ಐತಿಹಾಸಿಕ ನಿರ್ಧಾರಕ್ಕೆ ಮುನ್ನುಡಿ ಬರೆದ ರಾಜ್ಯ ಸರ್ಕಾರ 

 

ರಾಜ್ಯ ಸರ್ಕಾರವು ಮುಂದಿನ ವಿಧಾನಮಂಡಲ ಅಧಿವೇಶನದಿಂದ ಐತಿಹಾಸಿಕ ಬದಲಾವಣೆಗಳನ್ನು ಜಾರಿಗೆ ತರ್ತಿದೆ. ಅದರಲ್ಲೂ ಪ್ರಮುಖವಾಗಿ ಶಾಸಕರು ಇನ್ನು ಮುಂದೆ ಅಧಿವೇಶನದವರೆಗೂ ಕಾಯದೇ ಇಡೀ ವರ್ಷ ಯಾವಾಗ ಬೇಕಿದ್ರೂ ಸರ್ಕಾರಕ್ಕೆ ಪ್ರಶ್ನೆಗಳನ್ನು ಕೇಳಬಹುದಾಗಿದೆ..ಹೌದು, ಈ ವಾರದಿಂದ ಜಾರಿಯಾಗಿರುವ ಕರ್ನಾಟಕ ವಿಧಾನಸಭೆಯ ಕಾರ್ಯವಿಧಾನ ನಡವಳಿ ತಿದ್ದುಪಡಿ ಕಾಯ್ದೆ ಪ್ರಕಾರ ಶಾಸಕರಿಗೆ 365 ದಿನವೂ ಪ್ರಶ್ನೆ ಕೇಳುವ ಅವಕಾಶ ಕಲ್ಪಿಸಲಾಗಿದೆ. ಶಾಸಕರು ತಮ್ಮ ಪ್ರಶ್ನೆಗಳನ್ನು ಲಿಖಿತವಾಗಿ, ಫ್ಯಾಕ್ಸ್, ಈಮೇಲ್ ಅಥವಾ ವಾಟ್ಸಪ್​ ಮೂಲಕವೂ ಕೇಳಬಹುದಾಗಿದೆ. ಮೊದಲೆಲ್ಲ ಶಾಸಕರು ತಮ್ಮ ಕ್ಷೇತ್ರ ಸಂಬಂಧ ಪ್ರಶ್ನೆಗಳನ್ನು ಕೇಳಲು ಅಧಿವೇಶನದವರೆಗೂ ಕಾಯುತ್ತಿದ್ರು. ಅಚ್ಚರಿ ಅಂದ್ರೆ ಇಂಥದ್ದೊಂದು ಕ್ರಾಂತಿಕಾರಕ ಬದಲಾವಣೆ ಇಡೀ ದೇಶದಲ್ಲೇ ಮೊದಲ ಬಾರಿಗೆ ಕರ್ನಾಟಕದಲ್ಲಿ ಜಾರಿ ಮಾಡಲಾಗಿದೆ.

1. ಇನ್ನು ಮುಂದೆ ಅಜೆಂಡಾ ಪ್ರಕಾರವೇ ಸದನದ ಕಾರ್ಯಕಲಾಪ ನಡೆಸಲು ತೀರ್ಮಾನ. ವಿಪಕ್ಷಗಳು ತಮ್ಮ ನಿಲುವಳಿ ಸೂಚನೆಗಳ ಪ್ರಸ್ತಾವ ಮತ್ತು ಮಂಡನೆಗಳನ್ನು ಪ್ರಶ್ನೋತ್ತರ ಅವಧಿ, ಶೂನ್ಯವೇಳೆ, ಕಾರ್ಯಸೂಚಿ ಮಂಡನೆಗಳ ಬಳಿಕವೇ ಮಾಡಬೇಕಾಗುತ್ತದೆ.

2. ಸದನ ಮುಗಿದ ಬಳಿಕದಿಂದ ಮಾರನೇಯ ದಿನ ಸದನ ಆರಂಭವಾಗುವವರೆಗಿನ ಅವಧಿಯಲ್ಲಿ ನಡೆಯುವ ಪ್ರಮುಖ ವಿದ್ಯಮಾನಗಳನ್ನು ಸದನದಲ್ಲಿ ಪ್ರಸ್ತಾಪಿಸಲು ಅವಕಾಶ. ಈ ವಿದ್ಯಾಮಾನಗಳ ಬಗ್ಗೆ ಸರ್ಕಾರದ ಗಮನಕ್ಕೆ ತರಲು ನೊಟೀಸ್ ಕೊಡಲು ಶಾಸಕರಿಗೆ ಅವಕಾಶ.
ಸರ್ಕಾರದ ಹೊಸ ಬದಲಾವಣೆಗಳನ್ನು ಪಕ್ಷಾತೀತವಾಗಿ ಎಲ್ಲ ಶಾಸಕರೂ, ಪರಿಷತ್ ಸದಸ್ಯರೂ ಸ್ವಾಗತಿಸಿದ್ದಾರೆ. ಒಟ್ಟಿನಲ್ಲಿ ದೇಶದಲ್ಲಿಯೇ ಮೊದಲ ಬಾರಿಗೆ ಈ ಹೊಸ ವಿಧಾನಗಳಿಗೆ ಸರ್ಕಾರ ಮುನ್ನುಡಿ ಬರೆದಿರೋದು ಮೆಚ್ಚಲೇಬೇಕು..

0

Leave a Reply

Your email address will not be published. Required fields are marked *