ಕಟ್ಜು ಕ್ಷಮಾಪಣೆಗೆ ಸುಪ್ರೀಂ ಅಂಗೀಕಾರ

ನ್ಯಾಯಾಂಗ ನಿಂದನೆ ಪ್ರಕರಣಕ್ಕೆ ಸಂಬಂಧಿಸಿದಂತೆ ನ್ಯಾ. ಮಾರ್ಕಂಡೇಯ ಕಟ್ಜು ಕ್ಷಮಾಪಣೆಯನ್ನು ಸುಪ್ರೀಂ ಕೋರ್ಟ್​ ಅಂಗೀಕರಿಸಿದೆ. 2011ರ ಫೆ.1ರಂದು ಕೇರಳದಲ್ಲಿ ನಡೆದಿದ್ದ ಸೌಮ್ಯಾ ಎಂಬಾಕೆಯ ಅತ್ಯಾಚಾರ- ಕೊಲೆ ಪ್ರಕರಣದ ಆರೋಪಿಯ ಗಲ್ಲು ಶಿಕ್ಷೆಯನ್ನು ಸುಪ್ರೀಂ ಜೀವಾವಧಿಗೆ ಇಳಿಸಿತ್ತು. ಇದನ್ನು ಖಂಡಿಸಿ ಕಟ್ಜು ಅವರು ಸೆ.15ರಂದು ಬ್ಲಾಗ್‌ ಬರೆದಿದ್ದರು. ತೀರ್ಪಿನಲ್ಲಿ ಮೂಲ ಲೋಪಗಳಿವೆ ಎಂದು ಟೀಕಿಸಿದ್ದರು. ಇದಕ್ಕೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್​ ಕಟ್ಜು ಅವರಿಗೆ ನ್ಯಾಯಾಂಗ ನಿಂದನೆ ನೋಟಿಸ್‌ ನೀಡಿತ್ತು.ಆದ್ರೆ ಇದೀಗ ಕಟ್ಜು ತಮ್ಮ ಹೇಳಿಕೆಗೆ ಕ್ಷಮೆ ಕೋರಿರೋ ಹಿನ್ನೆಲೆಯಲ್ಲಿ ಸುಪ್ರೀಂ ಕೋರ್ಟ್​ ಕಟ್ಜು ವಿರುದ್ಧದ ನ್ಯಾಯಾಂಗ ನಿಂದನೆ ಕೈ ಬಿಟ್ಟಿದೆ.

0

Leave a Reply

Your email address will not be published. Required fields are marked *