ಕೊಡಗಿನ ವೈಭವ ಪ್ರದರ್ಶಿಸುವ ಸಂತೋಷ್ ಕೊಡಂಕೇರಿ ಕಿರುಚಿತ್ರಗಳು

ಮಡಿಕೇರಿ: ಕೊಡಗಿನಲ್ಲಿ ಕಂಡು ಕೇಳರಿಯದ ರೀತಿಯಲ್ಲಿ ನಡೆದ ಭಾರೀ ಭೂಕುಸಿತ, ಪ್ರವಾಹದ ನಂತರ ಕೊಡಗಿಗೆ ಪ್ರವಾಸ ಹೋಗಬೇಕೇ ಬೇಡವೇ ಎಂಬ ಅನುಮಾನ ಜನರಲ್ಲಿ ಮನೆಮಾಡಿದೆ. ಈ ಮೂಲಕ ಕೊಡಗಿನತ್ತ ಬರುವ ಪ್ರವಾಸಿಗರ ಸಂಖ್ಯೆಯಲ್ಲಿ ಇಳಿಮುಖವಾಗಿದೆ. ಇಂತಹ ತಪ್ಪು ಅಭಿಪ್ರಾಯಗಳನ್ನು ತಿದ್ದಲು ನಿರ್ಮಾಪಕ, ನಿರ್ದೇಶಕ ಸಂತೋಷ್ ಕೋಡಂಕೇರಿ ಮುಂದಾಗಿದ್ದಾರೆ. ದ್ರೋಣ್ ಕ್ಯಾಮೆರಾಗಳ ಮೂಲಕ ಚಿತ್ರೀಕರಿಸಿರುವ ಮನೋಹರ ದೃಶ್ಯಗಳು ಜನರನ್ನು ಮತ್ತೆ ಮಡಿಕೇರಿಯತ್ತ ಸೆಳೆಯುತ್ತವೆ. ಕಿರುಚಿತ್ರಗಳು ಮನಮೋನಹಕವಾಗಿದ್ದು, ಕೊಡಗಿನ ಪ್ರಾಕೃತಿಕ ಸೌಂದರ್ಯ ಅದ್ಭುತವಾಗಿ ಹಿಡಿದಿಡಲಾಗಿದೆ.

ಕೊಡಗು ಕಾಫಿ ಮತ್ತು ಸಾಂಬಾರ ಪದಾರ್ಥಗಳನ್ನು ಉತ್ಪನ್ನಗಳನ್ನು ಉತ್ಪಾದಿಸುವ ಸಂಪದ್ಭರಿತ ನಾಡು. ಇದರೊಂದಿಗೆ ಮನಮೋಹಕ ಪ್ರಾಕೃತಿಕ ಸೌಂದರ್ಯ ಕೂಡ ಪ್ರವಾಸಿಗರನ್ನು ಕೊಡಗು ಕೈಬೀಸಿ ಕರೆಯುತ್ತದೆ. ದೇಶ ವಿದೇಶಗಳಿಂದ ಕೊಡಗಿಗೆ ಪ್ರವಾಸಿಗರು ಆಗಮಿಸುತ್ತಿದ್ದಾರೆ. ಕೊಡಗು ಜಿಲ್ಲಾ ಹೊಟೆಲ್, ರೆಸಾರ್ಟ್ ಮತ್ತು ರೆಸ್ಟೊರೆಂಟ್ (ರಿ) ಸಂಗೀತಮಯ ಕೂರ್ಗ್ ಆಬ್ಸಲೂಟ್​ಲಿ ಲವಬಲ್ ಅಂಡ್ ಸೇಫ್ ಹೆಸರಿನ ಕಿರುಚಿತ್ರವನ್ನು ನಿರ್ಮಿಸಿದೆ.

ಕೆಎಸ್​ಟಿಡಿಸಿ ನಿರ್ದೇಶಕ ಕುಮಾರ್ ಪುಷ್ಕರ್, ಕೊಡಗು ಎಸ್​ಪಿ ಸುಮನ್ ಪಣ್ಣೇಕರ್ ಅವರು ಕಿರುಚಿತ್ರಗಳನ್ನು ಬಿಡುಗಡೆ ಮಾಡಿದರು. ಈ ವೇಳೆ ಪ್ರವಾಸೋದ್ಯಮ ಇಲಾಖೆ ಅಧಿಕಾರಿ ಜಗನ್ನಾಥ್, ಅಸೋಸಿಯೇಷನ್ ಮಾರ್ಗದರ್ಶಕ ಚಿದ್ವಿಲಾಸ್, ಜಿಲ್ಲಾ ಚೇಂಬರ್ ಆಫ್ ಕಾಮರ್ಸ್​​ನ ಬಿ. ಎನ್. ಪ್ರಕಾಶ್ ಮತ್ತು ನಿರ್ದೇಶಕ ಸಂತೋಷ್ ಕೊಡಂಕೇರಿ ಹಾಜರಿದ್ದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕೊಡಗು ಜಿಲ್ಲಾ ಹೊಟೆಲ್, ರೆಸಾರ್ಟ್​ ಮತ್ತು ರೆಸ್ಟೊರೆಂಟ್​ನ ಬಿ. ಆರ್. ನಾಗೇಂದ್ರ ಪ್ರಸಾದ್ ಅವರು ವಹಿಸಿಕೊಂಡಿದ್ದರು.

ಭೌಗೋಳಿಕವಾಗಿ ಕೊಡಗಿನ ಸೌಂದರ್ಯವನ್ನು ಅತ್ಯಾಧುನಿಕ ತಂತ್ರಜ್ಞಾನವನ್ನು ಬಳಸಿ ಚಿತ್ರಿಸಿರುವ ಕ್ರಮ ಸಂತೋಷ್ ಅವರ ಕೊಡಗಿನ ಕುರಿತ ತಿಳಿವಳಿಕೆ ಮತ್ತು ಕಾಳಜಿಗಳೆರಡಕ್ಕೂ ಸಾಕ್ಷಿಯಾಗಿದೆ. ಸಾಮಾಜಿಕ ಜಾಲತಾಣಗಳ ಮೂಲಕ ಕೊಡಗಿನ ಸೌಂದರ್ಯವನ್ನು ಪ್ರಸಾರ ಮಾಡುವುದು ಮತ್ತು ಈ ಮೂಲಕ ಕೊಡಗಿನತ್ತ ಜನರನ್ನು ಸೆಳೆಯುವ ಕಾರ್ಯವನ್ನು ಈ ಕಿರುಚಿತ್ರಗಳ ಮೂಲಕ ಸಂತೋಷ್ ಯಶಸ್ವಿಯಾಗಿ ಮಾಡಿದ್ದಾರೆ. ಕೊಡಗಿನ ಹೊಟೆಲ್, ರೆಸ್ಟೊರೆಂಟ್, ಪ್ರವಾಸಿ ಸ್ಥಳಗಳನ್ನು ಒಳಗೊಂಡಿರುವ ಮೂರು ಕಿರುಚಿತ್ರಗಳ ಮೂಲಕ ಸದ್ಯದ ಕೊಡಗಿನ ಪ್ರವಾಸದ ಸಾಧ್ಯತೆಗಳನ್ನು ಹಿಡಿದಿಟ್ಟಿದ್ದಾರೆ.

2+

Leave a Reply

Your email address will not be published. Required fields are marked *