ಯಾವುದೇ ಬ್ಯಾಂಕ್​ಗಳನ್ನು ವಿಲೀನಗೊಳಿಸುವುದಿಲ್ಲ: ರಜನೀಶ್ ಕುಮಾರ್

ದೆಹಲಿ: ಬ್ಯಾಂಕ್ ವಿಲೀನದ ಲಾಭಕ್ಕೆ 2-3 ವರ್ಷ ಕಾಯಬೇಕು ಎಂದು ಎಸ್​ಬಿಐ ಮುಖ್ಯಸ್ಥ ರಜನೀಶ್ ಕುಮಾರ್ ಹೇಳಿದ್ದಾರೆ. ಎಸ್​ಬಿಐಯನ್ನು ದೊಡ್ಡ ಬ್ಯಾಂಕ್ ಮಾಡಲು ಸಾಧ್ಯವಿಲ್ಲ. ವಿಲೀನ ಪ್ರಕ್ರಿಯೆ ಗಂಟೆಗಳಲ್ಲಿ ಮುಗಿಯುವುದಿಲ್ಲ. 21 ಸಾರ್ವಜನಿಕ ಬ್ಯಾಂಕುಗಳ ಅಗತ್ಯ ಇಲ್ಲ ಎಂದು ಅವರು ಹೇಳಿದರು. ಅಲ್ಲದೇ, ನಾವು ಈಗಾಗಲೇ ಶೇ. 23ರಷ್ಟು ಷೇರು ಹೊಂದಿದ್ದೇವೆ. ಬೇರೆ ಯಾವುದೇ ಬ್ಯಾಂಕ್​ಗಳನ್ನು ವಿಲೀನಗೊಳಿಸುವುದಿಲ್ಲ ಎಂದು ಬ್ಯಾಂಕ್ ವಿಲೀನ ಕುರಿತು ಅವರು ಹೇಳಿಕೆ ನೀಡಿದರು. ಕೇಂದ್ರ ಸರ್ಕಾರ ದೇನಾ ಬ್ಯಾಂಕ್, ವಿಜಯಾ ಬ್ಯಾಂಕ್ ಮತ್ತು ಬ್ಯಾಂಕ್ ಆಫ್ ಬರೋಡಾ ಬ್ಯಾಂಕ್​ಗಳನ್ನು ವಿಲೀನಗೊಳಿಸುವ ಪ್ರಸ್ತಾವದ ಬೆನ್ನಲ್ಲೇ ಈ ಹೇಳಿಕೆ ಹೊರಬಂದಿರುವುದು ಕುತೂಹಲ ಕೆರಳಿಸಿದೆ.

0

Leave a Reply

Your email address will not be published. Required fields are marked *