ದೇಗುಲ ಪ್ರವೇಶಿಸುವ ಮಹಿಳೆಯರಿಗೆ ನಟ ಕೊಲ್ಲಂ ತುಳಸಿ ಕೊಡುವ ಶಿಕ್ಷೆ ಏನು?

ತಿರುವನಂತಪುರ: ಶಬರಿಮಲೆ ದೇಗುಲಕ್ಕೆ ಮಹಿಳೆಯರ ಪ್ರವೇಶಕ್ಕೆ ಇದ್ದ ನಿರ್ಬಂಧವನ್ನು ಸುಪ್ರೀಂ ಕೋರ್ಟ್ ತೆರವುಗೊಳಿಸಿದ ನಂತರ ಕೇರಳದಲ್ಲಿ ವಿವಾದಾತ್ಮಕ, ಪ್ರಚೋದನಕಾರಿ ಹೇಳಿಕೆ ನೀಡುವುದು, ನಡವಳಿಕೆ ಮುಂದುವರೆದಿದೆ. ನಿನ್ನೆ ಸುಪ್ರೀಂ ಕೋರ್ಟ್ ಮತ್ತು ಕೇರಳ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದ ನಟ ಕೊಲ್ಲಂ ತುಳಸಿ, ಶಬರಿಮಲೆಯ ಅಯ್ಯಪ್ಪ ಸ್ವಾಮಿ ದೇಗುಲ ಪ್ರವೇಶಿಸುವ ಮಹಿಳೆಯರ ದೇಹ ಕತ್ತರಿಸಬೇಕು ಎಂದಿದ್ದರು. ಅಲ್ಲದೇ, ಅರ್ಧ ದೇಹವನ್ನು ದೆಹಲಿಗೆ, ಇನ್ನರ್ಧ ದೇಹವನ್ನು ಸಿಎಂ ಕಚೇರಿಗೆ ಕಳಿಸಬೇಕು ಎಂದು ಅವರು ಪ್ರಚೋದನಕಾರಿ ಹೇಳಿಕೆ ನೀಡಿದ್ದರು. ಈ ಹಿನ್ನೆಲೆಯಲ್ಲಿ ಪೊಲೀಸರು ಕೊಲ್ಲಂ ವಿರುದ್ಧ ದೂರು ದಾಖಲಿಸಿದ್ದಾರೆ.

0

Leave a Reply

Your email address will not be published. Required fields are marked *