ಸಂಚಲನ ಮೂಡಿಸಿದ ನ್ಯಾಯಾಂಗ ಕ್ಷಿಪ್ರ ಕ್ರಾಂತಿ-ಐತಿಹಾಸಿಕ ಸುದ್ದಿಗೋಷ್ಠಿಯಲ್ಲಿ ನ್ಯಾಯಾಂಗದ ಹುಳುಕು ಬಯಲು

ದೆಹಲಿ:ನ್ಯಾಯಾಂಗದ ಇತಿಹಾಸದಲ್ಲೇ ಮೊದಲ ಬಾರಿಗೆ ಸುಪ್ರೀಂಕೋರ್ಟ್​ನ ನ್ಯಾಯಮೂರ್ತಿಗಳು ನ್ಯಾಯಾಂಗ ವ್ಯವಸ್ಥೆ ವಿರುದ್ಧ ಸಿಡಿದೆದ್ದಿದ್ದಾರೆ..ಸುಪ್ರೀಂಕೋರ್ಟ್​​ನ ಆಡಳಿತ ವ್ಯವಸ್ಥೆಯ ಮುಖ್ಯಸ್ಥರಾಗಿರುವ ಮುಖ್ಯ ನ್ಯಾಯಮೂರ್ತಿ ದೀಪಕ್​ ಮಿಶ್ರಾ ಕಾರ್ಯವೈಖರಿ ಬಗ್ಗೆ ಬಹಿರಂಗವಾಗಿಯೇ ಅಸಮಾಧಾನ ಹೊರಹಾಕಿದ್ದಾರೆ.ನಾಲ್ವರು ನ್ಯಾಯಮೂರ್ತಿಗಳು ಸುದ್ದಿಗೋಷ್ಠಿ ನಡೆಸುವ ಮೂಲಕ ನ್ಯಾಯಾಂಗ ವ್ಯವಸ್ಥೆಯಲ್ಲಿ ಸಂಚಲನ ಮೂಡಿಸಿದ್ದಾರೆ.ಮುಖ್ಯ ನ್ಯಾಯಮೂರ್ತಿಗಳ ಆಡಳಿತ ಶೈಲಿಯ ಬಗ್ಗೆ ಪತ್ರವೊಂದನ್ನು ಬರೆದಿರುವ ನ್ಯಾಯಮೂರ್ತಿಗಳಾದ ಚಲಮೇಶ್ವರ್​,ಕುರಿಯನ್​ ಜೋಸೆಫ್​,ಮದನ್​ ಲೋಕುರ್​ ಮತ್ತು ರಂಜನ್​ ಗೋಗೋಯ್​ ಅದನ್ನು ಮಾಧ್ಯಮಗಳಿಗೆ ಬಿಡುಗಡೆ ಮಾಡಿದ್ದಾರೆ.ಸ್ವತಂತ್ರ ಮತ್ತು ನಿಷ್ಪಕ್ಷಪಾತ ನ್ಯಾಯದಾನ ಭಾರತದ ನ್ಯಾಯಾಂಗ ವ್ಯವಸ್ಥೆಯ ಮೈಲಿಗಲ್ಲು.ಆದ್ರೆ ಇತ್ತೀಚಿನ ಕೆಲ ವಿದ್ಯಮಾನಗಳು ಈ ನ್ಯಾಯಾಂಗದ ಘನೆತೆಗೆ ಧಕ್ಕೆ ತಂದಿವೆ.ನ್ಯಾಯಾಂಗ ವ್ಯವಸ್ಥೆಯಲ್ಲಿಯೇ ಭ್ರಷ್ಟಾಚಾರ ಆರೋಪ ಕೇಳಿಬಂದರೆ ಅದು ಪ್ರಜಾತಂತ್ರ ವ್ಯವಸ್ಥೆಗೆ ಧಕ್ಕೆ ಉಂಟಾಗಲಿದೆ ಎಂಬ ಆತಂಕ ವ್ಯಕ್ತಪಡಿಸಿದರು.ಮುಖ್ಯನ್ಯಾಯಮೂರ್ತಿ ದೀಪಕ್​ ಮಿಶ್ರಾ ವಿರುದ್ಧ ಪ್ರಮುಖ 4 ಆರೋಪಗಳನ್ನು ಮಾಡಿದ್ದಾರೆ.ಸುಪ್ರೀಂಕೋರ್ಟ್​,ಹೈಕೋರ್ಟ್​ ನ್ಯಾಯಮೂರ್ತಿಗಳ ನೇಮಕ ವಿಚಾರದಲ್ಲಿ ಪಾರದರ್ಶಕತೆ ಇಲ್ಲ..ತಮಗೆ ಬೇಕಾದ ಪೀಠಕ್ಕೆ ಪ್ರಕರಣಗಳ ವಿಚಾರಣೆ ನಡೆಸಲು ಅವಕಾಶ ನೀಡುತ್ತಾರೆ.ಸುಪ್ರೀಂಕೋರ್ಟ್​ ಆಡಳಿತ ವೈಖರಿ ಸರಿಯಾದ ರೀತಿಯಲ್ಲಿ ನಡೆಯುತ್ತಿಲ್ಲ..ಮುಖ್ಯ ನ್ಯಾಯಮೂರ್ತಿ ದೀಪಕ್​ ಮಿಶ್ರಾ ತಮ್ಮ ಅಧಿಕಾರ ದುರುಪಯೋಗಪಡಿಸಿಕೊಳ್ಳುತ್ತಿದ್ದಾರೆ ಎಂದು ನಾಲ್ವರು ನ್ಯಾಯಮೂರ್ತಿಗಳು ಆಕ್ರೋಶ ಹೊರಹಾಕಿದ್ದಾರೆ.ಇನ್ನು ನಾಲ್ವರು ನ್ಯಾಯಮೂರ್ತಿಗಳ ಈ ನಡೆಗೆ ಮಾಜಿ ಅಟಾರ್ನಿ ಜನರಲ್​ ಸೋಲಿ ಸೊರಾಬ್ಜಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ.ನ್ಯಾಯಮೂರ್ತಿಗಳು ಅಸಮಾಧಾನ ಇದ್ದಲ್ಲಿ,ಮುಖ್ಯ ನ್ಯಾಯಮೂರ್ತಿಗಳ ಬಳಿ ಹೋಗಬೇಕಿತ್ತು.ಈ ರೀತಿ ಸುದ್ದಿಗೋಷ್ಠಿ ನಡೆಸಬಾರದಿತ್ತು.ನ್ಯಾಯಾಂಗದಲ್ಲಿ ಬಿರುಕು ಉಂಟಾಗಬಾರದು ಎಂದು ಹೇಳಿದ್ದಾರೆ.

0

Leave a Reply

Your email address will not be published. Required fields are marked *