ಐಪಿಎಸ್ ಅಸೋಸಿಯೇಷನ್​​ನಿಂದ ಸಿಎಸ್‌ಗೆ ಪತ್ರ ಬರೆದ ವಿಚಾರ…

ಐಪಿಎಸ್ ಅಸೋಸಿಯೇಷನ್ ಅಧ್ಯಕ್ಷ, ಎಡಿಜಿಪಿ ಆರ್.ಪಿ.ಶರ್ಮಾ ಸಿಎಸ್​ಗೆ ಪತ್ರ ಬರೆದ ಪ್ರಕರಣವನ್ನು ರಾಜ್ಯ ಸರಕಾರ ಗಂಭೀರವಾಗಿ ಪರಿಗಣಿಸಿದೆ. ರಾಜ್ಯ ಸರಕಾರ ಆರ್.ಪಿ.ಶರ್ಮ ವಿರುದ್ಧ ಕ್ರಮಕ್ಕೆ ಮುಂದಾಗಿದ್ದು, ಕಾನೂನಾತ್ಮಕವಾಗಿ ಯಾವ ರೀತಿ ಕ್ರಮ ಕೈಗೊಳ್ಳಲು ಸಾಧ್ಯ ಎಂಬುದರ ಪರಾಮರ್ಶೆ ನಡೆಸುತ್ತಿದೆ. ಈ ನಿಟ್ಟಿನಲ್ಲಿ ಕೇಂದ್ರ ಲೋಕಸೇವ ಆಯೋಗಕ್ಕೂ ಪತ್ರ ಬರೆಯಲು ಸರಕಾರ ನಿರ್ಧರಿಸಿದೆ..ಸರಕಾರದ ಮುಖ್ಯಕಾರ್ಯದರ್ಶಿಯವರಿಗೆ ಪತ್ರ ಬರೆದ ಎಡಿಜಿಪಿ ಆರ್.ಪಿ.ಶರ್ಮಾ ವಿರುದ್ಧ ಕ್ರಮಕ್ಕೆ ರಾಜ್ಯ ಸರಕಾರ ಮುಂದಾಗಿದೆ. ಹೀಗಾಗಿ ಇವತ್ತು ಸಿಎಂ ಸಿದ್ದರಾಮಯ್ಯ ಹಾಗೂ ಗೃಹ ಸಚಿವ ರಾಮಲಿಂಗಾರೆಡ್ಡಿ ಉನ್ನತ ಅಧಿಕಾರಿಗಳ ಸಭೆ ನಡೆಸಿದರು. ಸಿಎಂ ನಿವಾಸ ಕಾವೇರಿ ನಿವಾಸದಲ್ಲಿ ಇಂದು ಬೆಳಗ್ಗೆ ಸಿಎಂ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಗೃಹ ಸಚಿವ ರಾಮಲಿಂಗಾರೆಡ್ಡಿ, ಮುಖ್ಯ ಕಾರ್ಯದರ್ಶಿ ಕೆ.ರತ್ನಪ್ರಭಾ, ರಾಜ್ಯ ಪೊಲೀಸ್ ಮಹಾ ನಿರ್ದೇಶಕಿ ನೀಲಮಣಿ ರಾಜು ಭಾಗಿಯಾಗಿದ್ರು. ಈ ವೇಳೆ ಸಿಎಂ ಸಿದ್ದರಾಮಯ್ಯ, ಎಡಿಜಿಪಿ ಆರ್.ಪಿ.ಶರ್ಮಾ ವಿರುದ್ಧ ಕೇಂದ್ರ ಲೋಕಸೇವಾಯೋಗಕ್ಕೆ ಪತ್ರ ಬರೆಯುವಂತೆ ಮುಖ್ಯಕಾರ್ಯದರ್ಶಿ ಕೆ.ರತ್ನಪ್ರಭಾರಿಗೆ ಸೂಚಿಸಿದರು ಎನ್ನಲಾಗಿದೆ. ಸೇವಾ ನಿಯಮಗಳು ಹಾಗೂ ಶಿಸ್ತು ಉಲ್ಲಂಘನೆ ಆರೋಪದಲ್ಲಿ ಕ್ರಮ ಕೈಗೊಳ್ಳುವಂತೆ ಯುಪಿಎಸ್​ಸಿಗೆ ಪತ್ರ ಬರೆಯಬೇಕೆಂದು ಸಿಎಂ ಸೂಚನೆ ನೀಡಿದ್ದಾರೆ..

ಇನ್ನು ಎಡಿಜಿಪಿ ಆರ್.ಪಿ.ಶರ್ಮಾರಿಗೆ ಈಗಾಗಲೇ ನಿನ್ನೆಯ ಸಂಜೆ ಮುಖ್ಯಕಾರ್ಯದರ್ಶಿ ಕೆ.ರತ್ನಪ್ರಭಾ ಪತ್ರಕ್ಕೆ ವಿವರಣೆ ಕೇಳಿ ನೊಟೀಸ್ ನೀಡಿದ್ದಾರೆ. ಮುಖ್ಯಕಾರ್ಯದರ್ಶಿಯವರ ನೋಟಿಸ್​ಗೆ ಎಡಿಜಿಪಿ ಆರ್.ಪಿ.ಶರ್ಮಾ ನಾಳೆ ಬೆಳಗ್ಗೆ ಸ್ಪಷ್ಟೀಕರಣ ನೀಡುವ ಸಾಧ್ಯತೆ ಇದೆ. ಆರ್.ಪಿ.ಶರ್ಮಾರವರ ಸ್ಪಷ್ಟನೆ ಬಂದ ಬಳಿಕ ಯುಪಿಎಸ್​ಸಿಗೆ ಪತ್ರ ಬರೆಯಲು ಮುಖ್ಯಕಾರ್ಯದರ್ಶಿಯವ್ರು ನಿರ್ಧರಿಸಿದ್ದಾರೆ ಎನ್ನಲಾಗಿದೆ. ಆರ್.ಪಿ.ಶರ್ಮಾರವರ ಉತ್ತರ ಸಮಾಧಾನಕರವಾಗಿಲ್ಲದಿದ್ರೆ ಯುಪಿಎಸ್​ಸಿಗೆ ಸರಕಾರದಿಂದ ಪತ್ರ ಕಳಿಸಲಾಗುತ್ತದೆ..ಒಟ್ಟಿನಲ್ಲಿ ಎಡಿಜಿಪಿ ಆರ್.ಪಿ.ಶರ್ಮಾ ಮುಖ್ಯಕಾರ್ಯದರ್ಶಿಯವರಿಗೆ ಬರೆದ ಪತ್ರ ರಾಜ್ಯದಲ್ಲಿ ಸಂಚಲನ ಹುಟ್ಟಿಸಿರುವುದಂತೂ ಹೌದು. ಪ್ರರಕಣದ ಮುಂದಿನ ಬೆಳವಣಿಗೆಗಳು ಕುತೂಹಲ ಹುಟ್ಟಿಸಿವೆ..

ಪೊಲಿಟಿಕಲ್ ಬ್ಯೂರೋ, ಸುದ್ದಿ ಟಿವಿ, ಬೆಂಗಳೂರು.

0

Leave a Reply

Your email address will not be published. Required fields are marked *