ವಿದ್ಯಾರ್ಥಿನಿಯನ್ನು ವಿವಸ್ತ್ರಗೊಳಿಸಿ ವೀಡಿಯೋ ಚಿತ್ರೀಕರಿಸಿದ ಸಹಪಾಠಿಗಳು

ಮಲಕನ್​ಗಿರಿ: ವಿದ್ಯಾರ್ಥಿನಿಯೊಬ್ಬಳನ್ನು ಶಾಲೆಯ ಆವರಣದಲ್ಲೇ ವಿವಸ್ತ್ರಗೊಳಿಸಿ, ವೀಡಿಯೋ ಚಿತ್ರೀಕರಣ ಮಾಡಿದ ಅಮಾನವೀಯ ಘಟನೆ ಒಡಿಶಾ ರಾಜ್ಯದ ಮಲಕನ್​ಗಿರಿಯಲ್ಲಿ ನಡೆದಿದೆ. ಈ ಸಂಬಂಧ ದೂರು ದಾಖಲಾಗಿದೆ. ಪೋಸ್ಕೋ ಮತ್ತು ಮಾಹಿತಿ ತಂತ್ರಜ್ಞಾನ ಕಾಯ್ದೆಯಡಿ ದೂರು ದಾಖಲಿಸಿಕೊಂಡಿದ್ದೇವೆ. ಘಟನೆ ಕುರಿತು ತನಿಖೆ ನಡೆಸಲು ವಿಶೇಷ ತಂಡವನ್ನು ರಚಿಸಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ಅಪರಾಧಿಗಳ ವಿರುದ್ಧ ಕಠಿಣ ಶಿಕ್ಷೆಗೆ ಬಾಲಕಿಯ ಪೋಷಕರು ಆಗ್ರಹಿಸಿದ್ದಾರೆ.

0

Leave a Reply

Your email address will not be published. Required fields are marked *