ರೋಹಿಣಿ ಕೋರ್ಟ್​​ನಲ್ಲಿ ಗುಂಡಿನ ದಾಳಿಗೆ ಒಬ್ಬ ಬಲಿ: ಒಬ್ಬನ ಬಂಧನ

ದೆಹಲಿ: ದೆಹಲಿಯ ರೋಹಿಣಿ ಕೋರ್ಟ್​ ಆವರಣದಲ್ಲಿ ಎರಡು ಗುಂಪಿನ ನಡುವೆ ನಡೆದ ಘರ್ಷಣೆ ವೇಳೆ ಗುಂಡಿನ ದಾಳಿ ನಡೆಸಲಾಗಿದೆ. ಕೋರ್ಟ್​​​ ಕ್ಯಾಂಟೀನ್ ಸಮೀಪ ನಡೆದ ದಾಳಿಯಲ್ಲಿ ಒಬ್ಬ ವ್ಯಕ್ತಿ ದುರ್ಮರಣ ಹೊದಿದ್ದಾನೆ. ದಾಳಿ ನಡೆಸಿದ ಪೈಕಿ ಒಬ್ಬ ದಾಳಿಕೋರನನ್ನು ಪೊಲೀಸರು ಬಂಧಿಸಲಾಗಿದೆ ಎಂದು ವರದಿಯಾಗಿದೆ. ಆದರೆ, ದಾಳಿಗೆ ಇದುವರೆಗೆ ನಿರ್ದಿಷ್ಟ ಕಾರಣ ತಿಳಿದುಬಂದಿಲ್ಲ. ಕಳೆದ ಏಪ್ರಿಲ್​ನಲ್ಲಿ ಕೂಡ ವಿಚಾರಣಾಧೀನ ಖೈದಿಯನ್ನು ಇದೇ ಮಾದರಿಯಲ್ಲಿ ಹತ್ಯೆಗೈಯಲಾಗಿತ್ತು. ದಾಳಿ ನಡೆಸಿದ ವ್ಯಕ್ತಿ ಕೋರ್ಟ್​​ನಿಂದ ಪರಾರಿಯಾಗಿದ್ದ.

0

Leave a Reply

Your email address will not be published. Required fields are marked *