೆ ಇವರು ಮಾತ್ರ ಕೇರ್​ ಮಾಡದೇ ಕೆಲಸ ಮುಂದುವರೆಸಿದ್ದಾರೆ. ಹಾಗಂತ ಈ ರೀತಿ ಮ್ಯಾನ್ ಹೋಲ್ ನಲ್ಲಿ ಇಳಿಸಿ ಕೆಲಸ ಮಾಡಿಸುವುದು ನಿನ್ನೆ ಮೊನ್ನೆಯದಲ್ಲ. ಹಲವಾರು ವರ್ಷಗಳಿಂದ ಪಾಲಿಕೆ ಈ ಚಾಳಿಯನ್ನು  ಮುಂದುವರೆಸಿಕೊಂಡು ಸುಪ್ರೀಂ ಆದೇಶ ಉಲ್ಲಂಘಿಸುತ್ತಲೇ ಇದೆ. ಇನ್ನೊಂದೆಡೆ ನಗರದ ಶಿವಾಜಿ ಚೌಕ್, ಇಬ್ರಾಹಿಂಪೂರ್ ಸೇರಿದಂತೆ ಹಲವು ಪ್ರದೇಶಗಳಲ್ಲಿನ ಚರಂಡಿಗಳು ತುಂಬಿದರೆ ಪೌರ ಕಾರ್ಮಿರನ್ನಿಟ್ಟು ಕ್ಲೀನ್ ಮಾಡಿಸುತ್ತಾರೆ. ಕ್ಲೀನ್ ಮಾಡಿಸುವಾಗ ಪೌರ ಕಾರ್ಮಿಕರಿಗೆ ನೀಡಬೇಕಾದ ಯಾವುದೇ ಸೇಫ್ಟಿ ಗ್ಲೌಜ್, ಶೂ, ಮಾಸ್ಕ್​ಗಳನ್ನು ನೀಡದೆ ಬೇಜವಾಬ್ದಾರಿಯಿಂದ ಕೆಲಸ ಮಾಡಿಸುತ್ತಾರೆ. ಈ ಬಗ್ಗೆ ಜಿಲ್ಲಾಧಿಕಾರಿಗಳಿಗೆ ದೂರು ನೀಡಿದರೆ ಶಿಸ್ತಿನ ಕ್ರಮ ಕೈಗೊಳ್ಳುವುದಾಗಿ ಡಿಸಿ ಭರವಸೆ ನೀಡಿದ್ದಾರೆ. ಈ ಹಿಂದೆಯೂ ಮ್ಯಾನ್ ಹೋಲ್ ಗೆ ಇಳಿದ ಕಾರ್ಮಿಕರಿಬ್ಬರು ಸಾವನ್ನಪ್ಪಿದ್ದಾರೆ. ಆದರೂ, ವಿಜಯಪುರ ಮಹಾನಗರ ಪಾಲಿಕೆ ಮಾತ್ರ ಅದರ ಬಗ್ಗೆ ಎಚ್ಚೆತ್ತುಕೊಳ್ಳದೆ ಮೊಂಡಾಟ ಮುಂದುವರಿಸಿದೆ. ಒಟ್ಟಾರೆ, ಅಧಿಕಾರಿಗಳ ಬೇಜವಾಬ್ದಾರಿ ಮುಂದುವರೆದಿರೋದು ಅವರ ಆಡಳಿತಕ್ಕೆ ಹಿಡಿದ ಕೈಗನ್ನಡಿಯಾಗಿರುವುದಂತೂ ಸತ್ಯ..

0

Leave a Reply

Your email address will not be published. Required fields are marked *