ರಾಜ್ಯ ಸರ್ಕಾರವನ್ನ 10 ಪರ್ಸೆಂಟ್​ ಸರ್ಕಾರ ಎನ್ನುವ ಮೋದಿ, ದಾಖಲೆ ತೋರಿಸಲಿ..

ಬೆಂಗಳೂರು ನಗರಾಭಿವೃದ್ಧಿ ಸಚಿವ ಕೆ.ಜೆ. ಜಾರ್ಜ್​​ ಇಂದು ಕೇಂದ್ರ ಹಾಗೂ ರಾಜ್ಯ ಬಿಜೆಪಿ ನಾಯಕರ ವಿರುದ್ಧ ವಾಗ್ದಾಳಿ ನಡೆಸಿದ್ರು. ಪ್ರಧಾನಿ ನರೇಂದ್ರ ಮೋದಿ ರಾಜ್ಯ ಸರ್ಕಾರವನ್ನ 10 ಪರ್ಸೆಂಟ್​ ಸರ್ಕಾರ ಅಂತಾರೆ. ಅವ್ರದ್ದು ಎಷ್ಟು ಪರ್ಸೆಂಟ್​ ಸರ್ಕಾರ ಅಂತ ಘೋಷಿಸಲಿ ಅಂತ ಸವಾಲೆಸೆದಿದ್ದಾರೆ. ಅಲ್ಲದೆ ಬಿಜೆಪಿ ಸಂಸದರು ಬೆಂಗಳೂರಿಗೆ ಏನು ಕೊಡುಗೆ ನೀಡಿದ್ದಾರೆ ಅಂತ ಕೂಡ ಸರ್ವಜ್ಞನಗರ ವಿಧಾನಸಭಾ ಕ್ಷೇತ್ರ ಭೇಟಿ ಸಂದರ್ಭದಲ್ಲಿ ಬಿಜೆಪಿ ನಾಯಕರನ್ನು ತರಾಟೆಗೆ ತೆಗೆದುಕೊಂಡ್ರು..ಪ್ರಧಾನಿ ನರೇಂದ್ರ ಮೋದಿ ಅವರ 10 ಪರ್ಸೆಂಟ್​​ ಸರ್ಕಾರ ಎಂಬ ಹೇಳಿಕೆಗೆ ಸಚಿವ ಕೆ.ಜೆ. ಜಾರ್ಜ್​ ತಿರುಗೇಟು ನೀಡಿದ್ದಾರೆ. ಸರ್ವಜ್ಞ ನಗರ ವಿಧಾನಸಭಾ ಕ್ಷೇತ್ರ ಭೇಟಿ ನೀಡಿದ ವೇಳೆ ವಿವಿಧ ಕಾಮಗಾರಿ ಪರಿಶೀಲನೆ ನಡೆಸಿ ಬಳಿಕ ಮಾತನಾಡಿದ ಅವರು, ನಮ್ಮ ಸರ್ಕಾರವನ್ನ 10 ಪರ್ಸೆಂಟ್​ ಕಮಿಷನ್​​ ಸರ್ಕಾರ ಅಂಥಾ ಪ್ರಧಾನಿ ಮೋದಿ ಹೇಳ್ತಾರೆ. ಇದಕ್ಕೆ ಅವ್ರ ಬಳಿ ದಾಖಲೆಗಳಿವೆಯೇ? ನಾವು 10 ಪರ್ಸೆಂಟ್​ ಕಮೀಷನ್ ಆದ್ರೆ, ಮೋದಿ ಅವರದ್ದು ಎಷ್ಟು ಪರ್ಸೆಂಟ್ ಕಮಿಷನ್ ಸರ್ಕಾರ? 25,000 ಲಕ್ಷ ಕೋಟಿ ಬಜೆಟ್​ನಲ್ಲಿ ಮೋದಿ ಅವ್ರೇ ಎಷ್ಟು ಕಮಿಷನ್ ಹೊಡೆದಿದ್ದೀರಾ? ಅಂತ ಹರಿಹಾಯ್ದರು.

ಬಿಜೆಪಿಯವ್ರಿಗೆ ಕಾಂಗ್ರೆಸ್​ ಕುರಿತು ನಡುಕ ಶುರುವಾಗಿಬಿಟ್ಟಿದೆ. ಅಮಿತ್ ಶಾ ಅವರನ್ನು ಸುಳ್ಳು ಹೇಳಲು ಬೆಂಗಳೂರಿಗೆ ಕರೆಸಿಕೊಳ್ತಾರೆ ಅಂತ ಆರೋಪಿಸಿದ ಕೆ ಜೆ ಜಾರ್ಜ್​, 17 ಸಾವಿರ ಕೋಟಿ ಸಬ್ ಅರ್ಬನ್ ಟ್ರೈನಿಗೆ ಕೊಟ್ಟಿದ್ದೀವಿ ಅಂತಾರೆ. ಆದ್ರೆ, ಸಬ್ ಅರ್ಬನ್ ರೈಲಿಗೆ 350 ಕೋಟಿ ರೂ. ಕೊಟ್ಟದ್ದು ಸಿಎಂ ಸಿದ್ದರಾಮಯ್ಯ. ಪ್ರಧಾನಿಯವರು ಗ್ರೀನ್ ಫ್ಲಾಗ್ ತೋರಿಸಲು ಪ್ರಧಾನಿ ಬರ್ತಾರೆ ಅಂತ ಕಿಡಿಕಾರಿದ್ರು. ಬೆಂಗಳೂರು ರಕ್ಷಿಸಿ ಅಂತ ಅಂತ ಬಿಜೆಪಿ ಅವ್ರು ಯಾತ್ರೆ ಮಾಡ್ತಾರೆ, ಅನ್ನೋದೆ ಹಾಸ್ಯಾಸ್ಪದ. ಬಿಜೆಪಿ ಲೋಕಸಭಾ ಸದಸ್ಯರು ಏನೂ ಕೆಲಸ ಆಗಿಲ್ಲ ಅಂತಾರೆ. ಅವ್ರು ಕಣ್ಣು ತೆರೆದು ನೋಡಲಿ. ಅನಂತ್ ಕುಮಾರ್, ಸದಾನಂದಗೌಡರಿಗೆ ನಾನು ಪ್ರಶ್ನೆ ಮಾಡ್ತೀನಿ.. ನಗರಕ್ಕೆ ನೀವೇನು ಕೊಡುಗೆ ನೀಡಿದ್ದೀರಾ? ಎಂದು ಅವರು ಪ್ರಶ್ನಿಸಿದ್ರು. ಬೆಂಗಳೂರು ಅಭಿವೃದ್ಧಿಗೆ ವಿರೋಧವಾಗಿರೋರು ಲೋಕಸಭೆಗೆ ಆಯ್ಕೆ ಆಗಿದ್ದಾರೆ. ರಾಜ್ಯ ಸಭೆಯಲ್ಲೂ ಅದೇ ರೀತಿ ಆಗಿದೆ. ಬೆಂಗಳೂರಿಗೆ ಬಂದು ಮತ ಯಾಚಿಸೋಕೆ ನಿಮಗೆ ನಾಚಿಕೆ ಆಗಲ್ವಾ? ಅಂಥಾ ಅವ್ರು ಆಕ್ರೋಶ ವ್ಯಕ್ತಪಡಿಸಿದ್ರು.ರಾತ್ರೋ ರಾತ್ರಿ ಟೆಂಡರ್ ಕರೆದು ಪಾಲಿಕೆ ಲೂಟಿ ಹೊಡೆದಿದ್ದು ಬಿಜೆಪಿಯವ್ರು. ನಮ್ಮ ಮೇಯರ್​​ಗಳು ಚೆನ್ನಾಗಿ ಕೆಲಸ ಮಾಡಿದ್ದಾರೆ. ನಾವು ದಾಖಲೆ ಇಟ್ಟುಕೊಂಡು ಮಾತಾಡ್ತೀವಿ. ಬಿಜೆಪಿ ಅವರಂತೆ ಮನ್​ ಕಿ ಬಾತ್ ಮಾತಾಡಲ್ಲ. ನಮ್ಮದೇನಿದ್ರೂ, ಕಾಮ್​ ಕಿ ಬಾತ್​ ಅಂತ ಚಾಟಿ ಬೀಸಿದ್ರು.

ಶಶಿರೇಖಾ, ಸುದ್ದಿಟಿವಿ, ಬೆಂಗಳೂರು

0

Leave a Reply

Your email address will not be published. Required fields are marked *