ಯೋ-ಯೋ ಟೆಸ್ಟ್​ನಲ್ಲಿ ಹಿಟ್​ಮ್ಯಾನ್​ ಪಾಸ್​

ಟೀಮ್​ ಇಂಡಿಯಾದ ಆರಂಭಿಕ ಆಟಗಾರ ರೋಹಿತ್​ ಶರ್ಮಾ ಯೋ-ಯೋ ಫಿಟ್​​ನೆಸ್​ ಟೆಸ್ಟ್​ನಲ್ಲಿ ಪಾಸಾಗಿದ್ದಾರೆ. ನಿನ್ನೆ ಬೆಂಗಳೂರಿನಲ್ಲಿ ನಡೆದ ಫಿಟ್​​ನೆಸ್​ ಟೆಸ್ಟ್​ನಲ್ಲಿ ಭಾಗವಹಿಸಿದ್ದ ರೋಹಿತ್​ ತಮ್ಮ ದೈಹಿಕ ಕ್ಷಮತೆಯನ್ನ ಸಾಬೀತುಪಡಿಸಿದ್ದಾರೆ. ರೋಹಿತ್​ ಇದಕ್ಕೂ ಮೊದಲೆ ಯೋ-ಯೋ ಟೆಸ್ಟ್​ಗೆ ಒಳಗಾಗಬೇಕಿತ್ತು. ಆದ್ರೆ ವಿದೇಶ ಪ್ರವಾಸದಲ್ಲಿದ್ದರಿಂದ ರೋಹಿತ್​ಗೆ ಇದು ಸಾಧ್ಯವಾಗಿರಲಿಲ್ಲ. ಫಿಟ್​ನೆಸ್ ಟೆಸ್ಟ್​ ಪಾಸಾದ ಬಳಿಕ ರೋಹಿತ್​ ಕೆಲ ಮಾಧ್ಯಮಗಳ ಮೇಲೆ ಹರಿಹಾಯ್ದಿದ್ದಾರೆ. ರೋಹಿತ್ ಶರ್ಮಾ ಭಾನುವಾರವೇ ಯೋ-ಯೋ ಟೆಸ್ಟ್‌ನಲ್ಲಿ ಭಾಗಿಯಾಗಿ ಅದರಲ್ಲಿ ವಿಫಲರಾಗಿದ್ದರು ಎಂದು ಕೆಲ ಮಾಧ್ಯಮಗಳು ವರದಿ ಮಾಡಿದ್ದವು. ಇದರ ವಿರುದ್ಧ ರೋಹಿತ್ ಟ್ವಿಟರ್‌ನಲ್ಲಿ ಕಿಡಿ ಕಾರಿದ್ದಾರೆ. ನಾನು ಎಲ್ಲಿ, ಹೇಗೆ ಸಮಯ ಕಳೆಯುತ್ತೇನೆ ಎಂಬುದು ನಿಮಗೆ ಸಂಬಂಧ ಪಡದ ವಿಚಾರ. ನಿಜವಾದ ಸುದ್ದಿಗಳ ಬಗ್ಗೆ ಚರ್ಚೆ ನಡೆಸಿ ಸುಳ್ಳು ಸುದ್ದಿಗಳನ್ನ ಹಬ್ಬಿಸಬೇಡಿ ಎಂದು ತಮ್ಮ ಟ್ವಿಟರ್​ ಅಕೌಂಟಿನಲ್ಲಿ ಮಾಧ್ಯಮಗಳ ವಿರುದ್ಧ ಪೋಸ್ಟ್ ಹಾಕಿದ್ದಾರೆ.

0

Leave a Reply

Your email address will not be published. Required fields are marked *