ಬಿಜೆಪಿಗೆ ಬಗ್ಗದೆ ಬಜೆಟ್ ಮಂಡಿಸಿದ ಕುಮಾರಸ್ವಾಮಿ

ಪ್ರತಿಪಕ್ಷ ಬಿಜೆಪಿಯ ಪ್ರತಿರೋಧದ ನಡುವೆಯೇ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ 2019-20ನೇ ಸಾಲಿನ ಬಜೆಟ್ ಮಂಡಿಸಿದ್ದಾರೆ. ಬಜೆಟ್ ಮಂಡನೆಗೆ ಅವಕಾಶ ಕೊಡುವುದಿಲ್ಲವೆಂಬ ಬಿಜೆಪಿ ಧೋರಣೆಗೆಮಣಿಯದೆ, ದೋಸ್ತಿ ಸರ್ಕಾರದ 2ನೇ ಬಜಟನ್ನು ಕುಮಾರಸ್ವಾಮಿ ಮಂಡಿಸಿದರು.

ಮಂಕುತಿಮ್ಮನ ಕಗ್ಗದೊಂದಿಗೆ ಕುಮಾರಸ್ವಾಮಿ ಬಜೆಟ್ ಭಾಷಣ ಆರಂಭಿಸಿದರು. ಬರ ಮತ್ತು ಅತವೃಷ್ಟಿ ಎರಡರ ಸಂಕಷ್ಟ ಎದುರಿಸಿರುವ ರೈತರ ಹಿತ ಕಾಪಾಡಲು ಸರ್ಕಾರ ಎಲ್ಲ ರೀತಿಯ ಪ್ರಯತ್ನ ನಡೆಸಲಿದೆ ಎಂಬ ಭರವಸೆಯನ್ನು ಕುಮಾರಸ್ವಾಮಿ ನೀಡಿದರು.

ಬಜಟ್ ಭಾಷಣಕ್ಕೆ ಅವಕಾಶ ಕೊಡುವುದಿಲ್ಲ ಎಂದು ಹೇಳುತ್ತ ಬಂದಿದ್ದ ಬಿಜೆಪಿ, ಇಂದೂ ಸದನದಲ್ಲಿ ಗದ್ದಲ ನಡೆಸಿತು, ಬಜೆಟ್ ಭಾಷಣ ಆರಂಭವಾದ ಕೆಲವೇ ನಿಮಿಷಗಳಲ್ಲಿ ಬಿಜೆಪಿ ಸದಸ್ಯರು ಸಭಾತ್ಯಾಗ ಮಾಡಿದರು.

ಬಜೆಟ್ ಹೈಲೈಟ್ಸ್:

 • ಸಾವಯವ ಕೃಷಿ ಪದ್ಧತಿಗೆ ಉತ್ತೇಜನ.

 • ಮುಖ್ಯಮಂತ್ರಿ ಯೋಜನೆಯಡಿ 40 ಲಕ್ಷ ಮನೆ ನಿರ್ಮಾಣ

 • ದಾಳಿಂಬೆ, ದ್ರಾಕ್ಷಿ ಬೆಳೆಗಾರರಿಗೆ 150 ಕೋಟಿ ಮೀಸಲು

 • ಹನಿ ನೀರಾವರಿಗೆ 300 ಕೋಟಿ ರೂ. ಅನುದಾನ

 • ಕೃಷಿಹೊಂಡ ನಿರ್ಮಾಣಕ್ಕೆ 250 ಕೋಟಿ ಅನುದಾನ

 • ಕರಾವಳಿ, ಮಲೆನಾಡು ಭತ್ತ ಬೆಳೆಗಾರರಿಗೆ ವಾರ್ಷಿಕ  7500 ಪ್ರೋತ್ಸಾಹ ಧನ. ನೇರವಾಗಿ ರೈತರ ಖಾತೆಗೆ ಹಣ ವರ್ಗಾವಣೆ

 • ಅಂತರ್ಜಲ ಅಭಿವೃದ್ಧಿಗೆ 100 ಕೋಟಿ ಮೀಸಲು.

 • ಹಾಲು ಉ್ತಾದಕರಿಗೆ ಪ್ರೋತ್ಸಾಹಧನ 5ರಿಂದ 6 ರೂ.ಗೆ ಏರಿಕೆ

 • ಹಾಲು ಉತ್ಪಾದಕರ ಕ್ಷೇಮಾಭುವೃದ್ಧಿಗೆ 2502 ಕೋಟಿ ರೂ.

 • ಮಕ್ಕಳ ಪೌಷ್ಟಿಕತೆಗೆ 400 ಕೋಟಿ ರೂ.

ಮೀನುಗಾರರ ದೋಣಿಗಳಿಗೆ ಇಸ್ರೇಲ್ ಇಂಜಿನ್ ಅಳವಡಿಕೆಗೆ ಶೇ.50ರಷ್ಟು ಸಹಾಯಧನ

 • ಸಿರಿಧಾನ್ಯ ಬೆಳೆಯೋ ರೈತರ ಅಕೌಂಟಿಗೆ 10,000 ಪ್ರೋತ್ಸಾಹ ಧನ

 • ಸಿಗಡಿ ಮೀನು ಕೃಷಿಗೆ 250 ಕೋಟಿ

– 15 ಜಿಲ್ಲೆಗಳಲ್ಲಿ ಪಶು ಚಿಕಿತ್ಸಾ ಕೇಂದ್ರ, ಇದಕ್ಕಾಗಿ ತಲಾ 2 ಕೋಟಿ ಅನುದಾನ. ಕುರಿ ಸಾಕಾಣೆ ಅಭಿವೃದ್ಧಿಗೆ 2 ಕೋಟಿ

– ಸಣ್ಣ ರೈತರ ಬೆಳೆಸಾಲಕ್ಕಾಗಿ ಗೃಹಲಕ್ಷ್ಮೀ ಬೆಳೆ ಸಾಲ ಯೋಜನೆಯಲ್ಲಿ ಚಿನ್ನಾಭರಣಗಳ ಮೇಲೆ ಶೇ. 3ರ ಬಡ್ಡಿ ದರದಲ್ಲಿ ಸಾಲ

– ರೇಷ್ಮೆ ಕೃಷಿ ಅಭಿವೃದ್ಧಿಗೆ 2 ಕೋಟಿ ಅನುದಾನ

 • ರಾಮನಗರ-ಮಾವು ಸಂಸ್ಕರಣಾ ಘಟಕಕ್ಕೆ 150 ಕೋಟಿ

 • ರೇಷ್ಮೆ ಕ್ಷೇತ್ರದ ಪ್ರೋತ್ಸಾಹ ಕ್ಕೆ ಹೊಸ ಪದ್ದತಿ ಜಾರಿಗೆ ಆದ್ಯತೆ

– ಕೇರಳ ಮಾದರಿಯಲ್ಲಿ ಸಾಲ ಪರಿಹಾರ ಯೋಜನೆ ಜಾರಿ

– 300 ಕೋಟಿ ರೂ. ವೆಚ್ಚದಲ್ಲಿ ಬಾದಾಮಿ ತಾಲೂಕಿನಲ್ಲಿ ನೀರಾವರಿ ಕಲ್ಪಿಸುವ ಕೆರೂರ ಏತ ನೀರಾವರಿ ಯೋಜನೆಗೆ ಚಾಲನೆ

– ಕೊಪ್ಪಳ ಏತ ನೀರಾವರಿಗೆ ₹200 ಕೋಟಿ ಮೀಸಲು

 • ಉಡುಪಿ ಜಿಲ್ಲೆಯಲ್ಲಿ ನೀರಾವರಿ ಅಭಿವೃದ್ಧಿಗೆ 40 ಕೋಟಿ

 • ರಾಯಚೂರು ಜಿಲ್ಲೆ ಬಸಪ್ಪ ಕೆರೆ ತುಂಬಿಸಲು 70 ಕೋಟಿ

– ಬಳ್ಳಾರಿ ಗ್ರಾಮೀಣ ಭಾಗದ ಕೆರೆ ತುಂಬಿಸಲು 60 ಕೋಟಿ

– ಬಳ್ಳಾರಿ ಗ್ರಾಮೀಣ ಭಾಗದ ಕೆರೆ ತುಂಬಿಸಲು 60 ಕೋಟಿ ಅನುದಾನ

– ನಂಜನಗೂಡು ತಾಲೂಕಿನ ಕೆರೆ ತುಂಬಿಸುವ ಯೋಜನೆಗೆ 80 ಕೋಟಿ.

– ಶಿಕಾರಿಪುರ ನೀರಾವರಿ ಯೋಜನೆಗಳಿಗೆ 200 ಕೋಟಿ ಅನುದಾನ.

– ರಾಜ್ಯದಲ್ಲಿ ಕೆರೆಗಳನ್ನು ತುಂಬಿಸುವ ಯೋಜನೆಗೆ 1600 ಕೋಟಿ.

 • ಕುಂಸಿ ನೀರಾವರಿ ಯೋಜನೆಗೆ ₹250 ಕೋಟಿ ಅನುದಾನ.

– ತುಮಕೂರು ಗ್ರಾಮಾಂತರ, ಮಧುಗಿರಿ ಹಾಗೂ ಪಾವಗಡ ಕೆರೆ ತುಂಬಿಸುವ ಯೋಜನೆ.

– ಬರಪೀಡಿತ ಮತ್ತು ಅತಿಹೆಚ್ಚು ಅಂತರ್ಜಲ ಕುಸಿತ ಇರುವ 100 ತಾಲ್ಲೂಕುಗಳಲ್ಲಿ ಬರನಿರೋಧಕ ಜಲಾನಯನ ಅನುಷ್ಠಾನಕ್ಕೆ100 ಕೋಟಿ

 • ಜಲಸಂನ್ಮೂಲ ಇಲಾಖೆಗೆ 11 ಸಾವಿರ ಕೋಟಿ ಅನುದಾನ.

– ಶಿಕ್ಷಕರಿಗೆ ಗುರು ಚೇತನ ಯೋಜನೆ ಜಾರಿ. 1 ಲಕ್ಷ ಶಿಕ್ಷಕರಿಗೆ ಸಾಮರ್ಥ್ಯ ವೃದ್ಧಿಗಾಗಿ 10 ದಿನಗಳ ತರಬೇತಿ

 • 12ನೇ ತರಗತಿವರೆಗೆ ಒಂದೇ ಸೂರಿನಡಿ ಶಿಕ್ಷಣ. ಡಿಜಿಟಲ್​ ಅಂಕಪಟ್ಟಿಗಾಗಿ 2 ಕೋಟಿ ರೂ. ಮೀಸಲು.

 • ಬಿಯರ್ ಮೇಲಿನ ಅಬಕಾರಿ ಸುಂಕ ಹೆಚ್ಚಳ

– 1500 ಹೊಸ ಶಾಲಾ ಕಟ್ಟಡ ನಿರ್ಮಾಣ.

 • 1000 ಶಾಲೆಗಳಿಗೆ ಕಲಿಕಾ ಉಪಕರಣಗಳ ವಿತರಣೆ

– ಮುಂದಿನ ನಾಲ್ಕು ವರ್ಷಗಳಲ್ಲಿ 1 ಸಾವಿರ ಕರ್ನಾಟಕ ಪಬ್ಲಿಕ್​ ಶಾಲೆಗಳನ್ನು ಸ್ಥಾಪನೆ

 • ಶ್ರೀ ಶಿವಕುಮಾರ ಸ್ವಾಮೀಜಿಗಳ ಹುಟ್ಟೂರು ರಾಮನಗರ ಜಿಲ್ಲೆಯ ವೀರಾಪುರ ಗ್ರಾಮದಲ್ಲಿ ವಿಶ್ವದರ್ಜೆಯ ಸಾಂಸ್ಕೃತಿಕ ಹಾಗೂ ಪಾರಂಪರಿಕ ಕೇಂದ್ರ ಸ್ಥಾಪನೆಗೆ 25 ಕೋಟಿ ರೂ. ಗಳ ವಿಶೇಷ ಅನುದಾನ.

– 4 ಹೊಸ ತಾಲೂಕುಗಳ ಘೋಷಣೆ. ರಾಮನಗರದ ಹಾರೋಹಳ್ಳಿ, ಚಿಕ್ಕಬಳ್ಳಾಪುರದ ಚೇಳೂರು, ಬಾಗಲಕೋಟೆ ಜಿಲ್ಲೆಯ ತೇರದಾಳ ಮತ್ತು ಚಿಕ್ಕಮಗಳೂರು ಜಿಲ್ಲೆಯ ಕಳಸ ಹೊಸ ತಾಲೂಕುಗಳು.

– ಆನ್​ಲೈನ್​ ಮೂಲಕ ಸಿಇಟಿ ಪರೀಕ್ಷೆ

– ಆನ್​ಲೈನ್​ ಮೂಲಕ ವಿದ್ಯಾರ್ಥಿಗಳಿಗೆ ಡಿಜಿಟಲ್​ ಅಂಕಪಟ್ಟಿ ಮತ್ತು ಪದವಿ ಪ್ರಮಾಣ ಪತ್ರ ವಿತರಣೆ

– ಹಾಸನದಲ್ಲಿ ಹೊಸ ತಾಂತ್ರಿಕ ವಿಶ್ವವಿದ್ಯಾಲಯ ಸ್ಥಾಪನೆ

– ರಾಜ್ಯದಲ್ಲಿ ಉನ್ನತ ಶಿಕ್ಷಣದ ಗುಣಮಟ್ಟ ವೃದ್ಧಿಸಲು ಶಿಕ್ಷಕರಿಗೆ ತರಬೇತಿ

– ತುಮಕೂರಿನಲ್ಲಿ ಕ್ಯಾನ್ಸರ್​ ಆಸ್ಪತ್ರೆ ಸ್ಥಾಪನೆ.

 • ಜೂನ್ ಒಳಗೆ ಸಹಕಾರಿ ಬ್ಯಾಂಕುಗಳ ಸಾಲ ಮನ್ನಾ ಪೂರ್ಣ

 • ಬಿಪಿಎಲ್ ಕಾರ್ಡ್ ಹೊಂದಿರುವ ಗರ್ಭಿಣಿಯರಿಗೆ6 ತಿಂಗಳ ಮಾಸಿಕ ಸಹಾಯಧನ 1 ಸಾವರದಿಂದ 2 ಸಾವಿರಕ್ಕೆ ಏರಿಕೆ

– ಆಯುಷ್ಮಾನ್​ ಭಾರತ್-ಆರೋಗ್ಯ ಕರ್ನಾಟಕ ಯೋಜನೆಗೆ 2019-20ನೇ ಸಾಲಿಗೆ ರಾಜ್ಯ ಸರ್ಕಾರದಿಂದ 950 ಕೋಟಿ ರೂ. ಅನುದಾನ.

– ಅಂಗನವಾಡಿ ಕಾರ್ಯಕರ್ತೆಯರಿಗೆ 500 ರೂ. ಹಾಗೂ ಸಹಾಯಕಿಯರಿಗೆ 250 ರೂ. ಗೌರವಧನ 2019ರ ನವೆಂಬರ್ 1 ರಿಂದ ಹೆಚ್ಚಳ. 60 ಕೋಟಿ ರೂ. ಹೆಚ್ಚುವರಿ ಅನುದಾನ.

– ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಎಲ್ಲ ಮಟ್ಟದ ಕರ್ಮಚಾರಿಗಳಿಗೆ ತರಬೇತಿ ನೀಡಲು ಬಳ್ಳಾರಿಯಲ್ಲಿ ರಾಜ್ಯಮಟ್ಟದ ತರಬೇತಿ ಕೇಂದ್ರ ಹಾಗೂ ಚಿತ್ರದುರ್ಗ, ಮೈಸೂರು, ಬೆಳಗಾವಿ ಮತ್ತು ಕಲಬುರಗಿಯಲ್ಲಿ ವಿಭಾಗ ಮಟ್ಟದ ತರಬೇತಿ ಕೇಂದ್ರ ಪ್ರಾರಂಭಿಸಲು 5 ಕೋಟಿ ರೂ. ಅನುದಾನ.

– ಪರಿಶಿಷ್ಟ ಜಾತಿ ವಿಶೇಷ ಘಟಕ ಉಪಯೋಜನೆ ಹಾಗೂ ಗಿರಿಜನ ಉಪ ಯೋಜನೆಯಡಿ 30,445 ಕೋಟಿ ರೂ. ಅನುದಾನ.

– ಪರಿಶಿಷ್ಟ ಜಾತಿ / ಪರಿಶಿಷ್ಟ ಪಂಗಡ / ಹಿಂದುಳಿದ ವರ್ಗ / ಅಲ್ಪಸಂಖ್ಯಾತರು ಮತ್ತು ಸಾಮಾನ್ಯ ವರ್ಗದ ವಿದ್ಯಾರ್ಥಿಗಳಿಗೆ 30 ಸಂಯುಕ್ತ ವಿದ್ಯಾರ್ಥಿ ನಿಲಯಗಳನ್ನು ಪ್ರಾರಂಭಿಸಲು 100 ಕೋಟಿ ರೂ. ಅನುದಾನ.

– ಶ್ರೀ ಗುರುನಾನಕ್ ದೇವ್‍ರವರ 550ನೇ ಜನ್ಮ ದಿನೋತ್ಸವ ಅಂಗವಾಗಿ ಬೀದರಿನ ಐತಿಹಾಸಿಕ ಗುರುನಾನಕ್ ಜೀರಾ ಗುರುದ್ವಾರಕ್ಕೆ 10 ಕೋಟಿ ರೂ. ಹಾಗೂ ಬೆಂಗಳೂರಿನ ಹಲಸೂರು ಗುರುದ್ವಾರಕ್ಕೆ 25 ಕೋಟಿ ರೂ. ಅನುದಾನ.

 • ಕ್ರೈಸ್ತ ಸಮುದಾಯದ ಸಮಗ್ರ ಅಭಿವೃದ್ಧಿಗಾಗಿ ಕ್ರೈಸ್ತ ಅಭಿವೃದ್ಧಿ ನಿಗಮ ಸ್ಥಾಪನೆ; 200 ಕೋಟಿ ರೂ. ಅನುದಾನ.

– 2019-20ನೇ ಸಾಲಿನಲ್ಲಿ ವಿವಿದ ವಸತಿ ಯೋಜನೆಗಳಡಿ ಒಟ್ಟು 4 ಲಕ್ಷ ಮನೆಗಳನ್ನು ಪೂರ್ಣಗೊಳಿಸುವ ಗುರಿ.

 • ಬಿಬಿಎಂಪಿಯ ಎಸ್‍ಸಿಎಸ್‍ಪಿ/ ಟಿಎಸ್‍ಪಿ ಯೋಜನೆಯಡಿ 300 ಕೋಟಿ ರೂ. ವೆಚ್ಚದಲ್ಲಿ ಬೆಂಗಳೂರಿನಲ್ಲಿ ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡದವರು ಹೆಚ್ಚಾಗಿ ವಾಸಿಸುತ್ತಿರುವ ಅಧಿಸೂಚಿತ ಕೊಳಗೇರಿ ಪ್ರದೇಶಗಳ ಅಭಿವೃದ್ಧಿ.

– ಸಿದ್ಧ ಉಡುಪು ಕಾರ್ಮಿಕರಿಗೆ ಬಾಡಿಗೆ ಆಧಾರದ ವಸತಿ ಯೋಜನೆಗೆ 50 ಕೋಟಿ ರೂ. ಅನುದಾನ.

– ಬೆಂಗಳೂರಿನ ಆಟೋ ಚಾಲಕರು ಹಾಗೂ ಟ್ಯಾಕ್ಸಿ ಚಾಲಕರಿಗೆ 50 ಕೋಟಿ ರೂ. ವೆಚ್ಚದಲ್ಲಿ “ಸಾರಥಿಯ ಸೂರು” ಬಾಡಿಗೆ ಆಧಾರದ ವಸತಿ ಯೋಜನೆ.

– ಸಿದ್ದ ಉಡುಪು ಕಾರ್ಖಾನೆಗಳ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಕ್ಕೆ ಸೇರಿದ 25,000 ಮಹಿಳಾ ಕಾರ್ಮಿಕರ ಕೌಶಲ್ಯ ಉನ್ನತೀಕರಣ ಹಾಗೂ ಶಿಶಿಕ್ಷು ತರಬೇತಿಗಾಗಿ 37.5 ಕೋಟಿ ರೂ. ಅನುದಾನ.

– ಆಟೋ ಮತ್ತು ಟ್ಯಾಕ್ಸಿ ಚಾಲಕರಿಗಾಗಿ ಗುಂಪು ವಿಮೆ ಸೌಲಭ್ಯ, ಪೆಟ್ರೋಲ್ ಆಟೋಗಳನ್ನು ಎಲೆಕ್ಟ್ರಿಕ್ ಆಟೋಗಳಾಗಿ ಪರಿವರ್ತಿಸಲು ಸಹಾಯಧನ; ಸಾರಿಗೆ ಇಲಾಖೆ ಮೂಲಕ ಈ ಯೋಜನೆ ಜಾರಿ. 30 ಕೋಟಿ ರೂ. ಅನುದಾನ.

– ವಿವಿಧ ವಲಯಗಳ ಚಾಲಕರ ಸೇವೆ ಗುರುತಿಸಲು ಎಲ್ಲಾ ಜಿಲ್ಲೆಗಳಲ್ಲಿ ಚಾಲಕರ ದಿನಾಚರಣೆ; ಪ್ರಾಮಾಣಿಕ, ಅಪಘಾತ ರಹಿತ ವಾಹನ ಚಾಲನೆ ಮಾಡಿದ ಪ್ರತಿ ಜಿಲ್ಲೆಯ ತಲಾ 10 ಚಾಲಕರಿಗೆ ತಲಾ 25 ಸಾವಿರ ರೂ. ಪುರಸ್ಕಾರ.

– “ಮುಖ್ಯಮಂತ್ರಿ ಕೌಶಲ್ಯ ಕರ್ನಾಟಕ” ಯೋಜನೆಯಡಿ 70,000 ಹೊಸ ಅಭ್ಯರ್ಥಿಗಳಿಗೆ 90 ಕೋಟಿ ರೂ.ಗಳ ವೆಚ್ಚದಲ್ಲಿ ಕೌಶಲ್ಯ ತರಬೇತಿ.

 • ಶ್ರೀ ಬಾಲಗಂಗಾಧರನಾಥ ಸ್ವಾಮೀಜಿಯವರ ಜನ್ಮಸ್ಥಳ ರಾಮನಗರ ಜಿಲ್ಲೆಯ ಬಿಡದಿ ತಾಲ್ಲೂಕಿನ ಬಾಣಂದೂರು ಗ್ರಾಮವನ್ನು ಮಾದರಿ ಗ್ರಾಮವನ್ನಾಗಿ ಅಭಿವೃದ್ಧಿಪಡಿಸಲು ಹಾಗೂ ಶ್ರೀಗಳ ಜೀವನ ಸಾಧನೆಗಳು ಮತ್ತು ವಿಚಾರಗಳನ್ನು ಸಾರಲು ಸಾಂಸ್ಕೃತಿಕ ಹಾಗೂ ಪಾರಂಪರಿಕ ಕೇಂದ್ರ ಸ್ಥಾಪಿಸಲು 25 ಕೋಟಿ ರೂ. ಅನುದಾನ.

– ನಾಡಪ್ರಭು ಕೆಂಪೇಗೌಡ ಅಭಿವೃದ್ಧಿ ಪ್ರಾಧಿಕಾರಕ್ಕೆ 5 ಕೋಟಿ ರೂ.ಗಳ ಅನುದಾನ. ಕೊಡವ ಸಮಾಜದ ಸರ್ವತೋಮುಖ ಅಭಿವೃದ್ಧಿಗೆ 10 ಕೋಟಿರೂ. ಅನುದಾನ.

– ರಾಜ್ಯದ ಜಾನಪದ ಕಲಾವಿದರು ಹಾಗೂ ಕಲೆಗಳಿಗೆ ಉತ್ತೇಜನ ನೀಡುವ ನಿಟ್ಟಿನಲ್ಲಿ ಎಲ್ಲಾ ಜಿಲ್ಲೆಗಳಲ್ಲಿ ಜಾನಪದ ಜಾತ್ರೆ ಏರ್ಪಡಿಸಲು 2 ಕೋಟಿ ರೂ. ಅನುದಾನ ಒದಗಿಸಲಾಗುವುದು.

– ಯಾದಗಿರಿ, ಬಳ್ಳಾರಿ, ಚಿಕ್ಕಬಳ್ಳಾಪುರ, ಬೀದರ ಹಾಗೂ ಮಡಿಕೇರಿಯಲ್ಲಿ ಹೊಸ ಕ್ರೀಡಾ ವಸತಿನಿಲಯಗಳ ನಿರ್ಮಾಣಕ್ಕಾಗಿ ಪ್ರಸಕ್ತ ಸಾಲಿನಲ್ಲಿ 12.5 ಕೋಟಿ ರೂ.ಗಳನ್ನು ಒದಗಿಸಲಾಗಿದೆ.

– ಅನ್ನಭಾಗ್ಯ ಯೋಜನೆಯಡಿ 4.07 ಕೋಟಿಗಿಂತ ಹೆಚ್ಚು ಫಲಾನುಭವಿಗಳಿಗೆ ಆಹಾರ ಧಾನ್ಯಗಳನ್ನು ವಿತರಿಸಲು 3,700 ಕೋಟಿ ರೂ. ಅನುದಾನ.

– ಜಲಾಮೃತ ಯೋಜನೆಯಡಿ 20,000 ಜಲಸಂರಕ್ಷಣಾ ಕಾಮಗಾರಿಗಳನ್ನು ನೈಸರ್ಗಿಕ ಸಂಪನ್ಮೂಲ ನಿರ್ವಹಣಾ ಕಾಮಗಾರಿಗಳಡಿ ನಿರ್ವಹಿಸಲು 500 ಕೋಟಿ ರೂ. ಅನುದಾನ.

– ರಾಯಚೂರು, ವಿಜಯಪುರ, ಮಂಡ್ಯ ಮತ್ತು ಕೋಲಾರ ಜಿಲ್ಲೆಗಳಲ್ಲಿ 4000 ಕೋಟಿ ರೂ. ವೆಚ್ಚದಲ್ಲಿ ‘ಜಲಧಾರೆ’ ಮೊದಲ ಹಂತದ ಯೋಜನೆ ಪ್ರಾರಂಭಿಸಲು ಕ್ರಮ.

– ನರೇಗಾ ಯೋಜನೆಯಡಿ 12 ಕೋಟಿ ಮಾನವ ದಿನಗಳ ಸೃಜನೆಯ ಗುರಿ. “ಸುಭದ್ರ ಶಾಲೆ ಯೋಜನೆಯಡಿ” ರಾಜ್ಯದ 6825 ಗ್ರಾಮೀಣ ಶಾಲೆಗಳಿಗೆ ನರೇಗಾ ಯೋಜನೆಯಡಿ 90 ಕೋಟಿ ರೂ. ವೆಚ್ಚದಲ್ಲಿ ಕಾಂಪೌಂಡ್ ತಡೆಗೋಡೆಗಳ ನಿರ್ಮಾಣ.

– 1000 ಗ್ರಾಮ ಪಂಚಾಯಿತಿಗಳಲ್ಲಿ ಘನತ್ಯಾಜ್ಯ ವಿಲೇವಾರಿಗಾಗಿ ಒಣ ಮತ್ತು ಹಸಿ ತ್ಯಾಜ್ಯವನ್ನು ವಿಂಗಡಿಸಿ ಒಣ ಕಸ ಮರುಬಳಕೆ ಹಾಗೂ ಹಸಿ ಕಸವನ್ನು ಗೊಬ್ಬರವಾಗಿ ಪರಿವರ್ತಿಸುವ “ಸ್ವಚ್ಛಮೇವ ಜಯತೆ” ಆಂದೋಲನ.

– ಗ್ರಾಮ ಪಂಚಾಯತಿ ವ್ಯಾಪ್ತಿಯ ಎಲ್ಲಾ ಆಸ್ತಿಗಳ ಡಿಜಿಟಲೀಕರಣ; ತೆರಿಗೆ ವ್ಯಾಪ್ತಿಯ ಹೊರಗೆ ಉಳಿದ ಆಸ್ತಿಗಳನ್ನು ತೆರಿಗೆ ವ್ಯಾಪ್ತಿಗೆ ಸೇರ್ಪಡೆಗೆ ಕ್ರಮ.

– ಹೈದರಾಬಾದ್-ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿಗೆ ಈ ವರ್ಷ 1,500 ಕೋಟಿ ರೂ. ಅನುದಾನ

 • ಮಲೆನಾಡು ಅಭಿವೃದ್ಧಿ ಪ್ರಾಧಿಕಾರಕ್ಕೆ 70 ಕೋಟಿ ರೂ.

 • ಬಯಲುಸೀಮೆ ಅಭಿವೃದ್ಧಿ  ಪ್ರಾಧಿಕಾರಕ್ಕೆ 95 ಕೋಟಿ ರೂ.

 • ಕರಾವಳಿ ಅಭಿವೃದ್ಧಿ ಪ್ರಾಧಿಕಾರಕ್ಕೆ 30 ಕೋಟಿ ರೂ.

– ಶಾಸಕರ ಸ್ಥಳೀಯ ಅಭಿವೃದ್ಧಿ ಯೋಜನೆಗಳಿಗಾಗಿ 600 ಕೋಟಿ ರೂ. ಅನುದಾನ.

– ರಾಜ್ಯದ ಮಹಾನಗರ ಪಾಲಿಕೆಗಳ ಅಭಿವೃದ್ಧಿಗೆ 1,325 ಕೋಟಿ ರೂ. ವೆಚ್ಚದಲ್ಲಿ “ಮಹಾತ್ಮಾಗಾಂಧಿ ನಗರ ವಿಕಾಸ ಯೋಜನೆ ಜಾರಿಗೆ ಸಿದ್ಧತೆ. ಕಲಬುರಗಿ, ಮೈಸೂರು ಹಾಗೂ ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಗಳಿಗೆ ತಲಾ 150 ಕೋಟಿ ರೂ. ಹಾಗೂ ಬೆಳಗಾವಿ, ಬಳ್ಳಾರಿ, ತುಮಕೂರು, ಶಿವಮೊಗ್ಗ, ಮಂಗಳೂರು, ದಾವಣಗೆರೆ ಮತ್ತು ವಿಜಯಪುರ ಮಹಾನಗರ ಪಾಲಿಕೆಗಳಿಗೆ ತಲಾ 125 ಕೋಟಿ ರೂ. ಅನುದಾನ ನಿಗದಿ.

 • ಬಿಬಿಎಂಪಿ ಸೇರಿದಂತೆ ರಾಜ್ಯದ ಎಲ್ಲಾ ಮಹಾನಗರ ಪಾಲಿಕೆಗಳಲ್ಲಿ 3 ವರ್ಷದೊಳಗೆ ಪೂರ್ಣ ಪ್ರಮಾಣದಲ್ಲಿ ಬೃಹತ್ ಮಳೆ ನೀರು ಕಾಲುವೆಗಳ ಪುನರ್‍ನಿರ್ಮಾಣಕ್ಕೆ ಕ್ರಮ. ನೀರು ಸಂಸ್ಕರಣಾ ಘಟಕಗಳು ಮತ್ತು ತ್ಯಾಜ್ಯ ಸಂಸ್ಕರಣಾ ಘಟಕಗಳಲ್ಲಿ ಸೌರ ವಿದ್ಯುತ್ ಸ್ಥಾವರ ಸ್ಥಾಪನೆ.

– ಬೆಂಗಳೂರಿನ ಚಲನಶೀಲತೆಗಾಗಿ ಸಮಗ್ರ ಯೋಜನೆ ಜಾರಿ; ಸಾರ್ವಜನಿಕ ಸಾರಿಗೆ ಮತ್ತು ಸುಸ್ಥಿರತೆಗೆ ಆದ್ಯತೆ; ಎಲ್ಲ ರೀತಿಯ ಚಾಲನಾ ಸೌಲಭ್ಯಗಳನ್ನು ಒಳಗೊಂಡ ಯೋಜನೆ; ಬಿಎಂಟಿಸಿಗೆ ಬಸ್ ಸಂಖ್ಯೆ ಹೆಚ್ಚಳಕ್ಕೆ ಮುಂದಿನ ವರ್ಷಗಳಲ್ಲಿ ಅನುದಾನ; ಕನಿಷ್ಠ 50 ಕಿ.ಮೀ. ಕಾಲುದಾರಿಗಳ ಅಭಿವೃದ್ಧಿಗೆ 50 ಕೋಟಿ ರೂ. ಅನುದಾನ.

– 8015 ಕೋಟಿ ರೂ. ಅಂದಾಜು ವೆಚ್ಚದ ನವ ಬೆಂಗಳೂರು ಕ್ರಿಯಾ ಯೋಜನೆ ಅನುಷ್ಠಾನಕ್ಕೆ 2019-20ರಲ್ಲಿ 2,300 ಕೋಟಿ ರೂ. ಅನುದಾನ.

 • ಎಲಿವೇಟೆಡ್ ಕಾರಿಡಾರ್ ಯೋಜನೆಗೆ 2019-20ನೇ ಸಾಲಿನಲ್ಲಿ 1,000 ಕೋಟಿ ರೂ. ಅನುದಾನ.

 • ಬೆಂಗಳೂರಿನಲ್ಲಿ 5 ಲಕ್ಷ ಬೀದಿ ದೀಪಗಳನ್ನು ಎಲ್‍ಇಡಿ ದೀಪಗಳಾಗಿ ಪರಿವರ್ತನೆ.

 • ಬೆಂಗಳೂರಿನ ಕಮರ್ಷಿಯಲ್ ಸ್ಟ್ರೀಟ್ ಹಾಗೂ ಬ್ರಿಗೇಡ್ ರಸ್ತೆಗಳನ್ನು ಪಾದಚಾರಿ ರಸ್ತೆಗಳನ್ನಾಗಿ ಪರಿವರ್ತಿಸಲು ಕ್ರಮ.

– ಬೆಂಗಳೂರು ನಗರದಲ್ಲಿ 10,000 ವಾಹನಗಳ ನಿಲುಗಡೆಗೆ 87 ಆಯ್ದ ರಸ್ತೆಗಳಲ್ಲಿ ಸ್ಮಾರ್ಟ್ ಪಾರ್ಕಿಂಗ್ ವ್ಯವಸ್ಥೆಗೆ ಕ್ರಮ.

 • 195 ಕೋಟಿ ರೂ. ವೆಚ್ಚದಲ್ಲಿ ಹೆಬ್ಬಾಳ ಮತ್ತು ಕೆ.ಆರ್.ಪುರಂ ಫ್ಲೈ ಓವರ್ ಗಳಲ್ಲಿ ಹೆಚ್ಚುವರಿ ಲೂಪ್ ನಿರ್ಮಾಣ

 • ಗೊರಗುಂಟೆಪಾಳ್ಯದಲ್ಲಿ ಹೊಸ ಅಂಡರ್ ಪಾಸ್ ನಿರ್ಮಾಣ.

– 23,093 ಕೋಟಿ ರೂ. ಅಂದಾಜು ಮೊತ್ತದ ಬೆಂಗಳೂರು ಉಪ ನಗರ ರೈಲು ಸೇವೆ ಯೋಜನೆಗೆ ಚಾಲನೆ ನೀಡಲಾಗಿದೆ.

– ಮೈಸೂರು, ಮಂಗಳೂರು ಹಾಗೂ ಹುಬ್ಬಳ್ಳಿ-ಧಾರವಾಡ ನಗರಗಳಲ್ಲಿ ಮೆಟ್ರೋ ರೈಲು ಯೋಜನೆ ಬಗ್ಗೆ ಪೂರ್ವ ಕಾರ್ಯ ಸಾಧ್ಯತಾ ವರದಿ ತಯಾರಿಕೆ ಪರಿಶೀಲನೆ.

– ಸೆಂಟ್ರಲ್ ಸಿಲ್ಕ್ ಬೋರ್ಡ್‍ನಿಂದ ಕೆ.ಆರ್.ಪುರಂ ಮತ್ತು ಹೆಬ್ಬಾಳ ಮಾರ್ಗವಾಗಿ ಹೊರ ವರ್ತುಲ ರಸ್ತೆ – ವಿಮಾನ ನಿಲ್ದಾಣ ಮಾರ್ಗ ನಿರ್ಮಾಣ; 16,579 ಕೋಟಿ ರೂ. ಅನುದಾನ.

– 17,200 ಕೋಟಿ ರೂ. ವೆಚ್ಚದ ಫೆರಿಫೆರಲ್ ರಿಂಗ್ ರಸ್ತೆ ಯೋಜನೆಗೆ 2019-20ನೇ ಸಾಲಿಗೆ 1,000 ಕೋಟಿ ರೂ. ಅನುದಾನ.

– ಕಲಬುರಗಿ, ವಿಜಯಪುರ, ದಕ್ಷಿಣ ಕನ್ನಡ, ಮೈಸೂರು, ಗದಗ, ದಾವಣಗೆರೆ, ಧಾರವಾಡ ಹಾಗೂ ಕೊಡಗು ಜಿಲ್ಲೆಗಳಲ್ಲಿ ಡ್ರೋನ್‍ಗಳ ಮೂಲಕ ರೀ-ಸರ್ವೆ ಕಾರ್ಯ.

– ಹಿಂದು ರುದ್ರಭೂಮಿಗಳ ಅಭಿವೃದ್ಧಿಗೆ 20 ಕೋಟಿ ರೂ. ಅನುದಾನ.

 • ಕೊಡಗು ಪುನರ್ ನಿರ್ಮಾಣ, ಪುನರ್ವಸತಿ ಮತ್ತು ಅಭಿವೃದ್ಧಿ ಪ್ರಾಧಿಕಾರದ ದೈನಂದಿನ ಕಾರ್ಯಚಟುವಟಿಕೆಗಳಿಗೆ 2 ಕೋಟಿ ರೂ. ಅನುದಾನ

– ಮುಜರಾಯಿ ಇಲಾಖೆಯ ವ್ಯಾಪ್ತಿಯ ಅನುಸೂಚಿತ ಸಂಸ್ಥೆಗಳ ಜಮೀನುಗಳ ಸರ್ವೆ ಕಾರ್ಯ

 • ಮಾನಸ ಸರೋವರ ಯಾತ್ರಿಗಳ ಪ್ರೋತ್ಸಾಹಧನ 30,000 ರೂ.ಗಳಿಗೆ ಹೆಚ್ಚಳ.

 • ಐತಿಹಾಸಿಕ ಮೇಲುಕೋಟೆಯ ಸಮಗ್ರ ಅಭಿವೃದ್ಧಿಗೆ ಮೇಲುಕೋಟೆ ಅಭಿವೃದ್ಧಿ ಪ್ರಾಧಿಕಾರ ರಚನೆ; 5 ಕೋಟಿ ರೂ. ಅನುದಾನ.

 • 2019-20ನೇ ಸಾಲಿನಲ್ಲಿ ರಾಜ್ಯದ ವಿವಿಧ ಮಠಗಳು ಹಾಗೂ ಇತರ ಧಾರ್ಮಿಕ ಸಂಸ್ಥೆಗಳಿಗೆ 60 ಕೋಟಿ ರೂ. ಗಳ ಅನುದಾನ.

– ರೈತರಿಗೆ ಉಚಿತವಾಗಿ ನೀಡಲಾಗುತ್ತಿದ್ದ ನೀರಾವರಿ ಪಂಪ್‍ಸೆಟ್, ಭಾಗ್ಯ ಜ್ಯೋತಿ, ಕುಟೀರಜ್ಯೋತಿ ಗ್ರಾಹಕರ ಸಹಾಯಧನ 11,250 ಕೋಟಿ ರೂ.ಗಳಿಗೆ ಹೆಚ್ಚಳ

– ರೈತರಿಗೆ ಗುಣಮಟ್ಟದ ವಿದ್ಯುಚ್ಛಕ್ತಿ ಒದಗಿಸಲು 40,000 ಹೊಸ ಟ್ರಾನ್ಸ್​ ಫಾರ್ಮರ್ ಅಳವಡಿಕೆ.

– ರಾಜ್ಯ ಹೆದ್ದಾರಿ ಅಭಿವೃದ್ಧಿ ಯೋಜನೆ ಅಡಿ ಒಟ್ಟು 10,000 ಕೋಟಿ ರೂ.ಗಳಲ್ಲಿ 7,940 ಕಿ.ಮೀ ಉದ್ದದ ರಸ್ತೆಗಳನ್ನು ಅಭಿವೃದ್ಧಿಪಡಿಸಲು ಉದ್ದೇಶಿಸಲಾಗಿದೆ.

– ಮಲೆನಾಡು ಹಾಗೂ ಕರಾವಳಿ ಜಿಲ್ಲೆಗಳಲ್ಲಿ “ಶಾಲಾ ಸಂಪರ್ಕ ಸೇತು” ಯೋಜನೆಯಡಿ 1,317 ಸಂಖ್ಯೆಯ ಕಿರು ಸೇತುವೆಗಳನ್ನು ಪೂರ್ಣಗೊಳಿಸಲು ಕ್ರಮ.

– 5,690 ಕೋಟಿ ರೂ. ವೆಚ್ಚದಲ್ಲಿ ರಸ್ತೆ ಮತ್ತು ಸೇತುವೆಗಳ ಸುಧಾರಣೆ ಮತ್ತು ನವೀಕರಣ ಕಾಮಗಾರಿ ಕೈಗೆತ್ತಿಕೊಳ್ಳಲು ಕ್ರಮ.

– 2019-20ರಲ್ಲಿ ಬೀದರ್ ನಾಗರಿಕ ವಿಮಾನ ನಿಲ್ದಾಣದ ಹೊಸ ಟರ್ಮಿನಲ್ ಕಟ್ಟಡ ಅಭಿವೃದ್ಧಿಗೆ 32 ಕೋಟಿ ರೂ. ಅನುದಾನ.

– ಕಲಬುರಗಿ ವಿಮಾನನಿಲ್ದಾಣ ಕಾರ್ಯಾಚರಣೆ ಶೀಘ್ರ ಪ್ರಾರಂಭ

– ಚಿಕ್ಕಮಗಳೂರು ಹಾಗೂ ಶಿವಮೊಗ್ಗ ಏರ್​ಸ್ಟ್ರಿಪ್​ ಪಿಪಿಪಿ ಮಾದರಿಯಲ್ಲಿ ಅಭಿವೃದ್ಧಿ ಹಾಗೂ ಹಾಸನ ವಿಮಾನನಿಲ್ದಾಣದ ಅಭಿವೃದ್ಧಿಗೆ ಕ್ರಮ.

– ತುಮಕೂರು ಜಿಲ್ಲೆಯ ವಸಂತನರಸಾಪುರದ 9,629 ಎಕರೆ ಪ್ರದೇಶದಲ್ಲಿ ಚೆನೈ-ಬೆಂಗಳೂರು ಕೈಗಾರಿಕಾ ಕಾರಿಡಾರ್ ಯೋಜನೆಯಡಿ ತುಮಕೂರು ಕೈಗಾರಿಕಾ ನೋಡ್​ ಅಭಿವೃದ್ಧಿಗೆ ಕ್ರಮ.

– ವಸಂತನರಸಾಪುರ, ತುಮಕೂರು ಹಾಗೂ ರಾಮನಗರ ಮತ್ತು ಬೆಂಗಳೂರು ನಡುವೆ ಪ್ರತ್ಯೇಕ ಟ್ರ್ಯಾಕ್​ಗಳ ಮೇಲೆ ರೇಲ್​ ಆಧಾರಿತ ಸಮರ್ಥ ಮತ್ತು ಅನುಕೂಲಕತ ಸಾಮೂಹಿಕ ಸಾಗಾಣಿಕೆ ವ್ಯವಸ್ಥೆ ಸ್ಥಾಪನೆಗೆ ಕ್ರಮ

– ನೂತನ ಕೈಗಾರಿಕಾ ನೀತಿ ಜಾರಿ: ಹಿಂದುಳಿದ ಪ್ರದೇಶಗಳು ಮತ್ತು ಟೈರ್ 2 ಹಾಗೂ 3 ಕೇಂದ್ರಗಳಿಗೆ ಬಂಡವಾಳ ಆಕರ್ಷಣೆ ಮತ್ತು  ವಿನೂತನ ತಂತ್ರಜ್ಞಾನ ಮತ್ತು ಹೆಚ್ಚಿನ ಉದ್ಯೋಗಗಳಿಗೆ ಅವಕಾಶವಿರುವ ವಲಯಗಳಿಗೆ ಆದ್ಯತೆ.

– ಜನವರಿ 2020ರಲ್ಲಿ ಬೆಂಗಳೂರಿನಲ್ಲಿ ಜಾಗತಿಕ ಬಂಡವಾಳ ಹೂಡಿಕೆದಾರರ ಸಮಾವೇಶ ಆಯೋಜಿಸಲು ಕ್ರಮ.

– ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ಧಿ ಮಂಡಳಿಯಿಂದ ಹಾಸನ ಜಿಲ್ಲೆಯ ಅರಸೀಕೆರೆ, ಮಂಡ್ಯ ಜಿಲ್ಲೆಯ ನಾಗಮಂಗಲ, ಕಲಬುರಗಿ ಜಿಲ್ಲೆಯ ಚಿತ್ತಾಪುರ, ವಿಜಯಪುರ ಜಿಲ್ಲೆಯ ಮುಳವಾಡ, ಬೆಳಗಾವಿ ಜಿಲ್ಲೆಯ ಕಣಗಲಾ ಮತ್ತು ತುಮಕೂರು ಜಿಲ್ಲೆಯ ಮಧುಗಿರಿಯಲ್ಲಿ ಕೈಗಾರಿಕಾ ಪ್ರದೇಶ ಅಭಿವೃದ್ಧಿ.

– ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳ ಉತ್ಪನ್ನಗಳನ್ನು ಮಾರುಕಟ್ಟೆಗೆ ತರುವಲ್ಲಿ ಎದುರಾಗುವ ತೊಂದರೆ ನಿವಾರಣೆಗೆ ಎಂಎಸ್​ಎಂಇ ಸಾರ್ಥಕ್​ ಯೋಜನೆ ಜಾರಿಗೆ 5 ಕೋಟಿ ರೂಪಾಯಿ ಅನುದಾನ.

0

Leave a Reply

Your email address will not be published. Required fields are marked *