ವಿವಾದಾತ್ಮಾಕ ಹೇಳಿಕೆ ನೀಡಿದ ಸಾಕ್ಷಿ ಮಹಾರಾಜ್​

ಸದಾ ವಿವಾದಾತ್ಮಕ ಹೇಳಿಕೆಯಿಂದಲೇ ಸುದ್ದಿಯಾಗುತ್ತಿರುವ ಬಿಜೆಪಿ ಸಂಸದ ಸಾಕ್ಷಿ ಮಹಾರಾಜ್​ ಈಗ ಮತ್ತೊಮ್ಮೆ ಸುದ್ದಿಯಲ್ಲಿದ್ದಾರೆ.. ಇತ್ತೀಚೆಗಷ್ಟೆ ಸುಪ್ರೀಂಕೋರ್ಟ್,  ಮತಯಾಚನೆ ವೇಳೆ ಯಾವುದೇ ಧರ್ಮದ ಆಧಾರಿತವಾಗಬಾರದು ಅಂತ ಮಹತ್ವದ ಆದೇಶವನ್ನು ನೀಡಿತ್ತು.. ಇದ್ರ ಬೆನ್ನಲ್ಲೇ ಸಾಕ್ಷಿ ಮಹಾರಾಜ್,​​ ಕೆಲವರು 4 ಮದುವೆಯಾಗಿ 40 ಮಕ್ಕಳನ್ನು ಮಾಡಿಕೊಳ್ಳುತ್ತಿದ್ದಾರೆ.. ಇವರಿಂದ ಜನಸಂಖ್ಯೆ ಹೆಚ್ಚಾಗುತ್ತಿದೆಯೇ ಹೊರತು ಹಿಂದುಗಳಿಂದಲ್ಲಾ ಅಂತ ಸಾಕ್ಷಿ ಮಹಾರಾಜ್​​ ಹೇಳಿದ್ರು.. ಇದು ವಿವಾದಕ್ಕೆ ಕಾರಣವಾಗುತ್ತಿದ್ದಂತೆ ನಾನು ತಪ್ಪು ಮಾಡಿದ್ರೆ ಕ್ರಮ ಕೈಗೊಳ್ಳಿ ಅಂತ ಹೇಳಿದ್ದಾರೆ.. ಇನ್ನು ಉತ್ತರ ಪ್ರದೇಶದ ಕಾಂಗ್ರೆಸ್​ ನಾಯಕ ಅಖಿಲೇಶ್​​ ಸಿಂಗ್​ ಪ್ರತಿಕ್ರಿಯಿಸಿದ್ದು, ಸಾಕ್ಷಿ ಮಹಾರಾಜ್​ ಕೋಮುಗಲಭೆಯನ್ನು ಸೃಷ್ಟಿಸುತ್ತಿದ್ದಾರೆ.. ಇಂತವರನ್ನು ಬಿಜೆಪಿ ಹಾಗೂ ಸಂಸತ್​ ಉಚ್ಛಾಟಿಸಬೇಕು ಅಂತ ಆಗ್ರಹಿಸಿದ್ದಾರೆ

0

Leave a Reply

Your email address will not be published. Required fields are marked *