ಪ್ರತಿಪಕ್ಷಗಳಿಗೆ ಔತಣಕೂಟಕ್ಕೆ ಆಹ್ವಾನ ನೀಡಿದ ಸೋನಿಯಾ ಗಾಂಧಿ…

2019 ರ ಲೋಕಸಭೆ ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡು ಪ್ರತಿಪಕ್ಷಗಳನ್ನು ಒಗ್ಗೂಡಿಸಲು ಕಾಂಗ್ರೆಸ್​ ಅಧಿನಾಯಕಿ ಸೋನಿಯಾ ಗಾಂಧಿ ಪ್ರತಿಪಕ್ಷಗಳಿಗೆ ಇಂದು ಔತಣಕೂಟ ಏರ್ಪಡಿಸಿದ್ದಾರೆ. ಈ ಔತಣಕೂಟದಲ್ಲಿ 17 ಪ್ರತಿಪಕ್ಷಗಳ ನಾಯಕರು ಭಾಗವಹಿಸಲಿದ್ದಾರೆ. ದೆಹಲಿಯ ಜನಪತ್ ರಸ್ತೆಯ ಸೋನಿಯಾ ಗಾಂಧಿ ನಿವಾಸದಲ್ಲಿ ಈ ಭೋಜನಕೂಟ ನಡೆಯಲಿದೆ ದೇಶಾದ್ಯಂತ ಬಿಜೆಪಿ ನೇತೃತ್ವದ ಎನ್​ಡಿಎ ಜಯಭೇರಿ ಬಾರಿಸುತ್ತಿದ್ದು, ಕಾಂಗ್ರೆಸ್​ಗೆ ಇದು ತಲೆನೋವಾಗಿ ಪರಿಣಮಿಸಿದೆ. ಮೋದಿ, ಅಮಿತ್​ ಶಾ ನೇತೃತ್ವದಲ್ಲಿ 2019ರ ಲೋಕಸಭಾ ಚುನಾವಣೆ ಗೆಲ್ಲಲು ರಣತಂತ್ರ ಹೆಣೆಯುತ್ತಿದೆ.ಬಿಜೆಪಿ ರಣತಂತ್ರಕ್ಕೆ ಪ್ರತಿತಂತ್ರ ಹೆಣೆಯಲು ಕಾಂಗ್ರೆಸ್​ ಸಜ್ಜಾಗಿದ್ದು,ಪ್ರತಿಪಕ್ಷಗಳ ನಾಯಕರನ್ನು ಒಗ್ಗೂಡಿಸಲು,ವಿಶ್ವಾಸಕ್ಕೆ ತೆಗೆದುಕೊಳ್ಳಲು ಔತಣಕೂಟ ಏರ್ಪಡಿಸಲಾಗಿದೆ..ಈ ಕೂಟಕ್ಕೆ ಟಿಎಂಸಿ ನಾಯಕಿ ಮಮತಾ ಬ್ಯಾನರ್ಜಿ,ಶರದ್​ ಯಾದವ್​​, ಸೀತಾರಾಂ ಯೆಚೂರಿ,ತೇಜಸ್ವಿ ಯಾದವ್​,ರಾಜಾ,ಕನಿಮೋಳಿ ಸೇರಿದಂತೆ ಅನೇಕರು ಪಾಲ್ಗೊಳ್ಳಲಿದ್ದಾರೆ.

0

Leave a Reply

Your email address will not be published. Required fields are marked *