ಫ್ಯಾಷನ್ ಲೋಕದ ಹೊಸ ಅಕರ್ಷಣೆ…

ಫ್ಯಾಷನ್ ಜಗತ್ತಿನಲ್ಲಿ ಟ್ರೆಂಡ್ ಪದೇಪದೇ ಬದಲಾಗುತ್ತಲೇ ಇರುತ್ತದೆ. ಹೊಸಹೊಸ ವಿನ್ಯಾಸದ ಆಭರಣಗಳು, ಉಡುಪುಗಳು ಚಾಲ್ತಿಗೆ ಬರುತ್ತಿರುತ್ತವೆ. ಅದರಲ್ಲಿಯೂ ಮನಸೆಳೆಯುವ ಆಭರಣ ವಿನ್ಯಾಸಗಳಿಗೆ ಮನಸೋಲದವರಿಲ್ಲ. ಇದೀಗ ರೇಷ್ಮೆ ನೂಲಿನ ಆಭರಣ, ಫ್ಯಾಷನ್ ಲೋಕದ ಹೊಸ ಅಕರ್ಷಣೆ ಆಗಿದೆ. ಬಣ್ಣ ಬಣ್ಣದ ರೇಷ್ಮೆದಾರದ ಆಭರಣಗಳು ಚಿನ್ನಕ್ಕಿಂತ ಚೆನ್ನ. ರೇಷ್ಮೆಯ ಸೊಬಗು, ಬೆಡಗಿನ ಆಭರಣಗಳೇ ಈ ಜಮಾನದ ಟ್ರೆಂಡ್. ರೇಷ್ಮೆ ನೂಲಿನ ಆಭರಣಗಳಿಗೆ ನಾರಿಯರು ಫಿದಾ ಆಗಿದ್ದಾರೆ.

ಸೀರೆ, ಚೂಡಿದಾರ್​ಗೆ ತಕ್ಕಂತೆ ಮ್ಯಾಚ್ ಆಗ್ತಿವೆ ರೇಷ್ಮೆ ನೂಲಿನ ಬಣ್ಣ ಬಣ್ಣದ ಆಭರಣಗಳು. ಕಿವಿಗೆ ಓಲಾಡೋ ರಿಂಗು, ಕುತ್ತಿಗೆಗೆ ಮನ ಸೆಳೆಯೋ ನೆಕ್‍ಲೆಸ್, ಕೈಗೆ ಜಲಕ್ ಜಲಕ್ ಬಳೆ. ಅದೂ ಬಣ್ಣ ಬಣ್ಣದ್ದು. ಅಂದಹಾಗೇ ಈ ಹೊಸ ಟ್ರೆಂಡ್ ಹುಟ್ಟುಹಾಕಿರೋದು ಬೆಂಗಳೂರಿನ ಮಹಿಳೆ ಶೃತಿ. ಕೇರಳ ಮೂಲದ ಇವರು ಮೊದಲಿಗೆ ಹವ್ಯಾಸ ಎಂದು ಶುರು ಮಾಡಿದ ರೇಷ್ಮೆ ಆಭರಣಗಳ ವಿನ್ಯಾಸ ಈಗ ಆಕೆಯನ್ನು ಸಾಗರದಾಚೆಗೂ ಆಭರಣ ರಫ್ತು ಮಹಿಳಾ ಉದ್ಯಮಿಯನ್ನಾಗಿ ರೂಪಿಸಿದೆ. ಈ ಆಭರಣಗಳ ವಿಶೇಷ ಅಂದ್ರೆ ಮಹಿಳೆಯರ ಉಡುಪಿನ ಕಲರ್ ಕಾಂಟ್ರೆಸ್ಟ್​​ಗೆ ತಕ್ಕಂತೆ ರೆಡಿ ಆಗುತ್ವೆ. ಕಲರ್ ಆಯ್ಕೆ ಕೂಡ ಇಂಟರೆಸ್ಟಿಂಗ್. ಮಾಡ್ರನ್ ಸ್ಟ್ರೈಲ್ ಆಭರಣಗಳಿಗೆ ಮಲ್ಟಿ ಕಲರ್ , ಟ್ರೆಂಡಿಷನ್ ಆಭರಣಗಳಿಗೆ ಎಲಿಗಂಟ್ ಕಲರ್ ದಾರ ಬಳಸ್ತಾರೆ. ಇವರ ಫಿನಿಷಿಂಗ್ ವರ್ಕ್​ಗೆ ಗ್ರಾಹಕರು ಮಾರುಹೋಗಿದ್ದಾರೆ.

ಬಿಡುವಿನ ಸಮಯದಲ್ಲಿ ತನ್ನ ಅತ್ತೆಯಿಂದ ಈ ಆಭರಣ ಮಾಡೋದನ್ನ ಕಲಿತ ಶೃತಿ ಬಳಿ ಈಗ ಮೂವರು ವಿದ್ಯಾರ್ಥಿನಿಯರಿದ್ದಾರೆ. ಹಾಗೆ ಸುಮ್ಮನೆ ಇಂಟರ್‍ನೆಟ್‍ನಲ್ಲಿ ಹಾಕಿದ್ದಕ್ಕೆ ಆಭರಣಗಳಿಗೆ ಡಿಮ್ಯಾಂಡೋ ಡಿಮ್ಯಾಂಡು. ಮುಂಭೈ, ಪುಣೆ ಹೀಗೆ ದೇಶವಷ್ಟೇ ಅಲ್ಲ ವಿದೇಶಿ ಮಹಿಳೆರಿಗೂ ಆಭರಣಗಳನ್ನ ಇವ್ರು ರಫ್ತು ಮಾಡ್ತಾರೆ.

0

Leave a Reply

Your email address will not be published. Required fields are marked *