ಆಡದೇ ಮಾಡುವವನು ರೂಢಿಯೊಳಗೆ ಉತ್ತಮ

ನನಗೆ ರಾಜಕೀಯ ಸಭೆಗಳಲ್ಲಿ ಮಾತನಾಡಿ ಗೊತ್ತಿಲ್ಲ. ಹಳ್ಳಿಗಳಲ್ಲಿ ಮಾತನಾಡುವುದು ಹೆಚ್ಚು ಎಂದು ವಿಧಾನಸೌಧದಲ್ಲಿ ಇನ್ಫೋಸಿಸ್ ಮುಖ್ಯಸ್ಥೆ ಡಾ.ಸುಧಾಮೂರ್ತಿ ಹೇಳಿಕೆ ನೀಡಿದ್ದಾರೆ. ಆಡದೇ ಮಾಡುವವನು ರೂಢಿಯೊಳಗೆ ಉತ್ತಮನು. ಹಾಗಾಗಿ ನಾವು ಮಾತನಾಡದೆ ಕೆಲಸ ಮಾಡಬೇಕು. ನಮ್ಮ ಕೆಲಸವೇ ನಮ್ಮ ಬಗ್ಗೆ ಹೇಳಬೇಕು ಎಂದು ಹೆಳಿದ್ರು.. ನಾನು ಹಲವು ದೇಶಗಳನ್ನು ಸುತ್ತಿರಬಹುದು. ಆದರೆ ಎಲ್ಲಕ್ಕಿಂತ ನಮ್ಮ ಕರ್ನಾಟಕವೇ ನಮಗೆ ಇಷ್ಡ. ಇದು ನಮ್ಮ ತಾಯಿ ನಾಡು. ನಾವು ಈ ತಾಯ್ನೆಲಕ್ಕೆ ಎಷ್ಡು ಸೇವೆ ಸಲ್ಲಿಸಿದ್ರೂ ಋಣ ತೀರಿಸಲಾಗದು ಹಾಗಾಗಿ ನನ್ನ ತಾಯಿ ನೆಲಕ್ಕೆ ಈ ಅಳಿಲು ಸೇವೆ ಮಾಡುತ್ತಿದ್ದೇನೆ ಎಂದು ವಿಧಾನಸೌಧದಲ್ಲಿ ಇನ್ಫೋಸಿಸ್ ಮುಖ್ಯಸ್ಥೆ ಡಾ.ಸುಧಾಮೂರ್ತಿ ಹೇಳಿಕೆ ನೀಡಿದರು.

0

Leave a Reply

Your email address will not be published. Required fields are marked *