ಕನ್ನಡ ಚಿತ್ರರಂಗದ ಡ್ರೀಮ್​ ಗರ್ಲ್​…

ಕನ್ನಡ ಚಿತ್ರರಂಗದ ಡ್ರೀಮ್​ ಗರ್ಲ್​. ಫಸ್ಟ್​ ಮೂವಿಯಲ್ಲೇ ಸೂಪರ್​ ಅನಿಸಿಕೊಂಡ ಎಲ್ಲರ ಮನಸ್ಸನ್ನ ಕದ್ದ ಮನಸಾರೆ ಚೆಲುವೆ. ಐಟಂ ಡ್ಯಾನ್ಸ್​ಗಳಲ್ಲಿ ಎಲ್ಲರಿಗೂ ಚೋಕ್​ ಕೊಟ್ಟ ಈ ಬೆಡಗಿ ಈಗ ಮತ್ತೊಮ್ಮೆ ತನ್ನ ನೃತ್ಯದ ಹವಾ ತೋರಿಸಲು ಬರ್ತಿದ್ದಾಳೆ.ನವಿಲಿನಂತ ಕಣ್ಣುಗಳು, ಗಿಣಿಯಂತೆ ಪಟ ಪಟ ಮಾತಾಡುವ ಚೆಂದುಳ್ಳಿ ಚೆಲುವೆ. ಡ್ಯಾನ್ಸಲ್ಲೂ ಸೈ, ಆಕ್ಟಿಂಗ್​ನಲ್ಲೂ ಸೈ ಅನಿಸಿಕೊಂಡ ಈ ಬೆಡಗಿಯೇ ಐಂದ್ರಿತಾ ರೈ. ನವ ಪ್ರತಿಭೆಯಾಗಿ ಸ್ಯಾಂಡಲ್​ವುಡ್​ಗೆ ಎಂಟ್ರಿ ಕೊಟ್ಟ ಈ ನಟಿ ಮೆರವಣಿಗೆ ಚಿತ್ರದಲ್ಲೇ ಫುಲ್​ ಮಾರ್ಕ್ಸ್​ ತೆಗೆದುಕೊಂಡು, ಬೇಡಿಕೆಯ ಹೀರೊಯಿನ್​ ಅನಿಸಿಕೊಂಡ್ರು.

ಬೆಂಗಾಳಿ, ಕನ್ನಡ, ಬಾಲಿವುಡ್​ ಚಿತ್ರಗಳಲ್ಲೂ ತನ್ನ ನಟನೆಯ ಚಾತುರ್ಯವನ್ನು ತೋರಿಸ್ತಿರುವ ಆಂಡಿ, ಸದಾ ಹೊಸ ಹೊಸ ಪ್ರಯೋಗಾತ್ಮಕ ಚಿತ್ರಗಳಿಗೆ ಹೆಚ್ಚು ಆದ್ಯತೆ ಕೊಡ್ತಾರೆ. ಕೇವಲ ಸಿನಿಮಾ ಮಾತ್ರವಲ್ಲದೇ ಐಟಂ ಹಾಡುಗಳಲ್ಲಿಯೂ ಸೊಂಟ ಬಳುಕಿಸಿ ಪಡ್ಡೆ ಹುಡುಗರ ನಿದ್ದೆಗೆಡಿಸಿದ್ರು. ಇಂತಹ ಬ್ಯೂಟಿ ಈಗ ಮತ್ತೆ ಐಟಂ ಡ್ಯಾನ್ಸ್​ ಮಾಡೋಕೆ ಸಜ್ಜಾಗಿದ್ದಾರೆ. ಎಸ್​ ಈ ಮಿಲ್ಕಿ ಬ್ಯೂಟಿ ‘ಪ್ರೇಮ್​ ಅಡ್ಡ’ ಚಿತ್ರದಲ್ಲಿ ಬಸಂತಿ ನಾಚ್​ ಅಂತ ಡ್ಯಾನ್ಸ್​ ಮಾಡಿದ್ದೇ ತಡ ಆಂಡಿಗೆ ಹೆಚ್ಚು ಬುಲಾವ್​ ಬಂದಿದ್ದೇ ಐಟಂ ಹಾಡುಗಳಿಗೆ. ಕಡ್ಡಿ ಪುಡಿ ಚಿತ್ರದಲ್ಲಿ ‘ಸೌಂದರ್ಯ ಸಮರ’, ಶಾರ್ಪ್​ ಶೂಟರ್​ ಚಿತ್ರದ ‘ಕುಂಟ ಬಿಲ್ಲೇ’ , ಜಾನ್​ ಜಾನಿ ಜನಾರ್ಧನ್​ ಸಿನಿಮಾದ ‘ಪ್ರೀತಿಯ ಪಾರಿವಾಳ’ ಹೀಗೆ ಸಾಕಷ್ಟು ಹಾಡುಗಳಲ್ಲಿ ಕಾಣಿದು ಕುಪ್ಪಳಿಸಿದ್ರು. ಈಗ ಈಕೆಗೆ ಮತ್ತೊಂದು ಅವಕಾಶ ಸಿಕ್ಕಿದೆ. ಅದೇ ಶರಣ್​ ಅಭಿನಯದ ರಾಂಬೋ 2

ಶರಣ್​ ಹಾಗೂ ಆಶಿಕಾ ರಂಗನಾಥ್​ ಅಭಿನಯದ ‘ರಾಂಬೋ 2’ ಚಿತ್ರದ ಹಾಡುಗಳು ಈಗಾಗ್ಲೇ ಭರ್ಜರಿ ಹಿಟ್​ ಆಗಿವೆ. ಯೂಟ್ಯೂಬ್​ನಲ್ಲೊಂತು ಸಿಕ್ಕಾಪಟ್ಟೆ ಟ್ರೆಂಡ್​ ಕ್ರಿಯೇಟ್​ ಮಾಡ್ತಿದ್ದು, ಪವರ್​ ಸ್ಟಾರ್​ ಪುನೀತ್​ ರಾಜ್​ಕುಮಾರ್​ ಕೂಡ ಒಂದು ಹಾಡನ್ನ ಹಾಡ್ತಿದ್ದಾರೆ. ಇದ್ರೊಂದಿಗೆ ಐಂದ್ರಿತಾ ರೈ ಈಗ ಧಮ್​ ಮಾರೋ ಧಂ ಅನ್ನೋ ಹಾಡಿಗೆ ಹೆಜ್ಜೆ ಹಾಕ್ತಿರೋದು ವಿಶೇಷ.. ಅಲ್ಲಿಗೆ ರಾಂಬೋ 2 ಸಿನಿಮಾದ ಹಾಡುಗಳು ಸ್ಟಾರ್ಸ್​ಗಳ ಸಾಥ್​ನಿಂದ ಇನ್ನಷ್ಟು ಕಲರ್​ಫುಲ್​ ಆಗಿದೆ.ಇಂಟರೆಸ್ಟಿಂಗ್​ ಅಂದ್ರೆ ನಟ ಹಾಗೂ ಕಲಾ ನಿರ್ದೇಶಕ ಅರುಣ್ ಸಾಗರ್ ಅವರ ಪುತ್ರಿ ಅದಿತಿ ಹಾಡಿರುವ ಹಾಡೇ ಈ ‘ಧಂ​ ಮಾರೋ ಧಂ’. ಸದ್ಯ ಆಂಡಿ ಸ್ಟೆಪ್ಸ್​ ಹಾಕಿರುವ ಐಟಂ ಹಾಡುಗಳೆಲ್ಲ ಸೂಪರ್​ ಹಿಟ್​ ಆಗಿವೆ. ಇದೀಗ ರಾಂಬೋ 2 ಚಿತ್ರದ ಈ ಹಾಡು ಪ್ರೇಕ್ಷಕರಿಗೆ ಎಷ್ಟರ ಮಟ್ಟಿಗೆ ಕಿಕ್​ ಕೊಡಲಿದೆ ಎನ್ನುವುದಕ್ಕೆ ವಿಡಿಯೋ ಸಾಂಗ್​ ರಿಲೀಸ್​ ಆದಮೇಲೆ ಗೊತ್ತಾಗುತ್ತದೆ.

ರೆನಿಟ ಮೆಂಡೋನ್ಸಾ ಫಿಲ್ಮ್​ ಬ್ಯೂರೊ ಸುದ್ದಿಟಿವಿ

0

Leave a Reply

Your email address will not be published. Required fields are marked *