ಮೂರು ತಿಂಗಳಲ್ಲೇ ಪಾತಾಳಕ್ಕೆ ಕುಸಿದ ರೂಪಾಯಿ ದರ

ಮುಂಬೈ: ಕಳೆದ ಮೂರು ತಿಂಗಳ ಅವಧಿಯಲ್ಲಿ ಇದೇ ಮೊಟ್ಟ ಮೊದಲ ಬಾರಿ ರೂಪಾಯಿ ದರ ಪಾತಾಳಕ್ಕೆ ಕುಸಿದಿದ್ದು, ಅಮೆರಿಕನ್ ಡಾಲರ್ ಎದುರು ಬೆಲೆ 65.25ಕ್ಕೆ ಏರಿಕೆಯಾಗಿದೆ. ಇಂದು ಒಂದೇ ದಿನದಲ್ಲಿ 0.36 ಪೈಸೆಯಷ್ಟು ಡಾಲರ್ ಬೆಲೆ ಏರಿಕೆಯಾಗಿದೆ. ಈ ಕುರಿತು ಪ್ರತಿಕ್ರಿಯಿಸಿರುವ ಫೋರೆಕ್ಸ್ ಡಾಲರ್ ವಹಿವಾಟು ಕಂಪನಿ, ತಿಂಗಳಾಂತ್ಯದಲ್ಲಿ ಅಮೆರಿಕನ್ ಕರೆನ್ಸಿ ಮತ್ತು ವಿದೇಶ ಹಣಕ್ಕೆ ಬೇಡಿಕೆ ಹೆಚ್ಚುತ್ತದೆ ಎಂದಿದೆ. ಇಂದು ಮುಂಜಾನೆಯಿಂದಲೇ ಸೆನ್ಸೆಕ್ಸ್ ಮತ್ತು ನಿಫ್ಟಿಯಲ್ಲಿ ಇಳಿಕೆ ಕಂಡು ಬಂದಿದೆ. ಚಿನ್ನದ ಬೆಲೆಯಲ್ಲಿ ಕೂಡ ಏರಿಕೆಯಾಗಿದೆ. ಮಧ್ಯಾಹ್ನದ ಹೊತ್ತಿಗೆ ಸೆನ್ಸೆಕ್ಸ್​​ 162.35 ಅಂಶ ಮತ್ತು ಸೆನ್ಸೆಕ್ಸ್ 61.45 ಅಂಶ ಕುಸಿದಿದೆ. ಈ ಮೂಲಕ ದೇಶೀ ಹೂಡಿಕೆದಾರರಿಗೆ ನಷ್ಟವಾಗಿದೆ.

ಷೇರು ಮಾರುಕಟ್ಟೆ ಸೂಚ್ಯಂಕ

ಸೆನ್ಸೆಕ್ಸ್​​: 34,184: – 162.35
ನಿಫ್ಟಿ 50: 10,492: – 61.45
ಚಿನ್ನ: 30,410: + 115.00
ಡಾಲರ್ – ರೂ. ದರ: 65.25: +0.36

0

Leave a Reply

Your email address will not be published. Required fields are marked *