ಹೈದರಾಬಾದ್​​ನಲ್ಲಿ ಇಂದಿನಿಂದ ಭಾರತ ಹಾಗೂ ವೆಸ್ಟ್​ ಇಂಡಿಸ್​​ ನಡುವಣ ಎರಡನೇ ಟೆಸ್ಟ್​​​ ಪಂದ್ಯ

ಮುತ್ತಿನ ನಗರಿಯಲ್ಲಿ ಇಂದಿನಿಂದ ಟೀಮ್​ ಇಂಡಿಯಾ ಹಾಗೂ ವೆಸ್ಟ್​​ ಇಂಡಿಸ್​ ನಡುವಣ ಎರಡನೇ ಟೆಸ್ಟ್​ ಪಂದ್ಯ ಆರಂಭವಾಗಲಿದ್ದು, ಟೀಮ್​ ಇಂಡಿಯಾ ಮತ್ತೊಂದು ಗೆಲುವಿನ ವಿಶ್ವಾಸದಲ್ಲಿದೆ. ರಾಜ್​ಕೋಟ್​​ನಲ್ಲಿ ನಡೆದ ಮೊದಲ ಟೆಸ್ಟ್​ ಪಂದ್ಯದಲ್ಲಿ ಇನ್ನಿಂಗ್ಸ್​​ ಹಾಗೂ 272 ರನ್​ ಗೆಲುವು ದಾಖಲಿಸಿರುವ ಬ್ಲ್ಯೂ ಬಾಯ್ಸ್​​, ಎರಡನೇ ಟೆಸ್ಟ್​​ನಲ್ಲೂ ಇಂತಹದ್ದೇ ಪ್ರದರ್ಶನ ನೀಡುವ ಲೆಕ್ಕಾಚಾರ ಹಾಕಿಕೊಂಡಿದೆ. ಪ್ರವಾಸಿ ತಂಡ, ಟೀಮ್​ ಇಂಡಿಯಾವನ್ನು ಮಣಿಸುವ ಕನಸು ಕಾಣ್ತಾ ಇದ್ದು, ಪಂದ್ಯ ರೋಚಕತೆ ಹುಟ್ಟಿಸಿದೆ.

ಅಂಕಿ ಅಂಶಗಳ ಲೆಕ್ಕಾಚಾರದಲ್ಲಿ ಟೀಮ್​ ಇಂಡಿಯಾ ಬಲಾಡ್ಯವಾಗಿದ್ದು, ವಿಂಡೀಸ್​ ತಂಡಕ್ಕೆ ತಲೆ ನೋವಾಗಿದೆ. ವೆಸ್ಟ್​​​ ಇಂಡಿಸ್​ ವಿರುದ್ಧ ತವರಿನಲ್ಲಿ ಟೆಸ್ಟ್​ ಸರಣಿ ಕ್ಲಿನ್​ ಸ್ವಿಪ್​ ಮಾಡುವ ಲೆಕ್ಕಾಚಾರವನ್ನು ಬ್ಲ್ಯೂ ಬಾಯ್ಸ್​ ಹಾಕಿಕೊಂಡಿದೆ. ಈ ವರೆಗೆ ಆಡಿದ 95 ಪಂದ್ಯಗಳಲ್ಲಿ ಟೀಮ್​ ಇಂಡಿಯಾ 19 ರಲ್ಲಿ ಗೆಲುವು ಸಾಧಿಸಿದ್ರೆ, 30 ರಲ್ಲಿ ಸೋಲು ಕಂಡಿದ್ದು, 46 ಪಂದ್ಯಗಳನ್ನು ಡ್ರಾ ಮಾಡಿಕೊಂಡಿದೆ. ಕಳೆದ 15 ವರ್ಷಗಳಿಂದ ವಿಂಡೀಸ್​ ಭಾರತದ ವಿರುದ್ಧ ಒಂದೇ ಒಂದು ಟೆಸ್ಟ್​​ ಗೆದ್ದಿಲ್ಲ.

ಎರಡನೇ ಟೆಸ್ಟ್​ ಪಂದ್ಯದಲ್ಲಿ ನಿಜಕ್ಕೂ ಟೆಸ್ಟ್​ಗೆ ಒಳಪಡುವ ವಿಭಾಗ ಆರಂಭಿಕರದ್ದು. ಈ ಜೋಡಿ ತಂಡಕ್ಕೆ ಭರ್ಜರಿ ಜೊತೆಯಾಟದ ಕಾಣಿಕೆ ನೀಡುವ ಅನಿವಾರ್ಯತೆ ಇದೆ. ಕನ್ನಡಿಗ ಕೆ.ಎಲ್​ ರಾಹುಲ್​ ಜೊತೆಗೆ ಇನ್ನಿಂಗ್ಸ್​ ಕಟ್ಟುವ ಪೃಥ್ವಿ ಶಾ ಮೊದಲ ಪಂದ್ಯದಲ್ಲಿ ಶತಕ ಬಾರಿಸಿ ಸಂಭ್ರಮಿಸಿದ್ದರು. ಪೃಥ್ವಿ ತನ್ನ ಎರಡನೇ ಅಂತಾರಾಷ್ಟ್ರೀಯ ಪಂದ್ಯದಲ್ಲೂ ಧಮಾಕೆದಾರ್​ ಪ್ರದರ್ಶನ ನೀಡುವ ಲೆಕ್ಕಾಚಾರ ಹಾಕಿಕೊಂಡಿದ್ದಾರೆ. ಇನ್ನು ಮೊದಲ ಟೆಸ್ಟ್​​ನಲ್ಲಿ ರನ್​ ಕಲೆ ಹಾಕುವಲ್ಲಿ ಹಿಂದೆ ಬಿದ್ದಿದ್ದ ಕೆ.ಎಲ್​ ರಾಹುಲ್​ ಮೇಲೆ ಎಲ್ಲರ ಚಿತ್ತ ನೆಟ್ಟಿದೆ. ರಾಹುಲ್​ ಬಿಗ್​ ಇನ್ನಿಂಗ್ಸ್​​ ಕಟ್ಟಿ ಟೀಕೆಗಳಿಗೆ ಉತ್ತರ ನೀಡುವ ಅವಶ್ಯಕತೆ ಇದೆ.

ಇನ್ನು ಟೀಮ್​ ಇಂಡಿಯಾದ ಮಧ್ಯಮ ಕ್ರಮಾಂಕದ ಬ್ಯಾಟಿಂಗ್​ ಲೈನ್​ ಅಪ್​ ಸ್ಟ್ರಾಂಗ್ ಆಗಿದೆ. ಮೂರನೇ ಕ್ರಮಾಂಕದಲ್ಲಿ ಬ್ಯಾಟ್​ ಮಾಡುವ ಚೇತೇಶ್ವರ್​ ಪೂಜಾರ್​​​ ಮೂರಂಕಿ ಮೊತ್ತ ಕಲೆ ಹಾಕುವ ಕನಸಿನಲ್ಲಿದ್ದಾರೆ. ಇನ್ನು ನಾಯಕ ವಿರಾಟ್​ ಕೊಹ್ಲಿ ಹಾಗೂ ಉಪನಾಯಕ ಅಜಿಂಕ್ಯ ರಹಾನೆ ತಂಡ ತಮ್ಮ ಮೇಲೆ ಇಟ್ಟ ಜವಾಬ್ದಾರಿಗೆ ಪೂರಕವಾಗಿ ಬ್ಯಾಟ್ ಮಾಡಬೇಕಿದೆ. ವಿಕೆಟ್​ ಕೀಪರ್​​ ಬ್ಯಾಟ್ಸ್​​ಮನ್ಸ್​​ ರಿಷಭ್​ ಪಂತ್​​, ಮೊದಲ ಟೆಸ್ಟ್​​ನಲ್ಲಿ ಶತಕ ಬಾರಿಸುವಲ್ಲಿ ವಿಫಲರಾಗಿದ್ದು, ಈ ಬಾರಿ ಮಾಡಿದ ತಪ್ಪನ್ನು ತಿದ್ದಿಕೊಳ್ಳುವ ಪ್ಲಾನ್ ಮಾಡಿಕೊಂಡಿದ್ದಾರೆ.

ಇನ್ನು ಟೀಮ್​ ಇಂಡಿಯಾದ ವೇಗದ ಬೌಲರ್ಸ್​​ ಶಿಸ್ತು ಬದ್ಧದಾಳಿ ನಡೆಸಬೇಕಿದೆ. ಉಮೇಶ್​ ಯಾದವ್​ ಹಾಗೂ ಮೊಹಮ್ಮದ್​ ಶಮಿ ಆರಂಭದಲ್ಲಿ ಎದುರಾಳಿ ತಂಡಕ್ಕೆ ಪೆಟ್ಟು ನೀಡುವ ಅನಿವಾರ್ಯತೆ ಇದೆ. ಇನ್ನು ಸ್ಪಿನ್​ ಬೌಲಿಂಗ್​​ನಲ್ಲಿ ಅನುಭವಿ ಬೌಲರ್​​ ಅಶ್ವಿನ್​ ಹಾಗೂ ರವೀಂದ್ರ ಜಡೇಜಾ ಸ್ಪಿನ್​ ಮೋಡಿ ನಡೆಸಿ, ಎದುರಾಳಿಗಳ ರನ್​ ದಾಹಕ್ಕೆ ಬ್ರೇಕ್​ ಹಾಕಬೇಕು. ಮೊದಲ ಟೆಸ್ಟ್​​ನಲ್ಲಿ ಅಮೋಘ ಬೌಲಿಂಗ್​ ಪ್ರದರ್ಶನ ನೀಡಿದ್ದ ಕುಲ್​​ದೀಪ್​​ ಯಾದವ್​​ ಮತ್ತೊಮ್ಮೆ ಕಮಾಲ್​ ಪ್ರದರ್ಶನ ನೀಡಬೇಕಿದೆ. ಪ್ರವಾಸದಲ್ಲಿ ಟೀಮ್​ ಇಂಡಿಯಾ ವಿರುದ್ಧ ಹೀನಾಯ ಸೋಲು ಅನುಭವಿಸಿರುವ ವೆಸ್ಟ್​​ ಇಂಡಿಸ್​ ತಂಡ, ಭರ್ಜರಿ ಕಮ್​ ಬ್ಯಾಕ್​ ಮಾಡೋಕೆ ಪ್ಲಾನ್​ ಮಾಡಿಕೊಂಡಿದೆ. ಬ್ಲ್ಯೂ ಬಾಯ್ಸ್​ ವಿರುದ್ಧದ ಮೊದಲ ಟೆಸ್ಟ್​​ ಪಂದ್ಯದಲ್ಲಿ ಕಣಕ್ಕೆ ಇಳಿಯದೇ ಇದ್ದ, ನಾಯಕ ಜಾಸನ್​ ಹೋಲ್ಡರ್​ ಇಂದಿನ ಪಂದ್ಯದಲ್ಲೂ ಬೆಂಚ್​ ಕಾಯುವ ಸಾಧ್ಯತೆ ಇದೆ. ಬ್ಯಾಟಿಂಗ್ ಹಾಗೂ ಬೌಲಿಂಗ್​​ನಲ್ಲಿ ವೈಫಲ್ಯ ಅನುಭವಿಸಿರುವ ವಿಂಡೀಸ್​ ತಂಡ ಭರ್ಜರಿ ಕಮ್​ ಬ್ಯಾಕ್​ ಮಾಡುವ ಪ್ಲಾನ್​ ಹಾಕಿಕೊಂಡಿದೆ.

0

Leave a Reply

Your email address will not be published. Required fields are marked *