ನಗರದಲ್ಲಿ ಹೆಚ್ಚಿದ ಟ್ಯಾಟ್ಯೂ ಟ್ರೆಂಡ್…

ಕಾಲ ಬದಲಾದಂತೆ ಜನ್ರು ಕೂಡ ಬದಲಾಗ್ತಾನೆ ಇರ್ತಾರೆ .ಇತ್ತೀಚೆಗೆ ದಿನಕ್ಕೊಂದು ವಿಭಿನ್ನವಾಗಿರೋ ಫ್ಯಾಷನ್ ಗಳಿಗೆ ಜನ್ರು ಮಾರುಹೋಗ್ತಾಯಿರೊದೆಂತು ಸತ್ಯ. ನೀವು ಸಂಭಂದ ಸೂಚಕವಾಗಿ ಕೆಲಸ ಮಾಡ್ತಾಯಿದ್ದು ನೀವು ಯಾವ ರೀತಿಯ ಸಂಭಂದದಲ್ಲಿ ಇದ್ದೀರ ಅನ್ನೊದ್ದನ್ನಾ ಜಗತ್ತೀಗೆ ಸಾರಿ ಹೇಳುವ ಟೈಮ್ ಈಗಾ ನಿಮ್ಮದಾಗಿದೆ… ಇಷ್ಟ ವರ್ಷ ನೀವು ಕದ್ದು ಮುಚ್ಚಿ ಯಾರುನ್ನಾದ್ರು ಇಷ್ಷ ಪಡ್ತಾಯಿದ್ದು ಅವರಿಗೆ ನಿಮ್ಮ ಪ್ರೀತಿಯ ಬಗ್ಗೆ ಹೇಳೊದಕ್ಕೆ ಹಿಂದೆ ಮುಂದೆ ಯೊಚನೆ ಮಾಡ್ತಾಯಿದ್ದಿರಾ ….? ಅಯ್ಯೊ ಇದುಕೆಲ್ಲಾ ಯಾರಾದ್ರು ಚಿಂತೆ ಮಾಡ್ತಾರಾ ಹೇಳಿ…. ನಿಮ್ಮ ಮೈಮೇಲೆ ಮೂಡುವ ಚಿತ್ತಾರದಿಂದ ನಿಮ್ಮ ಮನಸ್ಸಿನಲ್ಲಿ ಏನಿದೆ ಅನ್ನೋದ್ದನ್ನಾ ನಿಮ್ಮ ಪ್ರೀತಿ ಪಾತ್ರರಿಗೆ ಸಲಿಸಾಗಿ ಹೇಳೊ ಟೈಮ್ ಈಗಾ ಬಂದಿದೆ…

ಇವತ್ತು ನಾವು ನಿಮಗೆ ವಿಶೇಷವಾಗಿರೊ ಟ್ಯಾಟೊಗಳನ್ನಾ ತೊರುಸ್ತೀವಿ. ಅಬ್ಬಾ ಒಂದಾಕ್ಕಿಂದ ಒಂದು ಇಷ್ಟ ಸುಂದರವಾಗಿರೊ ಟ್ಯಾಟೊಗಳನ್ನ ನೋಡ್ತಾಯಿದ್ರೆ ಮೈಜುಮ್ ಎನ್ನಿಸೊದು ಅಂತು ಸತ್ಯ.ಹೌದು ನಗರದಲ್ಲೇಡೆ ಈಗಾ ಎಲ್ಲಿ ನೋಡಿದ್ರು ಟ್ಯಾಟೊ ಮಯಾ ಶುರುವಾಗಿದೆ.ರಿಲೇಷನ್ ಶೀಪ್ ಗೆ ಸಂಭಂದ ಪಟ್ಟಂತೆ ಇರುವ ಟ್ಯಾಟೊಗಳಿಗೆ ಬೇಡಿಕೆ ಹೆಚ್ಚಾಗಿದ್ದು, ಫ್ಯಾಷನ್ ನನ್ನೂ ಮೀರಿದ ಸಂಭಂದಗಳ ಸ್ಟೇಟಸ್ ಗಾಗಿ ಯುವ ಜನತೆಯನ್ನಾ ಟ್ಯಾಟೊ ತನ್ನತ್ತ ಸೆಳೆಯುತ್ತಿದೆ…ಈ ಟ್ಯಾಟೊವಿನಲ್ಲಿ ಫಸ್ಟ್ ಕ್ರಶ್, ಲವ್ ಬ್ರೇಕ್ ಅಪ್, ಎಂಗೇಜ್ಮೆಂಟ್ ನಿಂದ ಹಿಡಿದು ವೈವಾಹಿಕ ಬದುಕಿಗೆ ಕಾಲಿಟ್ಟಿದ್ದೀರ ಎಂಬುದನ್ನು ಸೂಚಿಸುವ ಟ್ಯಾಟುಗಳು ಕೂಡ ಇವೆ .ಒಂದೊಂದು ಟ್ಯಾಟು ಒಂದೊಂದು ಅರ್ಥ,ಗುಣಗಳನ್ನಾ ಹೊಂದಿದ್ದು ಕಾರ್ಟೂನ್ ಲವ್ -ನಿಮ್ಮ ಫನ್, ಸಂಭಂದದ ಮೋಜು, ಮಸ್ತಿಯ ಭಾಗವನ್ನು ಪ್ರತಿನಿಧಿಸಿದರೆ,ಲಾಕ್ ಕೀ-ಒಬ್ಬರ ಕೈಯಲ್ಲಿ ಕೀ, ಇನ್ನೋಬ್ಬರ ಕೈಯಲ್ಲಿ ಲಾಕ್ ನಿಮ್ಮಿಬ್ಬರ ಸಂಭಂದ ಹೇಗೆ ಗಟ್ಟಿಯಾಗಿದೆ ಅನ್ನೊದನ್ನಾ ಸೂಚಿಸುತ್ತದೆ. ಮ್ಯಾಚಿಂಗ್ ಟ್ಯಾಟೊ-ಜೊತೆಗೆ ಇರುವಿಕೆಯ ಸೂಚಕ ಇದಾಗಿದ್ದು ಇನ್ನೂ ಹಲವಾರು ರೀತಿಯ ಟ್ಯಾಟೊಗಳು ಅನೇಕ ಸಂದೇಶವನ್ನು ನೀಡುತ್ತವೆ..ಮದುವೆ ನಿಚ್ಚಯವಾದ ನಂತರ ಹಾಕಿಸಿಕೊಳ್ಳುವ ಟ್ಯಾಟೊಗಳಿಗೆ ಬೇಡಿಕೆ ಹೆಚ್ಚಿದ್ದು ಇನ್ನಾ ಸಂಭಂದ ಮುರಿದು ಬಿದ್ದಾಗ ಅಷ್ಟೇ ಸುಲಭವಾಗಿ ಈ ಟ್ಯಾಟುವನ್ನು ಅಳಿಸಿ ಹಾಕುವ ತಂತ್ರಾಜ್ಝಾನವು ಕೂಡ ಇದೆ.

:ಇನ್ನಾ ಪ್ರೀತಿಯಲ್ಲಿ ಗುರುತಿಸಿಕೊಂಡವರಿಗಿಂತ ಮದುವೆ ನಿಶ್ಚಯವಾದವರು ಕಪಲ್ ಟ್ಯಾಟೊ ಹಾಕಿಸಿಕೊಳ್ಳಲು ಇಷ್ಟ ಪಡ್ತಾರೆ.. ಯಾಕಂದ್ರೆ ನಾವು ಪ್ರೀತಿ ಮಾಡೊರೊ ಯಾವಾಗಳು ನಮ್ಮ ಜೊತೆಯಲ್ಲೇ ಇರಬೇಕು ಎಂಬುದು ಅವರ ಆಶಯ.. ಪ್ರತಿ ಇಂಚಿಗೆಟ್ಯಾಟೊ ಬೆಲೆ 1000ರೂಪಾಯಿಂದ ಹಿಡಿದು 5,6ಸಾವಿರದವರೆಗೂ ಇದೆ ..ಬೆಲೆ ಎಷ್ಟೆ ಇದ್ರೂ ಪರವಾಗಿಲ್ಲಾ,ಬೆಲೆ ಬಗ್ಗೆ ತಲೆ ಕೆಡಿಸಿಕೊಳ್ಳದೇ ಜನ್ರು ತಾವು ಇಷ್ಟ ಪಟ್ಟ ಟ್ಯಾಟೊ ಗಳನ್ನಾ ಹಾಕಿಸಿಕೋಳ್ಳೊದಕ್ಕೆ ಮುಗಿಬೀಳುತ್ತಾ ಇದ್ದಾರೆ…ಒಟ್ನಲ್ಲಿ ಇಷ್ಟ ದಿನ ಜನ್ರು ತಮ್ಮ ಪ್ರೀತಿ ಪಾತ್ರರಿಗೆ ಲೇಟರ್ ಮೂಲಕ ,ಮೇಸೆಜಸ್ ಮೂಲಕ ಅವರವರ ಪ್ರೀತಿಯನ್ನಾ ವ್ಯಕ್ತ ಪಡಿಸಿಕೋಳ್ಳತ್ತಾಯಿದ್ರು… ಅದ್ರೆ ಈಗಾ ಡಿಫರೆಂಟ್ ಆಗಿ ಟ್ಯಾಟೊಗಳ ಮೂಲಕ ತಮ್ಮ ಪ್ರೇಮ ರವಾನೆ ಮಾಡೊದಕ್ಕೆ ರೇಡಿಯಾಗಿದ್ದಾರೆ….

ಸುಪ್ರೀಯಾ ಶರ್ಮಾ ಸುದ್ದಿ ಟಿವಿ ಬೆಂಗಳೂರು…

0

Leave a Reply

Your email address will not be published. Required fields are marked *