ಜನರ ದೇಹವನ್ನು ತಂಪಾಗೊಳಿಸುತ್ತಿದೆ ರಾಗಿಅಂಬಲಿ,ಮಜ್ಜಿಗೆ…

ಅಬ್ಬಾಬ್ಬ ಈ ಬಿಸಿಲಿಂದ ಹೇಗಾಪ್ಪ ಪರಾಗೋದು, ಪ್ರೀಡ್ಜ್ ನೀರು ಕುಡಿಯೋಣ ಅಂದ್ರೆ ಎಲ್ಲಿ ಆರೋಗ್ಯ ಕೆಡುತ್ತೊ ಅನ್ನೊ ಭಯ,ಬಿಸಿಲಿನಿಂದ ತಪ್ಪಿಸಿಕೊಳ್ಳೊಕೆ ಎಷ್ಟು ಅಂತಾ ಈ ಜ್ಯೂಸ್, ಕೋಲ್ಡ್ ವಾಟರ್ ಕುಡಿಯೊಕೆ ಆಗುತ್ತೆ ನೀವೆ ಹೇಳಿ. ಇದಕ್ಕಂತನೇ ನಗರದಲ್ಲಿ ಕಡಿಮೆ ಬೆಲೆಯಲ್ಲಿ ಜನ್ರ ಆರೊಗ್ಯಕ್ಕೆ ಉತ್ತಮವಾಗಿರುವಂತಹ ಜ್ಯೂಸ್ ಸಿಗ್ತಾಯಿದೆ.ಯಾವುದಪ್ಪ ??? ಇಷ್ಟು ದಿನ ಆದ್ರು ನಮ್ ಕಣ್ಣಿಗೆ ಬೀಲ್ದೆ ಇರೊ ಈ ಜ್ಯೂಸ್, ಅಂತಾ ಯೋಚನೆ ಮಾಡ್ತಿದ್ದಿರಾ. ಜಾಸ್ತಿ ತಲೆ ಕೆಡಿಸ್ಕೊಬೇಡಿ. ಆ ಜ್ಯೂಸ್ ಯಾವ್ದು..? ಇದನ್ನ ಕುಡಿಯೊದ್ರಿಂದ ಆರೊಗ್ಯದಲ್ಲಿ ಇನೆಲ್ಲಾ ಪ್ರಯೋಜನಗಳು ಆಗುತ್ತೆ ಅನ್ನೋದ್ದನ್ನ ನಾವು ಹೇಳ್ತೀವಿ ಮಿಸ್ ಮಾಡ್ದೆ ಈ ಸ್ಟೋರಿ ನೊಡಿ….

ಇತ್ತೀಚೆಗೆ ರಾಜ್ಯದಲ್ಲಿ ಬಿಸಿಲಿನ ದಗೆ ಹೆಚ್ಚಾಗ್ತಾ ಇದ್ದು. ಇದ್ದರಿಂದ ತಪ್ಪಿಸಿಕೊಳ್ಳಕೆ ಜನ್ರು ಕೊಲ್ಡ್ ವಾಟರ್, ಜ್ಯೂಸ್. ಇವುಗಳಮೊರೆ ಹೊಗ್ತಿದ್ದಾರೆ. ಇವುಗಳನ್ನ ಕುಡಿಯೊದ್ರಿಂದ ಆರೊಗ್ಯ ಕೆಡುತ್ತೆ ಅಂತಾ ಗೊತ್ತಿದ್ರು ಬಿಸಿಲಿನಿಂದ ತಪ್ಪಿಸಿಕೊಳ್ಳೊಕೆ ಕುಡಿಲೇ ಬೇಕಾದ ಅನಿವಾರ್ಯ ಜನ್ರಿಗೆ ಇದೆ.ಆದ್ರೆ ಈಗಾ ನಗರದಲ್ಲಿ ಬಿಸಿಲಿಗೆ ದೇಹವನ್ನು ತಂಪಾಗಿಸೊಕೆ ಅಂತಾನೆ ಮಜ್ಜಿಗೆ, ಅಂಬಲಿಗಳು ರಸ್ತೆ ಬದಿಗೆ ಎಂಟ್ರಿ ಕೊಟ್ಟಿದೆ..ಜನ್ರು ಈ ಬಿಸಿಲಿನಲ್ಲಿ ತಮ್ಮ ದೇಹದ ಉಷ್ಣಾಂಶವನ್ನು ಕಡಿಮೆ ಮಾಡಿಕೊಳ್ಳೊದಕ್ಕೆ ಅಂತಾನೇ ಜ್ಯೂಸ್, ಕೊಲ್ಡ್ ವಾಟರ್ ಗಳನ್ನಾ ಕಡಿಮೆ ಮಾಡಿ ಈಗಾ ಹೆಚ್ಚಾಗಿ ಮಜ್ಜಿಗೆ,ರಾಗಿ ಅಂಬಲಿ ಕಡೆಗೆ ಮುಖಾ ಮಾಡಿದ್ದಾರೆ. ನಗರದ ಶಾಂತಿನಗರ,ರಿಚ್ಚ್ ಮಂಡ್ ಸರ್ಕಲ್,ಮೆಜೆಸ್ಟಿಕ್ ಇನ್ನು ಹಲವಾರು ಕಡೆ ಈ ಮಜ್ಜಿಗೆ ,ಅಂಬಲಿಗೆ ಬೇಡಿಕೆ ಹೆಚ್ಚಾಗಿದ್ದು ಗ್ರಾಹಕರಿಗೆ ಕೈಗೆಟಕುವ ಬೆಲೆಯಲ್ಲಿ ಸಿಗ್ತಾಯಿದೆ. ಮಜ್ಜಿಗೆ ಜೊತೆಗೆ ಉಪ್ಪಿನ ಕಾಯಿ, ಮೂಲಂಗಿ. ಮೆಣಸಿನಕಾಯಿ ಯನ್ನು ಸಹ ಕೊಡಲಾಗುತ್ತದೆ. ಮಜ್ಜಿಗೆ ಬೆಲೆ15 ರೂಪಾಯಿ ಇದ್ರೆ ಅಂಬಲಿ ಬೆಲೆ ಕೂಡ 15 ರೂಪಾಯಿ ಇದೆ.ಒಟ್ನಲ್ಲಿ ಇಷ್ಟು ದಿನ ಈ ಬಿಸಿಲಿನಿಂದ ದೇಹವನ್ನು ಹೇಗಾಪ್ಪ ತಂಪು ಮಾಡಿಕೊಳ್ಳೊದು ಅಂತಾ ಯೋಚನೆ ಮಾಡ್ತಾಯಿದ್ದ ಜನ್ರಿಗೆ ಅಂಬಲಿ, ಮಜ್ಜಿಗೆ ಸಿಗ್ತಾಯಿರೊದು ಫುಲ್ ರೀಲಿಫ್ ಸಿಕ್ಕಾಂತಾಗಿದೆ..

ಸುಪ್ರಿಯಾ ಶರ್ಮಾ ಸುದ್ದಿ ಟಿವಿ ಬೆಂಗಳೂರು….

0

Leave a Reply

Your email address will not be published. Required fields are marked *