ಗಂಗಾ ಉಳಿಸಿ ಹೋರಾಟಗಾರ ಸಾವಿನ ಕುರಿತು ಸಿಬಿಐ ತನಿಖೆಗೆ ಒತ್ತಾಯ

ಗಂಗಾ ಉಳಿಸಿ ಹೋರಾಟಗಾರ ಅಗರ್​ವಾಲ್ ಸಾವು ವಿಚಾರ
ಅಗರ್​ವಾಲ್ ಅವರದು ಸಾವಲ್ಲ ಕೊಲೆ ಎಂದ ಸಂನ್ಯಾಸಿಗಳು
ಅಗರ್​ವಾಲ್ ಸಾವಿನ ಕುರಿತು ಸಿಬಿಐ ತನಿಖೆಗೆ ಒತ್ತಾಯ

ಲಖ್ನೋ: ಪರಿಸರವಾದಿ ಮತ್ತು ಗಂಗಾನದಿ ಸ್ವಚ್ಛತೆಗಾಗಿ ಆಮರಣಾಂತ ಉಪವಾಸ ಸತ್ಯಾಗ್ರಹ ನಡೆಸುತ್ತಿದ್ದ ಹೋರಾಟಗಾರ ಜಿ.ಡಿ. ಅಗರ್​ವಾಲ್ ಅವರ ಸಾವಿನ ಕುರಿತು ಸಿಬಿಐ ತನಿಖೆ ನಡೆಸುವಂತೆ ಸಂನ್ಯಾಸಿಗಳು ಒತ್ತಾಯಿಸಿದ್ದಾರೆ. ಹಲವು ಬೇಡಿಕೆಗಳನ್ನು ಸರ್ಕಾರದ ಮುಂದಿಟ್ಟು ಉಪವಾಸ ನಡೆಸುತ್ತಿದ್ದ ಅಗರ್​ವಾಲ್ ನಿನ್ನೆ ಕಾಲವಶರಾಗಿದ್ದರು. ಆದರೆ, ಅವರದು ಸಹಜ ಸಾವಲ್ಲ, ಕೊಲೆಯಾಗಿರಬಹುದು ಎಂದು ಹಲವು ಸಂನ್ಯಾಸಿಗಳು ಸಂಶಯ ವ್ಯಕ್ತಪಡಿಸಿದ್ದು, ಸಾವಿನ ಕುರಿತು ಸಿಬಿಐ ತನಿಖೆ ನಡೆಸಬೇಕು ಎಂದು ಪಟ್ಟು ಹಿಡಿದಿದ್ದಾರೆ. ಉಪವಾಸ ಸತ್ಯಾಗ್ರಹ ನಡೆಸುತ್ತಿದ್ದ ಅಗರ್​ವಾಲ್ ಅವರನ್ನು ಉತ್ತರಪ್ರದೇಶ ಪೊಲೀಸರು ಬಲವಂತವಾಗಿ ಆಸ್ಪತ್ರೆಗೆ ದಾಖಲಿಸಿದ್ದರು.

ಈ ವೇಳೆ ಪ್ರತಿಕ್ರಿಯಿಸಿದ್ದ ಅವರು ಬಲವಂತವಾಗಿ ನನ್ನನ್ನು ಆಸ್ಪತ್ರೆಗೆ ದಾಖಲಿಸುತ್ತಿರುವುದು ನನ್ನ ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೆ ಧಕ್ಕೆ ಎಂದಿದ್ದರು. ಆದರೆ, ಅವರು ಆಸ್ಪತ್ರೆಯಲ್ಲೇ ಸಾವಿಗೀಡಾಗಿದ್ದರು. ಈ ಎಲ್ಲ ಬೆಳವಣಿಗೆಗಳ ಹಿನ್ನೆಲೆಯಲ್ಲಿ ಸಂನ್ಯಾಸಿಗಳು ಸಾವಿನ ಕುರಿತು ತನಿಖೆಗೆ ಆಗ್ರಹಿಸಿದ್ದಾರೆ.

ಮಾತೆ ಗಂಗೆಯ ಸುಪತ್ರ ಪ್ರೊ. ಜಿ.ಡಿ. ಅಗರ್​ವಾಲ್ ಇಲ್ಲವಾಗಿದ್ದಾರೆ. ಗಂಗೆಯನ್ನು ಉಳಿಸಲು ಅವರು ತಮ್ಮನ್ನೇ ಅರ್ಪಿಸಿದ್ದಾರೆ ಎಂದು ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಟ್ವೀಟ್ ಮಾಡಿದ್ದು, ಹಿಂದೂಸ್ಥಾನ ಗಂಗೆಯಂತಹ ನದಿಗಳನ್ನು ಸೃಷ್ಟಿಸಿದೆ. ಗಂಗೆಯನ್ನು ಉಳಿಸುವುದು ವಾಸ್ತವದಲ್ಲಿ ದೇಶ ಉಳಿಸಿದಂತೆ. ನಾವು ಅವರನ್ನು ಎಂದಿಗೂ ಮರೆಯುವುದಿಲ್ಲ. ನಾವು ಅವರ ಹೋರಾಟವನ್ನು ಮುಂದುವರೆಸುತ್ತೇವೆ ಎಂದು ಅಭಿಪ್ರಾಯಪಟ್ಟಿದ್ದಾರೆ.

ಪ್ರದೀಪ್ ಮಾಲ್ಗುಡಿ ನ್ಯಾಷನಲ್ ಡೆಸ್ಕ್ ಸುದ್ದಿ ಟಿವಿ

0

Leave a Reply

Your email address will not be published. Required fields are marked *