ಇದು ವಿದ್ಯಾರ್ಥಿಗಳು ನೋಡಲೇಬೇಕಾದ ಚಿತ್ರ

ವೇಮಗಲ್​ ಜಗನ್ನಾಥ್​ರಾವ್​ ನಿರ್ದೇಶನದ ಸಸ್ಪೆನ್ಸ್​ ಹಾರರ್​ ಚಿತ್ರ ಅನ್ವೇಷಿ. ವಿಭಿನ್ನ ಕಥಾಹಂದರವುಳ್ಳ ಅನ್ವೇಷಿ ಚಿತ್ರ ಇದೇ ಶುಕ್ರವಾರ ಡಿಸೆಂಬರ್​ 8ನೇ ತಾರೀಖು ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ. ಅನ್ವೇಷಿ ಚಿತ್ರದ ಮೂಲಕ ನಟ ತಿಲಕ್​ ಮತ್ತೊಮ್ಮೆ ಹಾರರ್​ ಚಿತ್ರದಲ್ಲಿ ಪ್ರತ್ಯಕ್ಷರಾಗಿದ್ದಾರೆ. ಈ ಚಿತ್ರದ ಕೀ ರೋಲ್​ನಲ್ಲಿ ಅಭಿನಯಿಸಿರೋ ತಿಲಕ್​ರ ವೇಷ ಭೂಷಣ ಆ ಪಾತ್ರದ ಬಗ್ಗೆ ಕುತೂಹಲ ಕೆರಳಿಸುತ್ತೆ.​​ ಈ ಹಾರರ್​​​ ಕಥಗೆ ನಾಯಕನಾಗಿ ಕಾಣಿಸಿಕೊಂಡಿರೋದು ರಘು ಭಟ್​​. ಈ ಹಿಂದೆ ಸಣ್ಣ ಪಾತ್ರಗಳಲ್ಲಿ ಅಭಿನಯಿಸ್ತಾ ಇದ್ದ ರಘು ಇದೇ ಮೊದಲ ಬಾರಿಗೆ ನಾಯಕ ನಟನ ಪಾತ್ರ ಅಲಂಕರಿಸಿದ್ದಾರೆ. ಅದು ಪೊಲೀಸ್​​ ಆಗಿ ಅನ್ನೋದು ವಿಶೇಷ. ಇವರ ಜೊತೆಗೆ ನಟಿ ದಿಶಾ ಪೂವಯ್ಯ ಕೂಡ ಚಿತ್ರದ ಪ್ರಮುಖ ಪಾತ್ರದಲ್ಲಿ ಅಭಿನಯಿಸಿದ್ದಾರೆ.

ಸಸ್ಪೆನ್ಸ್​ ಮತ್ತು ಹಾರರ್​ ಕಥೆಯಾಧಾರಿತ ಈ ಚಿತ್ರವನ್ನು ವಿದ್ಯಾರ್ಥಿಗಳು ನೋಡಲೇಬೇಕು. ಹಾಗಂತ ಚಿತ್ರತಂಡ ಈ ಚಿತ್ರದ ಪೋಸ್ಟರ್​ಮೇಲೆ ಬರೆದುಕೊಂಡಿದ್ದಾರೆ. ಕಾಲೇಜಿನಲ್ಲಿ ನಡೆಯುವ ರ್ಯಾಗಿಂಗ್​ನಿಂದ ಏನೆಲ್ಲಾ ಸಮಸ್ಯೆಗಳು ಎದುರಾಗುತ್ತದೆ ಎಂಬ ವಿಷಯ ಸಿನಿಮಾದಲ್ಲಿದೆಯಂತೆ. ಹಾಗಾಗಿ ವಿದ್ಯಾರ್ಥಿಗಳಿಗೆ ಉತ್ತಮ ಮೆಸೇಜ್​ ಕೊಡುವ ಉದ್ದೇಶವನ್ನಿಟ್ಟುಕೊಂಡಿದ್ದಾರೆ ಚಿತ್ರತಂಡ. ಇನ್ನು ಅನ್ವೇಷಿ ಚಿತ್ರದ ಶೂಟಿಂಗ್​ನ್ನು ಮಂಗಳೂರು, ಉಡುಪಿ, ಬೆಂಗಳೂರು ಮೈಸೂರು ಸುತ್ತಮುತ್ತಲಿನ ಅದ್ಭುತ ಪ್ರದೇಶ​ಗಳಲ್ಲಿ ಚಿತ್ರೀಕರಣ​ ಮಾಡಲಾಗಿದೆ. ಇನ್ನು ಈಗಾಗಲೇ ಚಿತ್ರದ ಟ್ರೈಲರ್​ ಮತ್ತು ಹಾಡುಗಳು ಸಾಮಾಜಿಕ ಜಾಲತಾಣದಲ್ಲಿ ಉತ್ತಮ ರೆಸ್ಪಾನ್ಸ್​ ಪಡೆದುಕೊಂಡಿವೆ. ಇಡೀ ಚಿತ್ರತಂಡ ಚಿತ್ರ ಗೆಲ್ಲುವ ಭರವಸೆಯಿಂದ ಇದೇ ವಾರ ಪ್ರೇಕ್ಷಕರೆದುರು ಬರಲು ತಯಾರಾಗಿದ್ದಾರೆ.

ಹರೀಶ್.ಕೆ.ಗೌಡ. ಫಿಲ್ಮ್​ ಬ್ಯೂರೋ, ಸುದ್ದಿ ಟಿವಿ.

0

Leave a Reply

Your email address will not be published. Required fields are marked *