ಬಿಸಿಲಿನ ಬೇಗೆಯಿಂದ ತಪ್ಪಿಸಿಕೊಳ್ಳೊದಕ್ಕೆ ಪುರುಷರು ಕೂಡ ಪಾರ್ಲರ್ ನತ್ತ ಮುಖ ಮಾಡಿದ್ದಾರೆ…

ಬೇಸಿಗೆ ಬಂತದ್ರೆ ಸಾಕು ಮಹಿಳೆಯರು ಹೆಚ್ಚಾಗಿ ಪಾರ್ಲರ್ ಮೊರೆ ಹೋಗ್ತಾಯಿದ್ರು .ಆದ್ರೆ ಈ ಬಾರಿ ಬಿಸಿಲಿನ ಬೇಗೆ ಹೆಚ್ಚಾಗಿರೊದ್ರಿಂದ ಪುರುಷರು ಕೂಡ ಪಾರ್ಲರ್ ನ ಮೊರೆ ಹೊಗ್ತಾಯಿದ್ದಾರೆ .ಇತ್ತೀಚೆಗೆ ಎಲ್ಲೇಡೆ ಬಿಸಿಲು ಜಾಸ್ತಿ ಇರೊದ್ರಿಂದ ಜನ್ರು ಮನೆಯಿಂದ ಹೊರಗಡೆ ಬರೊದಕ್ಕೆ ಹಿಂದೆ ಮುಂದೆ ನೋಡುವ ಪರಿಸ್ಥಿತಿ ಎದುರಾಗಿದೆ.. ಕೆಲ ಮಹಿಳೆಯರು ಬಿಸಿಲಿನ ಬೇಗೆಯಿಂದ ತಪ್ಪಿಸಿಕೋಳ್ಳೊಕೆ ಅಂತಾ ಪಾರ್ಲರ್ ಮೊರೆ ಹೋಗ್ತಾಯಿದ್ದರು ಆದ್ರೆ ಈಗಾ ಪುರುಷರು ಕೂಡ ಬಿಸಿಲಿನಿಂದ ತಪ್ಪಿಸಿಕೊಳ್ಳೊದಕ್ಕೆ ಪಾರ್ಲರ್ ಗೆ ಹೆಚ್ಚಾಗೆ ಹೋಗ್ತಾಯಿದ್ದಾರೆ…

ಸಮ್ಮರ್ ಗೆ ಅಂತಾನೆ ಪುರುಷರಿಗೆ,ಮಕ್ಕಳಿಗೆ ಡಿಫರೆಂಟ್ ಆಗಿರೋ ಹೇರ್ ಸ್ಟೈಲ್ ಗಳು,ಫೇಶಿಯಲ್ ಬಂದಿದೆ.. ಸಮ್ಮರ್ ನಲ್ಲಿ ಬಿಸಿಲು ಹೆಚ್ಚಾಗಿರೊದ್ರಿಂದ ಮುಖ ಡಲ್ ಆಗಿರುತ್ತೆ.ಇದಕ್ಕಂತಾನೆ ಚಾರ್ಕೋಲ್ ಅನ್ನೋ ಫೇಶಿಯಲ್ ಬಂದಿದ್ದು ಇದು ಎಷ್ಟೆ ಬಿಸಿಲಿನಿಂದ ಮುಖ ಹಾಳಾಗಿದ್ದರು ಇದು ಮುಖಕ್ಕೆ ಫ್ರೇಶ್ ನೇಸ್ ನೀಡುತ್ತದೆ. ಹಾಗಾಗಿ ಹೆಚ್ಚು ಜನ್ರು ಈ ಚಾರ್ಕೋಲ್ ಫೇಶಿಯಲ್ ನ ಮೊರೆ ಹೋಗ್ತಾಯಿದ್ದಾರೆ. ಇದರ ಬೆಲೆ 1600 ರೂಪಾಯಿ , ಆದ್ರೆ ಸಮ್ಮರ್ ಗೆ ಅಂತಾನೆ ಈ ಫೇಶಿಯಲ್ ಅನ್ನು ಅರ್ಧ ಬೆಲೆ800 ರೂಪಾಯಿಗೆ ಜನ್ರಿಗೆ ವಿಶೇಷವಾದ ರಿಯಾಯಿತಿ ರೂಪಾದಲ್ಲಿ ಈ ಫೇಶಿಯಲ್ ಅನ್ನು ಮಾಡಲಾಗುತ್ತದೆ.. ಬೆಲೆ ಅರ್ಧಕ್ಕಿಂತ ಕಡಿಮೆ ಇರೊದ್ರಿಂದ ಜನ್ರು ಕೂಡ ಕಡಿಮೆ ಬೆಲೆಯಲ್ಲಿ ನಮ್ಮ ಮುಖದ ಸೌಂದರ್ಯವನ್ನು ಕಾಪಾಡಿಕೋಳ್ಳೋ ಉದ್ದೇಶದಿಂದ ಹೆಚ್ಚಾಗಿ ಪಾರ್ಲರ್ ನತ್ತ ಮುಖ ಮಾಡ್ತಾಯಿದ್ದಾರೆ.

ಇನ್ನೂ ಫೇಶಿಯಲ್ ನ ಜೊತೆಗೆ ಸಮ್ಮರ್ ಹೇರ್ ಕಟ್ ಕೂಡ ಬಂದಿದ್ದು.. ಇಷ್ಟ ದಿನ ಟ್ರೆಂಡಿಯಾಗಿದ್ದ ಹೆಬ್ಬುಲಿ ಹೇರ್ ಕಟ್,ವಿಲನ್ ಹೇರ್ ಕಟ್ ಹೀಗೆ ಹಲವಾರು ಚಿತ್ರ ನಟರ ಹೇರ್ ಕಟ್ ಗಳಿಗೆ ಜನ್ರು ಫಿದಾ ಆಗ್ತಿದ್ದರು. ಆದ್ರೆ ಈಗಾ ಸಮ್ಮರ್ ಗೆ ಅಂತಾನೆ ಸುದೀಪ್ ಸ್ಟೈಲ್ ಹೇರ್ ಕಟ್, ಲೈನ್ ಹೇರ್ ಕಟ್, ಹೀಗೆ ಹಲವಾರು ವೈರೈಟಿ ಹೇರ್ ಕಟ್ ಬಂದಿದ್ದು ಬೆಲೆ ಕೂಡ ಗ್ರಾಹಕರಿಗೆ ಕೈಗೆಟುಕುವಂತಿದೆ.ಮಕ್ಕಳಿಗೆ 100 ರೂಪಾಯಿ ಆದ್ರೆ ದೊಡ್ಡವರಿಗೆ120,150 ರೂಪಾಯಿದೆ ಯಿಂದ ಈ ಸಮ್ಮರ್ ಹೇರ್ ಕಟ್ ಗಳ ಬೆಲೆ ಶುರುವಾಗುತ್ತದೆ..ಒಟ್ನಲ್ಲಿ ಪುರುಷರಿಗೂ ಕೂಡ ಈ ಬಿಸಿಲಿನ ಬೇಗೆಯಿಂದ ತಪ್ಪಿಸಿಕೊಳ್ಳೊಕ್ಕೆ ಸಮ್ಮರ್ ಹೇರ್ ಕಟ್ ,ಫೇಶಿಯಲ್ ಗಳೂ ಬಂದಿರುವುದು ಪುರುಷರಿಗೆ ನಿಟ್ಟುಸಿರು ಬಿಡುವಂತಾಗಿದೆ….

 ಸುಪ್ರಿಯಾಶರ್ಮಾ ಸುದ್ದಿ ಟಿವಿ ಬೆಂಗಳೂರು….

0

Leave a Reply

Your email address will not be published. Required fields are marked *