ಬಹುತೇಕ ಮಂದಿಗೆ ಸೆಲ್ಫಿ ಹುಚ್ಚು…..

ಇತ್ತೀಚೆಗೆ ಬಹುತೇಕ ಮಂದಿಗೆ ಸೆಲ್ಫಿ ಹುಚ್ಚು…ಇದನ್ನೇ ಇಟ್ಟುಕೊಂಡು ಸಂಚಾರಿ ಪೊಲೀಸ್ರು ಹೊಸ ಪ್ಲಾನ್​ ರೆಡಿ ಮಾಡಿದ್ದಾರೆ.. ಇದ್ರಿಂದ ಅಪಘಾತ ಪ್ರಮಾಣ ಕಡಿಮೆಯಾಗುತ್ತೆ ಅನ್ನೊದು ಅವ್ರ ಲೆಕ್ಕಾಚಾರ. ಅರೇ… ಸೇಲ್ಫಿಗೂ ಅಪಘಾತಗಳ ಪ್ರಮಾಣ ಕಡಿಮೆ ಆಗೋದಕ್ಕೂ ಏನಪ್ಪಾ ಸಂಬಂಧ ಅಂತೀರಾ..? ನಗರದೆಲ್ಲೆಡೆ ಪಾದಚಾರಿಗಳ ಅನುಕೂಲಕ್ಕಾಗಿ ಸ್ಕೈವಾಕ್​ ನಿರ್ಮಿಸಲಾಗಿದೆ.. ಆದ್ರೆ ಅವುಗಳ ಸದುಪಯೋಗವಾಗದೇ ಅಪಘಾತಗಳ ಪ್ರಮಾಣ ಹೆಚ್ಚಾಗ್ತಿದೆ.. ಈ  ಹಿನ್ನೆಲೆಯಲ್ಲಿ  ಸ್ಕೈವಾಕ್​ ಬಳಕೆಯ ಬಗ್ಗೆ ನಗರ ಸಂಚಾರಿ ಪೊಲೀಸ್ರು ವಿನೂತನ ರೀತಿಯಲ್ಲಿ ಅರಿವು ಮೂಡಿಸ್ತಿದ್ದಾರೆ.. ಮಾಯಾ ಫಿಲ್ಮ್‌ ಸಹಯೋಗದಲ್ಲಿ ಬಿ- ಸೇಫ್​ ಹೆಸರಿನ ಸ್ಪರ್ಧೆ ಏರ್ಪಡಿಸಿದ್ದಾರೆ.. ನಗರದ ಸ್ಕೈವಾಕ್‌ಗಳಲ್ಲಿ ಓಡಾಡುವ ಪಾದಚಾರಿಗಳು, ಅಲ್ಲಿಯೇ ಸೆಲ್ಫಿ ಕ್ಲಿಕ್ಕಿಸಿಕೊಂಡು ಸ್ಪರ್ಧೆಗೆ ಕಳುಹಿಸಬಹುದು.

ಸ್ಕೈವಾಕ್‌ ಮೇಲೆ ಸಂಚರಿಸುವ ಪಾದಚಾರಿಗಳು ಸೆಲ್ಫಿ ಕ್ಲಿಕ್ಕಿಸಿಕೊಂಡು ಅದನ್ನು ಬಳಿಕ ತಮ್ಮ ಫೇಸ್‌ಬುಕ್‌ ಅಥವಾ ಟ್ವಿಟರ್‌ ಖಾತೆಯಲ್ಲಿ ಅಪ್‌ಲೋಡ್‌ ಮಾಡಬೇಕು. ಆ ಪೋಸ್ಟ್‌ಗೆ ‘#Selfieonskywalk’ ಎಂದು ಅಡಿಬರಹ ಬರೆದು ಅದನ್ನು ‘@BlrCityPolice’ ಟ್ವಿಟರ್‌ ಅಥವಾ ‘BENGALURU CITY POLICE’ ಫೇಸ್‌ಬುಕ್‌ ಪುಟಕ್ಕೆ ಶೇರ್‌ ಮಾಡಬೇಕು. ಇಂಥ ಚಿತ್ರಗಳನ್ನು ಅಪಲೋಡ್‌ ಹಾಗೂ ಶೇರ್‌ ಮಾಡಲು ಏಪ್ರಿಲ್‌ 7 ಕೊನೆಯ ದಿನವಾಗಿದೆ. ಅದರಲ್ಲಿ ಉತ್ತಮವಾದ ಐದು ಚಿತ್ರಗಳಿಗೆ  ಪೊಲೀಸರು ಬಹುಮಾನ ನೀಡಲಿದ್ದಾರೆ. ವಿಭಿನ್ನ ಪ್ರಯೋಗದ ಮೂಲಕ ಅಪಘಾತ ಪ್ರಮಾಣ ತಡೆಯಲು ಮುಂದಾಗಿರೋದು ಶ್ಲಾಘನೀಯ.. ಅಷ್ಟೇ ಅಲ್ಲದೇ ಈಗಾಗ್ಲೇ 50 ಕ್ಕೂ ಅಧಿಕ ಮಂದಿ ಅಪಲೋಡ್​ ಮಾಡಿದ್ದು ಸಂಚಾರಿ ಪೊಲೀಸರು ತಮ್ಮ ಪ್ಲಾನ್​ ವರ್ಕಾಟ್​ ಆಗೋ ನಿರೀಕ್ಷೆಯಲ್ಲಿದಾರೆ.

ವೀಣಾ ಸಿದ್ದಾಪುರ ಸುದ್ದಿ ಟಿವಿ ಬೆಂಗಳೂರು

2+

Leave a Reply

Your email address will not be published. Required fields are marked *