ಕೆಎಸ್​ಒಯು ಮಾನ್ಯತೆ ನವೀಕರಿಸಲು ಮುಂದಾದ ರಾಜ್ಯ ಸರ್ಕಾರ

ಕರ್ನಾಟಕ ರಾಜ್ಯ ಮುಕ್ತ ವಿವಿಗೆ ಮಾನ್ಯತೆ ದೊರಕಿಸಿಕೊಡಲು ರಾಜ್ಯ ಸರ್ಕಾರ ಮತ್ತೊಂದು ಪ್ರಯತ್ನಕ್ಕೆ ಮುಂದಾಗಿದೆ. ಮುಂದಿನ ತಿಂಗಳ ಆರಂಭದಲ್ಲಿ ಕೇಂದ್ರದ ಮಾನವ ಸಂಪನ್ಮೂಲ ಖಾತೆ ಸಚಿವ ಪ್ರಕಾಶ್ ಜಾವಡೇಕರ್​ ಜೊತೆ ಮತ್ತೊಂದು ಸುತ್ತಿನ ಮಾತುಕತೆ ನಡೆಸಲು ಸರ್ಕಾರ ತೀರ್ಮಾನಿಸಿದೆ..

ಕರ್ನಾಟಕ ರಾಜ್ಯ ಮುಕ್ತ ವಿವಿಗೆ 2013-14ರಿಂದ ರದ್ದಾಗಿರುವ ಮಾನ್ಯತೆ ನವೀಕರಿಸಲು ದೊರಕಿಸಿಕೊಡಲು ರಾಜ್ಯ ಸರ್ಕಾರ ತನ್ನ ಪ್ರಯತ್ನಗಳನ್ನು ಮುಂದುವರೆಸಿದೆ. ಮುಂದಿನ ತಿಂಗಳು ಕೇಂದ್ರ ಸರ್ಕಾರದ ಜೊತೆ ಮಾತುಕತೆ ನಡೆಸಲು ಸರ್ಕಾರ ಮುಂದಾಗಿದೆ. ಈ ಸಂಬಂಧ ವಿಧಾನಸೌಧದಲ್ಲಿ ಮಾತಾಡಿದ ಉನ್ನತ ಶಿಕ್ಷಣ ಇಲಾಖೆ ಸಚಿವ ಬಸವರಾಜ ರಾಯರೆಡ್ಡಿ, ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಕರ್ನಾಟಕ ಮುಕ್ತ ವಿವಿಗೆ ಮಾನ್ಯತೆ ದೊರೆಯಬೇಕು. ಅಕ್ಟೋಬರ್ ಮೊದಲ ವಾರದಲ್ಲಿ ಕೇಂದ್ರ ಮಾನವ ಸಂಪನ್ಮೂಲ ಖಾತೆ ಸಚಿವ ಪ್ರಕಾಶ್ ಜಾವಡೇಕರ್​ ಭೇಟಿ ಮಾಡ್ತೇನೆ ಭೇಟಿ ವೇಳೆ ಕೆಎಸ್​ಒಯುಗೆ ಮಾನ್ಯತೆ ದೊರಕಿಸಿಕೊಡುವ ಬಗ್ಗೆ ಸಮಾಲೋಚನೆ ನಡೆಸುತ್ತೇನೆ

ಯುಜಿಸಿಯಿಂದ ಕೆಲವು ಆಕ್ಷೇಪಣೆಗಳಿಗೆ ಸ್ಪಷ್ಟೀಕರಣಗಳನ್ನು ಕೇಳಲಾಗಿತ್ತು. ಕೆಎಸ್​ಒಯು ತನ್ನ ಸ್ಪಷ್ಟೀಕರಣಗಳನ್ನು ಯುಜಿಸಿಗೆ ನೀಡಿದೆ. ಆದ್ರೆ ರಾಜ್ಯ ಸರ್ಕಾರಕ್ಕೆ ಕೆಎಸ್​ಒಯು ಆಡಳಿತದಲ್ಲಿ ಮಧ್ಯಪ್ರವೇಶಿಸುವ ಅಧಿಕಾರ ಇಲ್ಲ. ವಿವಿಗಳಲ್ಲಿ ಅಕ್ರಮ ನಡೆದರೆ ಅದರ ವಿರುದ್ಧ ಕ್ರಮ ಕೈಗೊಳ್ಳುವ, ಕುಲಪತಿ, ಕುಲಸಚಿವರನ್ನು ನೇಮಿಸುವ ಅಧಿಕಾರ ಸರ್ಕಾರಕ್ಕಿಲ್ಲ. ಇದೇ ಕಾರಣಕ್ಕಾಗಿ ವಿಶ್ವವಿದ್ಯಾಲಯಗಳ ಕಾಯ್ದೆಯನ್ನು ಸರಿ ಮಾಡಲು ಸರ್ಕಾರ ಮುಂದಾಗಿದೆ ಅಂದ್ರು. ಕುಲಪತಿ, ಉಪಕುಲಪತಿಗಳು ಪ್ರಮಾಣಿಕವಾಗಿ ಕೆಲಸ ಮಾಡಬೇಕು. ಕೆಎಸ್​ಒಯು ಪ್ರಕರಣದಲ್ಲಿ ಕುಲಪತಿ, ಕುಲಸಚಿವರ ವಿರುದ್ಧ ಕ್ರಮ ಕೈಗೊಳ್ಳುವ ಅಧಿಕಾರ ಸರ್ಕಾರಕ್ಕಿಲ್ಲ ಅಂದ್ರು..

ರಾಜ್ಯ ಸರ್ಕಾರ ಕೆಎಸ್​ಒಯುಗೆ ಮಾನ್ಯತೆ ದೊರಕಿಸಿಕೊಡುವ ಸಂಬಂಧ ಸಚಿವ ರಾಯರೆಡ್ಡಿ ಕೇಂದ್ರ ಸಚಿವ ಪ್ರಕಾಶ್ ಜಾವಡೇಕರ್ ಜೊತೆ ಮೂರು ಬಾರಿ ಯುಜಿಸಿ ಮುಖ್ಯಸ್ಥರ ಜೊತೆ ಎರಡು ಬಾರಿ ಚರ್ಚೆ ನಡೆಸಿದ್ದಾರೆ. ಆಗಸ್ಟ್ 22ರಂದು ಸಿಎಂ ಸಿದ್ದರಾಮಯ್ಯ ಮಾನ್ಯತೆ ನವೀಕರಣಕ್ಕೆ ಕೋರಿ ಖುದ್ದು ಪ್ರಧಾನಿ ನರೇಂದ್ರ ಮೋದಿಯವರಿಗೇ ಪತ್ರ ಬರೆದಿದ್ರು. ಆದ್ರೆ ಇದ್ಯಾವುದರಿಂದಲೂ ಪ್ರಯೋಜನವಾಗಿಲ್ಲ. ಈಗ ಸರ್ಕಾರ ಮತ್ತೊಂದು ಪ್ರಯತ್ನಕ್ಕೆ ಮುಂದಾಗಿದೆ. ಏನಾಗುತ್ತದೋ ಕಾದು ನೋಡಬೇಕಿದೆ..

0

Leave a Reply

Your email address will not be published. Required fields are marked *