ಸಿಲಿಕಾನ್​ ಸಿಟಿಯಲ್ಲಿ ಮಣ್ಣಿನ ಬಾಟಲ್​​​​ಗಳ ದರ್ಬಾರ್…

ಮಣ್ಣಿನ ಮಡಿಕೆಯಲ್ಲಿ ಹಾಕಿಟ್ಟ ನೀರು ಸದಾ ತಂಪಾಗಿರುತ್ತೆ..ಹೀಗಾಗಿ ಈಗಿನ ಕಾಲದಲ್ಲೂ ಕೆಲವರು ನೀರನ್ನು ಕೆಲವರು ಮಣ್ಣಿನ ಮಡಿಕೆಯಲ್ಲಿಡುತ್ತಾರೆ..ಇದೀಗ ಈ ಮಡಿಕೆಯ ಹೊಸ ಅವತರಣಿಕೆ ಮಾರ್ಕೇಟ್​ಗೆ ಬಂದಿದೆ..ಇಷ್ಟ ದಿನ ಜನ್ರು ಬಿಸಿಲಿನ ಭಯದಿಂದ ರಿಲೀಫ್ ಆಗೋಕೆ ಮಡಿಕೆಗಳಲ್ಲಿ ನೀರು ಇಟ್ಟಿರೊದ್ರನ್ನು ನಿವೇಲ್ಲಾ ನೋಡಿರ್ತಿರಿ..ಆದ್ರೆ ಮಣ್ಣಿನ ಬಾಟಲ್​ಗಲನ್ನು ನೋಡಿರ್ಕಿಲ್ಲ..ಇದೀಗ ಮಣ್ಣಿನ ಬಾಟಲ್​ಗಳು ಮಾರ್ಕೆಟ್​​ಗೆ ಕಾಲಿಟ್ಟಿವೆ..ಹೌದು ನಗರದಲ್ಲಿ ಗ್ರಾಹಕರಿಗೆ ಕೈಗೆಟುಕುವ ಬೆಲೆಯಲ್ಲಿ ಮಣ್ಣಿನ ಬಾಟಲ್ ಗಳು ಸಿಗ್ತಾಯಿದೆ.. ಯಾರು ಬೇಕಾದ್ರು ಈ ಬಾಟಲ್ ಗಳನ್ನಾ ಸಲಿಸಲಾಗಿ ಕ್ಯಾರಿ ಮಾಡಬಹುದು. ಉದ್ಯಾನ ನಗರಿ ಬೆಂಗಳೂರಿನಲ್ಲಿ ಈಗಾ ಈ ಮಣ್ಣಿನ ಬಾಟಲ್​ಗಳ ಹವಾ ಜೋರಾಗಿದೆ,ಬೇಸಿಗೆ ಕಾಲದಲ್ಲಿ ಜನ್ರಿಗೆ ದೇಹವನ್ನು ತಂಪು ಮಾಡೊಕೆ ತಣ್ಣನೆಯ ನೀರಿನ ಅವಶ್ಯಕತೆ ತುಂಬಾ ಹೆಚ್ಚಾಗೆ ಇರತ್ತೆ.ಇದಕ್ಕೆ ಅಂತಾನೆ ಸಮರ್ಪನ ಟ್ರಸ್ಟ್ ವತಿಯಿಂದ ಮಣ್ಣಿನ ಬಾಟಲ್ ಗಳನ್ನು ತಯಾರಿಸಿ ಜನ್ರಿಗೆ ಕೈಗೆಟುಕುವ ಬೆಲೆಯಲ್ಲಿ ಕೊಡಲಾಗ್ತಿದೆ..ಸಾಮಾನ್ಯವಾಗಿ ಹಿಂದಿನ ಕಾಲದಲ್ಲಿ ಜನ್ರು ಹೆಚ್ಚಾಗಿ ಮಣ್ಣೀನ ಮಡಿಕೆಗಳನ್ನಾ ಬಳಕೆ ಮಾಡ್ತಿದ್ದರು ಸ್ವಲ್ಪ ವರ್ಷಗಳ ನಂತರ ಜನ್ರು ಆರೊಗ್ಯದ ದೃಷ್ಟಿಯಿಂದ ತಾಮ್ರಾವನ್ನು ಹೆಚ್ಚಾಗಿ ಬಳಸ್ತಾಯಿದ್ರು..ಆದ್ರೆ ಈಗಾ ಮತ್ತೆ ಮಣ್ಣಿನ ಮಡಿಕೆಗಳು, ಹಾಗೂ ಬಾಟಲ್ ಗಳಿಗೆ ಬೇಡಿಕೆ ಜಾಸ್ತಿಯಾಗಿದೆ. ಪ್ರತಿಯೊಂದು ಮಣ್ಣಿನ ಬಾಟಲ್ ನ ಬೆಲೆ 150ರಿಂದ 180 ರೂಪಾಯಿವರೆಗೂ ಇದ್ದು ಇದು ಬೇರೆ ತಾಮ್ರಾದ ಬಾಟಲ್ ಗಿಂತ ಮೂರು ಪಟ್ಟು ಕಡಿಮ ಬೆಲೆಗೆ ಸಿಗ್ತಾಯಿರೊದ್ರಿಂದ ಎಲ್ಲಾ ವರ್ಗದ ಜನ್ರು ಕೂಡ ಈ ಬಾಟಲ್ ಗಳನ್ನು ಕೊಂಡು ಕೊಳ್ಳೊದಕ್ಕೆ ಮುಗಿ ಬಿಳ್ತಾಯಿದ್ದಾರೆ..ಕಡಿಮೆ ಬೆಲೆಯಲ್ಲಿ ನಮ್ಮ ಆರೋಗ್ಯ ಸಿಗುತ್ತೆ ಅಂದ್ರೆ ಯಾರ್ ತಾನೇ ಈ ಮಣ್ಣಿನ ಬಾಟಲ್ ಗಳನ್ನಾ ಬಳಕೆ ಮಾಡಲ್ಲಾ ನೀವೆ ಹೇಳಿ……

ಸುಪ್ರಿಯಾ ಶರ್ಮಾ ಸುದ್ದಿ ಟಿವಿ ಬೆಂಗಳೂರು….

0

Leave a Reply

Your email address will not be published. Required fields are marked *