ಕಾಶ್ಮೀರದಲ್ಲಿ ಕದನ ವಿರಾಮ ಉಲ್ಲಂಘನೆ ಸಂತ್ರಸ್ತರ ಚಿಕತ್ಸೆಗೆ ವಿಶೇಷ ಒತ್ತು

ಜಮ್ಮು ಕಾಶ್ಮೀರದಲ್ಲಿ ಮಾನವೀಯತೆಯ ಉದಾಹರಣೆ
ಗಾಯಗಾಳುಗಳ ಜೀವ ಉಳಿಸುವ ಸರ್ಕಾರಿ ವೈದ್ಯಕೀಯ ಕಾಲೇಜು

ಶ್ರೀನಗರ: ಜಮ್ಮು ಕಾಶ್ಮೀರದಲ್ಲಿ ಸದಾ ಮದ್ದು, ಗುಂಡು, ಗ್ರೆನೇಡ್ ದಾಳಿಗಳಿಂದ ಸುದ್ದಿಯಲ್ಲಿದೆ. ಇದರಿಂದ ಸಂತ್ರಸ್ಥರಾದಾವರ ಗೋಳನ್ನು ಯಾರಪ್ಪ ಕೇಳ್ತಾರೆ ಅನ್ನೋ ಪ್ರಶ್ನೆ ಸಹಜವಾಗಿಯೇ ಉದ್ಭವಿಸುತ್ತೆ ಅಲ್ವಾ? ಹೌದು, ಇಲ್ಲಿ ಕೂಡ ಮಾನವೀಯತೆ ಇದೆ ಅನ್ನೋದಕ್ಕೆ ಸರ್ಕಾರಿ ವೈದ್ಯಕೀಯ ಕಾಲೇಜೊಂದು ಸಾಕ್ಷಿಯಾಗಿದೆ. ಆ ಕಾಲೇಜು ಮಾಡಿರೋದೇನು ಅಂಥಾ ನೀವೇ ನೋಡಿ.

ನೆರೆಯ ರಾಷ್ಟ್ರದ ಸೈನಿಕರು ಮತ್ತು ಭಯೋತ್ಪಾದಕರ ದಾಳಿ ಜಮ್ಮು ಕಾಶ್ಮೀರದಲ್ಲಿ ಸಹಜ ಅನ್ನೋ ಪರಿಸ್ಥಿತಿ ನಿರ್ಮಾಣವಾಗಿಬಿಟ್ಟಿದೆ. ಸದಾ ಒಂದಿಲ್ಲೊಂದು ಬಗೆಯಲ್ಲಿ ಸ್ಥಳೀಯರ ಮೇಲೆ, ಪೊಲೀಸರು, ಬೆಂಗಾವಲು ಪಡೆ, ಸೈನಿಕರ ಮೇಲೆ ದಾಳಿ ನಡೆಯುತ್ಲೇ ಇರುತ್ತೆ. ಇಂಥ ದಾಳಿಗೆ ಗುರಿಯಾಗಿ ಗಾಯಗೊಂಡವರಿಗಾಗಿಯೇ ಚಿಕತ್ಸೆ ನೀಡುವ ಮೂಲಕ ಜೀವ ಉಳಿಸುವ ಕೆಲಸ ಸದ್ದಿಲ್ದೇ ನಡೀತಿದೆ.

ಪಾಕಿಸ್ತಾನದಿಂದ ನಿರಂತರ ಕದನ ವಿರಾಮ ಉಲ್ಲಂಘನೆಗಳಿಗೆ ಸಾಕ್ಷಿಯಾಗ್ತಿರೋ ಜಮ್ಮುವಿನಲ್ಲಿ ಸರ್ಕಾರಿ ವೈದ್ಯಕೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತೆ. ಈ ಮೂಲಕ ಜೀವ ಉಳಿಸುವ ಕೆಲಸವನ್ನು ಈ ಆಸ್ಪತ್ರೆಯ ವೈದ್ಯರು ಮಾಡ್ತಿದಾರೆ. ಕದನ ವಿರಾಮ ಉಲ್ಲಂಘಿಸಿ ನಡೆಸಿದ ದಾಳಿಗಳಲ್ಲಿ ಗಂಭೀರವಾಗಿ ಗಾಯಗೊಂಡ ಸುಮಾರು 90ಕ್ಕೂ ಹೆಚ್ಚು ಜನರ ಜೀವ ಉಳಿಸಿದ ಕೀರ್ತಿ ಈ ಆಸ್ಪ್ರತೆಗೆ ಸಲ್ಲುತ್ತೆ.

ದಾಳಿ ನಡೆದ ಘಟನೆಗಳ ಕುರಿತು ನಮಗೆ ವಿಷಯ ತಿಳಿದ ಸಂದರ್ಭದಲ್ಲಿ, ನಾವು ಗಾಯಾಳುಗಳಿಗೆ ಚಿಕಿತ್ಸೆ ನೀಡುತ್ತೇವೆ ಎಂದು ಸರ್ಕಾರಿ ವೈದ್ಯ ಕಾಲೇಜಿನ ಅಧೀಕ್ಷಕ ವೈದ್ಯ ದರಾ ಸಿಂಗ್ ಹೇಳುತ್ತಾರೆ. ಗಾಯಗೊಂಡ ವ್ಯಕ್ತಿಗಳ ಕುರಿತು ಜಿಲ್ಲಾಧಿಕಾರಿ ನಮಗೆ ಮಾಹಿತಿ ನೀಡುತ್ತಾರೆ. ಗಾಯಾಳುಗಳ ಚಿಕಿತ್ಸೆಗಾಗಿ ವೈದ್ಯರ ತಂಡ ಸಜ್ಜಾಗಿರುತ್ತದೆ. ತುರ್ತು ಪರಿಸ್ಥಿತಿ ವೇಳೆ ಚಿಕಿತ್ಸೆ ನೀಡಲು ವೈದ್ಯರ ಪಟ್ಟಿ ಸಿದ್ಧವಾಗಿರುತ್ತದೆ ಎನ್ನುವ ಅವರು, ಚಿಕಿತ್ಸೆ ನೀಡಲು ಅರೆ ವೈದ್ಯಕೀಯ ಪಡೆಯನ್ನು ಕೂಡ ನಾವು ಸಜ್ಜುಗೊಳಿಸಿದ್ದೇವೆ. ಗಾಯಾಳುಗಳಿಗೆ ತಕ್ಷಣ ಚಿಕಿತ್ಸೆ ನೀಡುತ್ತೇವೆ ಎನ್ನುತ್ತಾರೆ. ಇದಕ್ಕಾಗಿ ತುರ್ತು ಚಿಕಿತ್ಸೆ ಮತ್ತು ವಿಪತ್ತು ನಿರ್ವಹಣೆಗಾಗಿ 2 ವಾರ್ಡ್​ಗಳನ್ನು ಮೀಸಲಾಗಿಟ್ಟಿದ್ದೇವೆ ಎನ್ನುವುದು ಅವರ ಅಭಿಪ್ರಾಯ.

ಇನ್ನು, ಬಹು ವಿಧದಲ್ಲಿ ಗಾಯಗೊಂಡವರು ಇಲ್ಲಿ ಚಿಕಿತ್ಸೆಗೆ ದಾಖಲಾಗುತ್ತಾರೆ ಎನ್ನುವ ದರಾ ಸಿಂಗ್, ಎದೆ, ಹೊಟ್ಟೆ ಸೇರಿದಂತೆ ಅನೇಕ ಅಂಗಗಳಲ್ಲಿ ಗಾಯಗಳಾಗಿರುತ್ತವೆ. ಬಹುತೇಕ ಪ್ರಕರಣಗಳಲ್ಲಿ ಮೂಳೆಗೆ ಸಂಬಂಧಿಸಿದ ಗಾಯಾಳುಗಳು ದಾಖಲಾಗುತ್ತಾರೆ. ಇಂಥವರಿಗೆ ಚಿಕಿತ್ಸೆ ನೀಡಲು ಮೂಳೆ ಮತ್ತು ಶಸ್ತ್ರಚಿಕಿತ್ಸಕರ ಜಂಟಿ ತಂಡವನ್ನು ಕೂಡ ಸಜ್ಜುಗೊಳಿಸಲಾಗಿದೆ ಎನ್ನುತ್ತಾರೆ. ಇಲ್ಲಿ ಯಾವುದೇ ರೋಗಿಗಳನ್ನೂ ಕಡೆಗಣಿಸುವುದಿಲ್ಲ ಎಂಬ ಭರವಸೆಯನ್ನೂ ಅವರು ನೀಡುತ್ತಾರೆ.

ಒಟ್ಟಿನಲ್ಲಿ ಜಮ್ಮು ಕಾಶ್ಮೀರದಲ್ಲಿ ಗಾಯಾಳುಗಳ ಜೀವ ಸಂಜೀವಿನಿಯಂಥೆ ಸರ್ಕಾರಿ ವೈದ್ಯಕೀಯ ಕಾಲೇಜು ಕರ್ತವ್ಯ ನಿರ್ವಹಿಸುತ್ತಿರುವುದು ಸಮಾಧಾನಕರ ಸಂಗತಿ. ಇಂಥ ವೈದ್ಯಕೀಯ ಸಂಸ್ಥೆಗಳು ಮತ್ತು ವೈದ್ಯರ ಸಂತತಿ ಸಾವಿರವಾಗಲಿ ಎನ್ನುವುದು ಸುದ್ದಿ ಟಿವಿಯ ಆಶಯ.

ಪ್ರದೀಪ್ ಮಾಲ್ಗುಡಿ ನ್ಯಾಷನಲ್ ಡೆಸ್ಕ್ ಸುದ್ದಿ ಟಿವಿ

0

Leave a Reply

Your email address will not be published. Required fields are marked *