NRIಗಳಿಗೆ ಮತದಾನ ಅವಕಾಶ: ಕೇಂದ್ರಕ್ಕೆ 1 ವಾರ ಸಮಯ ನೀಡಿದ ಸುಪ್ರೀಂ

ನವದೆಹಲಿ: ಅನಿವಾಸಿ ಭಾರತೀಯರಿಗೆ ಮತದಾನ ಹಕ್ಕು ನೀಡುವ ಕುರಿತು ಸಲ್ಲಿಕೆಯಾದ ಅರ್ಜಿಯ ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್, ಈ ಕುರಿತು ಉತ್ತರಿಸುವಂತೆ ಕೇಂದ್ರ ಸರ್ಕಾರಕ್ಕೆ ಒಂದು ವಾರಗಳ ಕಾಲ ಅವಕಾಶ ನೀಡಿದೆ. ಈ ವೇಳೆ NRIಗಳಿಗೆ ಮತದಾನದ ಹಕ್ಕು ಕಲ್ಪಿಸುವ ಸಲುವಾಗಿ ಪ್ರಜಾ ಪ್ರಾತಿನಿಧ್ಯ ಕಾಯ್ದೆಗೆ ತಿದ್ದುಪಡಿ ತರುತ್ತೀರಾ ಎಂದು ಕೋರ್ಟ್ ಕೇಂದ್ರ ಸರ್ಕಾರವನ್ನು ಪ್ರಶ್ನಿಸಿದೆ. 10 ದಶಲಕ್ಷ NRIಗಳ ಪೈಕಿ 24,348 ಜನ ಈಗಾಗಲೇ ಮತದಾನದ ಹಕ್ಕಿಗಾಗಿ ನೋಂದಣಿ ಮಾಡಿಸಿಕೊಂಡಿದ್ದಾರೆ. ಕೇಂದ್ರ ಸರ್ಕಾರ ಅವಕಾಶ ನೀಡಿದಲ್ಲಿ ವಿದೇಶದಿಂದಲೇ ಮತ ಚಲಾಯಿಸುವ ಹಕ್ಕನ್ನು ಇವರು ಗಳಿಸಲಿದ್ದಾರೆ. ಆರಂಭದಲ್ಲಿ ಕೇರಳ, ಪಂಜಾಬ್, ತೆಲಂಗಾಣ NRIಗಳಿಗೆ ಅವಕಾಶ ಸಿಗಲಿದೆ.

0

Leave a Reply

Your email address will not be published. Required fields are marked *