ಮತ್ತೊಂದು ದುರಂತಕ್ಕೆ ಸಾಕ್ಷಿಯಾಯ್ತು ಕ್ರೀಡಾ ಲೋಕ..!

ಕ್ರೀಡಾ ಜಗತ್ತು ಮತ್ತೊಂದು ದುರಂತೆ ಹೆಸರಾಗಿದೆ.. ಹೌದು.. ಸೆನೆಗಲ್ ಫುಟ್ಬಾಲ್ ಲೀಗ್ ನ ಫೈನಲ್ ಪಂದ್ಯದ ವೇಳೆ ಅಭಿಮಾನಿಗಳ ನಡುವೆ ಮಾರಾಮಾರಿ ನಡೆದಿದೆ. ಈ ಸಮಯದಲ್ಲಿ ಸ್ಟೇಡಿಯಂನ ಗೋಡೆ ಕುಸಿತ ಸಂಭವಿಸಿ ಕಾಲ್ತುಳಿತಕ್ಕೆ ಜನರು ಸಾವನ್ನಪ್ಪಿದ್ದಾರೆ.. ಅಲ್ದೇ.. ಸುಮಾರು 40ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ.ಕ್ರೀಡಾ ಲೋಕದಲ್ಲಿ ಅದೆಷ್ಟೋ ವಿಸ್ಮಯಗಳು ನಡೆಯುತ್ತಿರುತ್ತವೆ. ಅಷ್ಟೇ ದುರಂತಗಳಿಗೂ ಕೂಡ ಕ್ರೀಡಾ ಲೋಕ ಸಾಕ್ಷಿಯಾಗಿದೆ. ಇದೀಗ ಅಂತಹದ್ದೇ ಒಂದು ದುರಂತ ಕ್ರೀಡಾ ಲೋಕದಲ್ಲಿ ನಡೆದಿದೆ. ಹೌದು.. ಪಶ್ಚಿಮ ಆಫ್ರಿಕಾದ ಸೆನಗಲ್​ ಎಂಬಲ್ಲಿ ನಡೆದ ಫುಟ್ಬಾಲ್​​ ಪಂದ್ಯದ ವೇಳೆ ಭಾರೀ ದುರಂತವೊಂದು ಸಂಭವಿಸಿದೆ. ಈ ದುರಂತದಲ್ಲಿ ಹಲವು ಜನರು ಪ್ರಾಣವನ್ನು ಕಳೆದುಕೊಂಡಿದ್ದಾರೆ.

ಸೆನೆಗಲ್ ಫುಟ್ಬಾಲ್ ಲೀಗ್ ನ ಫೈನಲ್ ಪಂದ್ಯದ ವೇಳೆ ಅಭಿಮಾನಿಗಳ ನಡುವೆ ಮಾರಾಮಾರಿ ನಡೆದಿದೆ. ಈ ಸಮಯದಲ್ಲಿ ಸ್ಟೇಡಿಯಂನ ಗೋಡೆ ಕುಸಿತ ಸಂಭವಿಸಿ ಕಾಲ್ತುಳಿತಕ್ಕೆ ಎಂಟು ಜನರು ಸಾವನ್ನಪ್ಪಿದ್ರೆ.. ಸುಮಾರು 40ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ. ಡಕಾರ್ ಫುಟ್ಬಾಲ್ ಮೈದಾನದಲ್ಲಿ ಈ ದುರಂತ ಸಂಭವಿಸಿದೆ.ಸ್ಟೇಡ್ ಡೆ ಮೋರ್ ಹಾಗೂ ಯು. ಎಸ್ ಒವಾಕಮ್ ತಂಡ ಫೈನಲ್​​ನಲ್ಲಿ ಪ್ರಶಸ್ತಿಗಾಗಿ ಸೆಣಸಾಡುತ್ತಿತ್ತು. ಅಲ್ದೇ ಸ್ಟೇಡ್ ಡೆ ಮೋರ್ 2-1 ಅಂತರದಲ್ಲಿ ಮುನ್ನಡೆ ಕೂಡ ಸಾಧಿಸಿತ್ತು. ಈ ವೇಳೆ ಒವಾಕಮ್ ಹಾಗೂ ಸ್ಟೇಡ್ ಡೆ ಮೋರ್ ತಂಡ ಅಭಿಮಾನಿಗಳ ನಡುವೆ ಘರ್ಷಣೆ ನಡೆದಿದೆ. ಈ ವೇಳೆ ಕೆಲವು ಅಭಿಮಾನಿಗಳು ಮೈದಾನದಿಂದ ಹೊರಗೆ ಓಡಲಾರಂಭಿಸಿದಾಗ ದಟ್ಟಣೆಯಯಿಂದ ಕ್ರೀಡಾಂಗಣದ ಗೋಡೆ ಕುಸಿದು ಬಿದ್ದಿದೆ.

ಈ ಗೋಡೆ ಕುಸಿತದಿಂದಾಗಿ, ಗೋಡೆಯ ಅವಶೇಷಗಳಡಿಯಲ್ಲಿ ಸಿಲುಕಿಕೊಂಡ 8 ಜನರು ಸಾವನ್ನಪ್ಪಿದ್ದಾರೆ. 40ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ. ಮತ್ತೊಂದೆಡೆ ಪರಿಸ್ಥತಿಯನ್ನು ನಿಯಂತ್ರಣಕ್ಕೆ ತರಲು ಪೊಲೀಸರು ಅಶ್ರುವಾಯು ಶೆಲ್ ಸಿಡಿಸಿದ್ದರಿಂದ ಕಾಲ್ತುಳಿತ ಸಂಭವಿಸಿ ಮತ್ತಷ್ಟು ಜನರು ಗಾಯಗೊಂಡಿದ್ದಾರೆ ಎಂದು ಸ್ಥಳೀಯ ಪತ್ರಿಕೆಯೊಂದು ವರದಿ ಮಾಡಿದೆ..ಅಲ್ದೇ.. ಈ ಘಟನೆಯಲ್ಲಿ ಪ್ರಾಣ ಕಳೆದುಕೊಂಡ ಜನರಿಗೆ ಸ್ಪೇಡ್​​​​ ಡೆ ಮೋರ್​ ಹಾಗೂ ಯು.ಎಸ್​​​​​​ ಒವಾಕಮ್​​​​ ತಂಡದ ಆಟಗಾರರು ಶ್ರದ್ದಾಂಜಲಿ ಸಲ್ಲಿಸಿದ್ದಾರೆ. ಅಭಿಮಾನಿಗಳ ಈ ರೀತಿಯ ವರ್ತನೆಗೆ ಆಟಗಾರರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.. ಅಷ್ಟೇ ಅಲ್ಲದೇ.. ಸೆನೆಗಲ್​ ರಾಜ್ಯ ಇದೀಗ ಶೋಕಾಚರಣೆಯಲ್ಲಿದೆ..

ಆಶಿಕ್​ ಮುಲ್ಕಿ,, ಸ್ಪೋರ್ಟ್ಸ್​ ಬ್ಯೂರೋ, ಸುದ್ದಿ ಟಿವಿ

0

Leave a Reply

Your email address will not be published. Required fields are marked *