ಶ್ರೀಲಂಕಾ ವಿರುದ್ಧ ಆರ್ಭಟಿಸಿದ ಕರ್ನಾಟಕದ ಸ್ಟಾರ್​​…

ಅಂದು ಜೋಹಾನ್ಸ್​​​ಬರ್ಗ್​​​, ನಿನ್ನೆ ಕೊಲಂಬೊ. ದಕ್ಷಿಣ ಆಫ್ರಿಕಾ ಪ್ರವಾಸದಲ್ಲೂ ಎರಡನೇ ಪಂದ್ಯದಲ್ಲಿ ಅಬ್ಬರ, ಶ್ರೀಲಂಕಾ ಪ್ರವಾಸದಲ್ಲೂ 2ನೇ ಪಂದ್ಯದಲ್ಲಿ ರನ್​ ಹೊಳೆ.. ಕರ್ನಾಟಕದ ಸ್ಟಾರ್​ ಪ್ಲೇಯರ್​​ ಟೀಮ್​ ಇಂಡಿಯಾದ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ. ದ್ವೀಪರಾಷ್ಟ್ರದಲ್ಲಿ ಮನೀಶ್​ ಅಬ್ಬರ, ಮುತ್ತಿನ ನಗರಿಯ ಅಭಿಮಾನಿಗಳಿಗೆ ಮುದ ನೀಡಿದೆ.ಟೀಮ್​ ಇಂಡಿಯಾದಲ್ಲಿ ಖಾಯಂ ಸ್ಥಾನ ಪಡೆಯುವ ಆಸೆ, ಇತನಲ್ಲಿ ಹೆಮ್ಮರವಾಗಿದೆ. ಸಿಕ್ಕ ಅವಕಾಶ ಬಳಸಿಕೊಳ್ಳುವ ಬಯಕೆ ಮೂಡಿದೆ. ಸಂಕಷ್ಟದಲ್ಲಿದ್ದಾಗ ತಂಡಕ್ಕೆ ನೆರವಾಗುವ ಧೈರ್ಯ ಬಂದಿದೆ. ಸರಾಗವಾಗಿ ರನ್​​ ಕಲೆ ಹಾಕುವ ಆಸೆ ಇಮ್ಮಡಿಯಾಗಿದೆ. ಒತ್ತಡವನ್ನು ಮೆಟ್ಟಿನಿಲ್ಲುವ ಛಲ ಮೈಗೂಡಿದೆ. ಆಫ್ರಿಕಾದಲ್ಲಿ ಆಡಿದ ಧಾಟಿ ಮತ್ತೊಮ್ಮೆ ಮೇಳೈಸಿದೆ.

ಟೀಮ್​ ಇಂಡಿಯಾದ ಮಧ್ಯಮ ಕ್ರಮಾಂಕಕ್ಕೆ ಬಲ ತುಂಬ ಬಲ್ಲ ಆಟಗಾರ ಕರ್ನಾಟಕ ಮನೀಶ್​ ಪಾಂಡೆ. ಕೊಲಂಬೊದಲ್ಲಿ ನಡೆಯುತ್ತಿರುವ ತ್ರಿಕೋನ ಟಿ-20 ಸರಣಿಯಲ್ಲಿ ಮನೀಶ್​, ಆಡಿದ ಧಾಟಿಗೆ ಎದುರಾಳಿಗಳು ಸಹ ಸಲಾಂ ಎಂದಿದ್ದಾರೆ. ತಾಳ್ಮೆಯಿಂದ ಇನ್ನಿಂಗ್ಸ್​ ಕಟ್ಟುತ್ತಾ, ಚಿಕ್ಕ ಗೋಲ್​ ಮುಟ್ಟಿ ತಂಡಕ್ಕೆ ಗೆಲುವಿನ ಮಾಲೆ ತೊಡಿಸಿದ್ದಾರೆ.ತಮ್ಮ ನೆಚ್ಚಿನ ಮಿಡಾನ್​ ಕ್ಷೇತ್ರದಲ್ಲಿ ಹೆಚ್ಚಾಗಿ ಚೆಂಡನ್ನು ಅಟ್ಟಿದ ಮನೀಶ್​​, ಸಿಂಹಳಿಯ ಬೌಲರ್​​ಗಳನ್ನಕಾಡಿದ್ರು.ಆಫ್​ ಸೈಡ್​​ ಹಾಗೂ ಆನ್​ ಸೈಡ್​​ನಲ್ಲಿ ರನ್​​ಗಳನ್ನು ಕಲೆ ಹಾಕಿದ ಮನೀಶ್, ​​ ದೊಡ್ಡ ಇನ್ನಿಂಗ್ಸ್​ ಕಟ್ಟದೇ ಇದ್ದರೂ, ತಂಡದ ಪರ ಗರಿಷ್ಠ ರನ್​​ ಕಲೆ ಹಾಕಿ ಮಿಂಚಿದ್ದಾರೆ.

4ನೇ ಪಂದ್ಯದಲ್ಲಿ ಮನೀಶ್​​ 31 ಎಸೆತಗಳಲ್ಲಿ 3 ಬೌಂಡರಿ, 1 ಸಿಕ್ಸರ್​​ ನೆರವಿನಿಂದ 42 ರನ್​ ಬಾರಿಸಿ ಅಬ್ಬರಿಸಿದ್ರು.ಇನ್ನು ನಿನ್ನೆ ನಡೆದ ಪಂದ್ಯದಲ್ಲಿ ಟೀಮ್​ ಇಂಡಿಯಾದ ಸ್ಟಾರ್​ ಆಗಿ ಮಿಂಚಿದ್ದು ಮುಂಬೈನ ವೇಗಿ ಶಾರ್ದುಲ್​ ಠಾಕೂರ್​​. ಸಿಕ್ಕ ಅವಕಾಶದಲ್ಲಿ ಶಿಸ್ತು ಬದ್ಧ ದಾಳಿಯನ್ನು ನಡೆಸಿದ ಠಾಕೂರ್​​​ ಸಿಂಹಳಿಯ ಸ್ಟಾರ್​ ಬ್ಯಾಟ್ಸ್​ಮನ್​​ಗಳಿಗೆ ಸಿಂಹ ಸ್ವಪ್ನರಾಗಿ ಕಾಡಿದ್ರು. ಅಲ್ಲದೆ ವಿಕೆಟ್​ ಬೇಟೆ ನಡೆಸಿದ್ರು. 4 ವಿಕೆಟ್​ ಪಡೆದ ಶಾರ್ದೂಲ್​​ ಪಂದ್ಯ ಶ್ರೇಷ್ಠ ಪ್ರಶಸ್ತಿಗೆ ಭಾಜನರಾದ್ರು. ಇನ್ನು ಮನೀಶ್​ ಪಾಂಡೆರ ಈ ಪ್ರದರ್ಶನ ಐಪಿಎಲ್ ಸನ್​ರೈಸರ್ಸ್​ ಹೈದರಾಬಾದ್​ ಮಾಲೀಕರಿಗಂತೂ ಸಮಾಧಾನ ತಂದಿದೆ. ಬರೋಬರಿ 11 ಕೋಟಿ ನೀಡಿ, ಮನೀಶ್​ರನ್ನು ತಂಡಕ್ಕೆ ಸೇರಿಸಿಕೊಂಡ ಹೈದಾರಾಬಾದ್​ ಫ್ರಾಂಚೈಸಿಗಳು ಖುಷ್​ ಆಗಿದ್ದಾರೆ. ಪ್ರಸ್ತುತ ಮನೀಶ್​ ಪಾಂಡೆ ಫಾರ್ಮ್​​​ ಹೈದರಾಬಾದ್​ ಅಭಿಮಾನಿಗಳ ಮನ ಗೆದ್ದಿದೆ. ಮನೀಶ್​ ಪಾಂಡೆ ಟೂರ್ನಿಯಲ್ಲಿ ಶ್ರೇಷ್ಠ ಪ್ರದರ್ಶನ ನೀಡಿ, ತಂಡಕ್ಕೆ ಮುಕುಟ ತೊಡಿಸಲಿ ಹಾಗೂ ಐಪಿಎಲ್​​ನಲ್ಲೂ ಮಿಂಚಲಿ ಎಂಬುದು ಅಭಿಮಾನಿಗಳ ಆಶಯ.

ಸ್ಪೋರ್ಟ್ಸ್​​ ಬ್ಯೂರೋ, ಸುದ್ದಿಟಿವಿ

0

Leave a Reply

Your email address will not be published. Required fields are marked *