ಜನಮತಗಣನೆಯಲ್ಲಿ ಸಲಿಂಗ ವಿವಾಹದ ಪರ ನಿಂತ ಆಸ್ಟ್ರೇಲಿಯನ್ನರು

ಸಲಿಂಗ ವಿವಾಹಕ್ಕೆ ಜೈ ಎಂದ ಆಸ್ಟ್ರೇಲಿಯನ್ನರು
ಸಾಂಪ್ರದಾಯಿಕ ತಿಳಿವಳಿಕೆ ಕೈಬಿಟ್ಟ ಕಾಂಗರೂ ನಾಡು

ಮೆಲ್ಬೋರ್ನ್​: ಸಾಮಾನ್ಯವಾಗಿ ಸಲಿಂಗ ಸಹವಾಸ ಅಂದ್ರೆ ಮೂಗು ಮುರಿಯೋರ ಸಂಖ್ಯೆಯೇ ಹೆಚ್ಚು. ಆದರೆ, ಆಸ್ಟ್ರೇಲಿಯಾದ ನಾಗರಿಕರು ಸಲಿಂಗ ವಿವಾಹದ ಪರವಾಗಿ ಐತಿಹಾಸಿಕ ನಿರ್ಧಾರ ಕೈಗೊಂಡಿದಾರೆ. ಸಲಿಂಗ ವಿವಾಹವನ್ನು ಕಾನೂನುಬದ್ಧಗೊಳಿಸೋಕೆ ಅನುಮತಿಯನ್ನೂ ನೀಡಿದ್ದಾರೆ. ಈ ಮೂಲಕ ಆಸ್ಟ್ರೇಲಿಯನ್ನರು ಸಾಂಪ್ರದಾಯಿಕತೆಗಳಿಗೆ ದೊಡ್ಡ ಸಲಾಂ ಹೊಡೆದಿದ್ದಾರೆ.

ಸಲಿಂಗ ವಿವಾಹವನ್ನು ಕಾನೂನುಬದ್ಧಗೊಳಿಸುವ ಪರವಾಗಿ ಆಸ್ಟ್ರೇಲಿಯನ್ನರು ಅಭೂತಪೂರ್ವ ಬೆಂಬಲ ವ್ಯಕ್ತಪಡಿಸಿದ್ದಾರೆ. ಪ್ರಧಾನಿ ಮಾಲ್ಕಂ ಟರ್ನ್​ಬುಲ್​​​ ನಡೆಸಿದ ಜನಮತಗಣನೆಯಲ್ಲಿ ಸಲಿಂಗಕಾಮಕ್ಕೆ ಬೆಂಬಲ ವ್ಯಕ್ತವಾಗಿದೆ. ಆಸ್ಟೇಲಿಯಾದ ಸಾಂಖ್ಯಿಕ ಬ್ಯೂರೋ ನಡೆಸಿದ ಅಂಚೆ ಸಮೀಕ್ಷೆಯಲ್ಲಿ ಸಲಿಂಗ ವಿವಾಹಕ್ಕೆ ಶೇ. 61.6ರಷ್ಟು ಜನ ಸಮಹತ ಸೂಚಿಸಿದ್ದು, ಶೇ.38.4ರಷ್ಟು ಜನ ವಿರುದ್ಧ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಪ್ರಧಾನಿ ಟರ್ನ್​​ಬುಲ್ ಅವರು ಸ್ವತಃ ಸಲಿಂಗಿಗಳ ವಿವಾಹದ ಪರವಾಗಿದ್ದರು. ಅವರು ನೀಡಿದ್ದ ಕರೆಗೆ ಓಗೊಟ್ಟಿರುವ ಆಸ್ಟ್ರೇಲಿಯನ್ನರು ಕಾನೂನು ತಿದ್ದುಪಡಿ ತರುವ ದಾರಿಯನ್ನು ಸುಗಮಗೊಳಿಸಿದ್ದಾರೆ. ಇನ್ನು ಕ್ರಿಸ್​​ಮಸ್​​ಗೂ ಮುನ್ನವೇ ಈ ಸಂಬಂಧ ಕಾನೂನು ತಿದ್ದುಪಡಿಗೆ ಟರ್ನ್​​ಬುಲ್ ಮುಂದಾಗುವ ಸಾಧ್ಯತೆ ಇದೆ. ಜನಾಭಿಪ್ರಾಯದ ಕುರಿತು ಸಂಸತ ವ್ಯಕ್ತಪಡಿಸಿರುವ ಅವರು, ಜನ ತಮ್ಮ ನಿರ್ಧಾರ ತಿಳಿಸಿದ್ದಾರೆ. ಈಗ ಕೆಲಸ ಮಾಡುವುದು ನಮ್ಮ ಸರದಿ ಎಂದು ಅವರು ಹೇಳಿದ್ದಾರೆ. ಈ ಮೂಲಕ ಉದ್ದೇಶಿತ ತಿದ್ದಪಡಿ ನಡೆಸುವ ಸೂಚನೆಯನ್ನೂ ನೀಡಿದ್ದಾರೆ

ಸಲಿಂಗ ವಿವಾಹ ವಿಷಯಕ್ಕೆ ಸಂಬಂಧಿಸಿದಂತೆ ಜನರಮ ಅಭಿಪ್ರಾಯಗಳನ್ನು ನಾನು ಗೌರವಿಸುತ್ತೇನೆ ಎಂದಿರುವ ಅವರು, ಸಲಿಂಗ ವಿವಾಹದ ಕುರಿತು ನಿಃಸ್ಸಂದಿಗ್ದವಾಗಿ ಅಭೂತಪೂರ್ವವಾದ ನಿಲುವನ್ನು ಜನ ತಿಳಿಸಿದ್ದಾರೆ. ಪ್ರತಿ ರಾಜ್ಯ ಮತ್ತು ಪ್ರಾಂತ್ಯಗಳಲ್ಲೂ ಶೇ. 60ಕ್ಕಿಂತ ಹೆಚ್ಚು ಜನರಿಂದ ಬೆಂಬಲ ವ್ಯಕ್ತವಾಗಿದೆ. ಸೌಥ್ ವೇಲ್ಸ್​​ನಲ್ಲಿ ಮಾತ್ರ ಶೇ. 57.8ರಷ್ಟು ಬೆಂಬಲ ವ್ಯಕ್ತವಾಗಿದೆ ಎಂದಿದ್ದಾರೆ.

ಸಮೀಕ್ಷೆಯಲ್ಲಿ 12.7 ಲಕ್ಷ ನಾಗರಿಕರು ಭಾಗವಹಿಸಿದ್ದರು. ಇವರ ಪೈಕಿ 7,8 ಲಕ್ಷ ಜನ ಪರವಾಗಿ, 4.9 ಲಕ್ಷ ಜನ ವಿರುದ್ಧ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಸಂಸತ್ತಿನಲ್ಲಿ ಶೀಘ್ರವಾಗಿ ಸಲಿಂಗ ವಿವಾಹವನ್ನು ಕಾನೂನುಬದ್ಧಗೊಳಿಸುವ ಕುರಿತು ಚರ್ಚೆ ನಡೆಯಲಿದೆ. ಇನ್ನು ಈ ಸಂಬಂಧ ಕೆಲವು ಸಂಸದರು ರಾಜ್ಯಸಭೆಯಲ್ಲಿ ಖಾಸಗಿ ಮಸೂದೆಯನ್ನು ಮಂಡಿಸುವ ಸಾಧ್ಯತೆ ಕೂಡ ಇದೆ.

ಲಕ್ಷಾಂತರ ಆಸ್ಟ್ರೇಲಿಯನ್ನರು ತಮ್ಮ ಸ್ವಂತ ಕುಟುಂಬ, ನೆರೆಹೊರೆಯವರು, ಸಂಘಟನೆಗಳೆಲ್ಲರ ಬೆಂಬಲದಿಂದ ಸಲಿಂಗ ವಿವಾಹದ ಪರವಾಗಿ ಜನಬೆಂಬಲ ವ್ಯಕ್ತವಾಗಿದೆ ಎಂದು ಸಲಿಂಗ ವಿವಾಹದ ಸಂಬಂಧ ಹೋರಾಟವನ್ನು ಸಂಘಟಿಸಿದ ಸಂಘಟನೆಯ ವಕ್ತಾರ ಅಲೆಕ್ಸ್ ಗ್ರೀನ್​ವಿಚ್​​ ಹೇಳಿದ್ದಾರೆ. ಇನ್ನು ಈ ಸಂಬಂಧ ಸಂಸತ್ತಿನಲ್ಲಿ ತಿದ್ದುಪಡಿ ತರಬೇಕಿದೆ. ಈ ವರ್ಷವೇ ತಿದ್ದುಪಡಿ ಜಾರಿಯಾಗಲಿದೆ ಎಂಬ ವಿಶ್ವಾಸವನ್ನೂ ಅವರು ವ್ಯಕ್ತಪಡಿಸಿದರು.

ವಿಶ್ವ ಸಂಸ್ಥೆಯ ಮಾನವ ಹಕ್ಕು ಸಮಿತಿ ಕಳೆದ ವಾರ ಸಲಿಂಗಿಗಳ ವಿವಾಹಕ್ಕೆ ಸಮ್ಮತಿ ನೀಡುವ ಕುರಿತು ಅಸಮಾಧಾನ ವ್ಯಕ್ತಪಡಿಸಿತ್ತು. ಅಲ್ಲದೇ, ಸಾರ್ವಜನಿಕವಾಗಿ ಅಭಿಪ್ರಾಯ ಸಂಗ್ರಹಿಸುವ ಮೂಲಕ ಅನವಶ್ಯಕ ಮತ್ತು ವಿಭಜಿಸುವ ಕಾರ್ಯ ನಡೆಯುತ್ತಿದೆ ಎಂದು ಆರೋಪಿಸಿತ್ತು. ಜೊತೆಗೆ ಸಮೀಕ್ಷೆಯನ್ನು ಲೆಕ್ಕಿಸದೆ ಕಾನೂನು ರೂಪಿಸುವಂತೆ ಸೂಚಿಸಿತ್ತು.

ಸಮೀಕ್ಷೆಯಲ್ಲಿ ಸಲಿಂಗ ವಿವಾಹದ ಪರವಾಗಿ ಫಲಿತಾಂಶ ಬಂದ ಹಿನ್ನೆಲೆಯಲ್ಲಿ ಸಲಿಂಗ ವಿವಾಹದ ಬೆಂಬಲಿಗರು ಬೀದಿಗಳಲ್ಲಿ ಕುಣಿದು ಕುಪ್ಪಳಿಸಿದರು. ಆದರೆ, ಇನ್ನೊಂದು ವಿಚಿತ್ರ ಸಂಗತಿ ಅಂದ್ರೆ, ಈಗಲೇ ಕಡಿಮೆ ಜನಸಂಖ್ಯೆ ಹೊಂದಿರುವ ಆಸ್ಟ್ರೇಲಿಯಾದ ಭವಿಷ್ಯ ಏನಪ್ಪಾ ಅನ್ನೋ ಪ್ರಶ್ನೆ ಸದ್ಯಕ್ಕೆ ಎದುರಾಗಿದೆ.

ಪ್ರದೀಪ್ ಮಾಲ್ಗುಡಿ ನ್ಯಾಷನಲ್ ಡೆಸ್ಕ್ ಸುದ್ದಿ ಟಿವಿ

0

Leave a Reply

Your email address will not be published. Required fields are marked *