ಬಿಹಾರದ ಸೃಜನ್ ಹಗರಣ: ಸಿಬಿಐನಿಂದ 4 ದೂರು ಸಲ್ಲಿಕೆ

ಪಾಟ್ನಾ: ಬಿಹಾರದ ಸೃಜನ್ ಹಗರಣ ಸಂಬಂಧ ಸಿಬಿಐ ಮತ್ತೆ 4 ದೂರುಗಳನ್ನು ದಾಖಲಿಸಿದೆ. ಭಾಗಲ್​ಪುರದ ಎನ್​​ಜಿಒ ಸೃಜನ್ ಮಹಿಳಾ ವಿಕಾಸ್ ಸಹಯೋಗ್ ಸಮಿತಿ ಅಧಿಕಾರಿಗಳು, ನಿವೃತ್ತ ಬ್ಯಾಂಕ್ ಅಧಿಕಾರಿಗಳ ಮೇಲೆ ದೂರು ದಾಖಲಾಗಿದೆ. ಆರೋಪಿಗಳ ಮೇಲೆ ಕ್ರಿಮಿನಲ್ ಪಿತೂರಿ, ಟ್ರಸ್ಟ್ ನಿಯಮಗಳ ಉಲ್ಲಂಘನೆ, ವಂಚನೆ, ನಕಲು ಸಹಿ ಆರೋಪಗಳು ಕೇಳಿ ಬಂದಿವೆ.

ಇದು ಎನ್​ಜಿಒದಿಂದ 1,000 ಕೋಟಿ ರೂ. ಮೊತ್ತದ ಅವ್ಯವಹಾರವಾಗಿದ್ದು, ಸೃಜನ್ ಮಹಿಳಾ ವಿಕಾಸ್ ಸಹಯೋಗ್ ಸಮಿತಿ ನಿಯಮಿತ ಮಹಿಳೆಯರಿಗೆ ತರಬೇತಿ ನೀಡುವ ಹೆಸರಿನಲ್ಲಿ ವಂಚನೆ ಎಸಗಿದೆ ಎಂಬ ಆರೋಪ ಕೇಳಿಬಂದಿತ್ತು. ಸರ್ಕಾರದ ಕಲ್ಯಾಣ ಯೋಜನೆಗಳಿಂದ ಬಿಡುಗಡೆಯಾದ ಹಣವನ್ನು ಎನ್​ಜಿಒ ದುರುಪಯೋಗ ಪಡಿಸಿಕೊಂಡಿದೆ ಎಂದು ಕೆಲವರು ದೂರಿದ್ದರು. 2004 – 2014ರ ಅವಧಿಯಲ್ಲಿ ಈ ಅನ್ಯಾಯ ನಡೆದಿದೆ ಎಂದು ಹೇಳಲಾಗಿತ್ತು.

ಫೆಬ್ರವರಿ 2017ರಲ್ಲಿ ಎನ್​​ಜಿಒ ಸಂಸ್ಥಾಪಕಿ ಮನೋರಮಾನ ದೇವಿಯವರ ಸಾವಿನ ನಂತರ ಬೆಳಕಿಗೆ ಬಂದಿತ್ತು. ಕುಟುಂಬಸ್ಥರ ನಡುವಿನ ಭಿನ್ನಾಭಿಪ್ರಾಯದಿಂದಾಗಿ ಈ ಅಕ್ರಮ ಬಹಿರಂಗವಾಗಿತ್ತು. ಜೊತೆಗೆ, ಸಾಲ ಪಡೆದ ಫಲಾನುಭವಿಗಳು ಮರುಪಾವತಿಯನ್ನು ಕೂಡ ನಿಲ್ಲಿಸಿದ್ದರು.

0

Leave a Reply

Your email address will not be published. Required fields are marked *