ನಕಲಿ ಅಂಕಪಟ್ಟಿ ನೀಡಿದ್ದ ವಿದ್ಯಾರ್ಥಿಗಳಿಗೆ ಪರೀಕ್ಷೆಗೆ ಅವಕಾಶ

ಬಳ್ಳಾರಿ: ನಕಲಿ ಅಂಕಪಟ್ಟಿ ನೀಡಿ ಪದವಿ ಪ್ರವೇಶ ಹಿನ್ನಲೆಯಲ್ಲಿ ವಿವಿಧ ವಿಭಾಗದ ವಿದ್ಯಾರ್ಥಿಗಳನ್ನು ಪರೀಕ್ಷೆಗೆ ಕೂರಿಸುವುದಿಲ್ಲ ಎಂದು ಬಳ್ಳಾರಿಯ ವಿಜಯನಗರ ಶ್ರೀ ಕೃಷ್ಣ ದೇವರಾಯ ವಿಶ್ವವಿದ್ಯಾಲಯ ಖಡಾಖಂಡಿತವಾಗಿ ಹೇಳಿತ್ತು. ಇದರಿಂದ ಸುಮಾರು ೮೬೬ ವಿದ್ಯಾರ್ಥಿಗಳ ಭವಿಷ್ಯ ಡೋಲಾಯಮಾನವಾಗಿತ್ತು. ವಿಶ್ವವಿದ್ಯಾಲಯದ ಈ ನಡೆಯನ್ನು ಪ್ರಶ್ನಿಸಿ ಕೆಲ ವಿದ್ಯಾರ್ಥಿಗಳು ಕೋರ್ಟ್ ಮೆಟ್ಟೇಲೇರಿದ್ದರು. ಆದರೆ ವಿಜಯನಗರ ಶ್ರೀ ಕೃಷ್ಣ ದೇವರಾಯ ವಿಶ್ವ ವಿದ್ಯಾಲಯ ಇದಕ್ಕೆ ಮಾತ್ರ ಕ್ಯಾರೆ ಅಂದಿದ್ದಿಲ್ಲ. ಆದರೆ ಅದೇ ವಿಶ್ವವಿದ್ಯಾಲಯ ಇದೀಗ ವಿದ್ಯಾರ್ಥಿಗಳ ಮೇಲೆ ಕರುಣೆ ತೋರಿ ಪರೀಕ್ಷೆಗೆ ಕೂರಿಸಲು ಮಹತ್ವದ ಆದೇಶ ಹೊರಡಿಸಿದ್ದು, ನಕಲಿ ಅಂಕಪಟ್ಟಿ ನೀಡಿ ಪದವಿ ಪ್ರವೇಶ ಪಡೆಯಲು ಮುಂದಾದ ವಿದ್ಯಾರ್ಥಿಗಳಿಗೆ ಬಿಗ್ ರಿಲೀಫ್ ಸಿಕ್ಕಂತಾಗಿದೆ. ಇನ್ನು 866 ವಿದ್ಯಾರ್ಥಿಗಳಿಗೆ ಪರೀಕ್ಷೆಗೆ ಅವಕಾಶ ನೀಡಲು ಆದೇಶ ಹೊರಡಿಸಿರುವ ವಿವಿ ಪ್ರತ್ಯೇಕವಾಗಿ ಪರೀಕ್ಷೆ ನಡೆಸಲು ಅವಕಾಶ ನೀಡಿ, ಪರೀಕ್ಷಾ ಶುಲ್ಕ ಕಟ್ಟಲು ಕೂಡ ಅಧಿಸೂಚನೆ ಹೊರಡಿಸಿದೆ.

0

Leave a Reply

Your email address will not be published. Required fields are marked *